nakali 2

 

 

ತನ್ನನ್ನು ಐಎಎಸ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಹಲವರಿಗೆ ವಂಚಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಗ್ಯ ಇಲಾಖೆಯ ಉಸ್ತುವಾರಿ ಎಂದು ನಕಲಿ ಗುರುತಿನ ಚೀಟಿ ತೋರಿಸಿ ನಂಬಿಸಿದ್ದ ಈತ, ಔಷಧ ಸರಬರಾಜು ಆದೇಶ ಕೊಡಿಸುವುದಾಗಿ ಹಣ ಪಡೆದಿದ್ದ.

ಚಿಕ್ಕಮಗಳೂರ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಅವರೂ ಸಹ ಈತನ ನಕಲಿ ಐಡಿ ನಂಬಿ ಮೋಸ ಹೋಗಿರುವುದಾಗಿ ತಿಳಿಸಿದ್ದಾರೆ. ಮೆಡಿಕಲ್ ಶಾಪ್ ಮಾಲೀಕ ಸತೀಶ್ ನೀಡಿದ ದೂರಿನ ಆಧಾರದ ಮೇಲೆ ಈ ನಕಲಿ ಅಧಿಕಾರಿಯ ವಂಚನೆ ಜಾಲ ಬಯಲಾಗಿದೆ.

ಚಿಕ್ಕಮಗಳೂರಿನಲ್ಲಿ ಐಎಎಸ್ ಅಧಿಕಾರಿಯ ಸೋಗಿನಲ್ಲಿ ಹಲವರನ್ನು ವಂಚಿಸಿದ್ದ ಮಿಥುನ್ ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಕೆಲಸ ಮಾಡುತ್ತೇನೆ ಎಂದು ಎಲ್ಲರನ್ನೂ ನಂಬಿಸುವಲ್ಲಿ ಯಶಸ್ವಿಯಾಗಿದ್ದ. ಚಿಕ್ಕಮಗಳೂರು ಜಿಲ್ಲಾ ಸರ್ಜನ್ ಸೇರಿದಂತೆ ಹಲವರಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ.

ಆರೋಪಿ ಮಿಥುನ್‌ ಕಡೂರು ತಾಲೂಕಿನ ಚಿಕ್ಕಬಳ್ಳೇಕೆರೆ ಗ್ರಾಮದವ ಎಂದು ಹೇಳಿಕೊಂಡಿದ್ದು, ಬೆಂಗಳೂರಿನ ಆರೋಗ್ಯ ಸೌಧದಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದ. ಚಿಕ್ಕಮಗಳೂರು ಜಿಲ್ಲೆಯ ಆರೋಗ್ಯ ಇಲಾಖೆಯ ಉಸ್ತುವಾರಿ ಕೂಡ ಹೊಂದಿದ್ದೇನೆ ಎಂದು ನಂಬಿಸಿದ್ದ. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಚಂದ್ರಶೇಖರ್‌ ಸೇರಿದಂತೆ ಬಹುತೇಕರು ಇದನ್ನು ನಂಬಿ ಮೋಸ ಹೋಗಿದ್ದಾರೆ. ನಗರದ ಮೆಡಿಕಲ್‌ ಶಾಪ್‌ ಮಾಲೀಕ ಜಿ.ಆರ್‌.ಸತೀಶ್‌ ಎಂಬುವವರು ಪೊಲೀಸರಿಗೆ ದೂರು ನೀಡಿದ ಬಳಿಕ ನಕಲಿ ಐಎಎಸ್‌ ಅಧಿಕಾರಿಯ ಆಟ ಬಯಲಾಗಿದೆ.

ನಗರದ ಶ್ರೇಯಸ್‌ ಕ್ಲಿನಿಕ್‌ಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ ಚಂದ್ರಶೇಖರ್‌ ಅವರ ಜತೆ ಮಿಥುನ್‌ ಆಗಾಗ ಬರುತ್ತಿದ್ದ. ಐಎಎಸ್‌ ಅಧಿಕಾರಿ ಎಂದು ಚಂದ್ರಶೇಖರ್‌ ಅವರೇ ಪರಿಚಯ ಮಾಡಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯ ಇಡೀ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಔಷಧ ಸರಬರಾಜು ಮಾಡಲು ಆದೇಶ ಕೊಡಿಸುತ್ತಾರೆ ಎಂದು ಡಾ ಚಂದ್ರಶೇಖರ್‌ ಅವರೇ ಹೇಳಿದ್ದರು ಎಂದು ಸತೀಶ್‌ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

1.8 ಕೋಟಿ ರೂ. ಮೊತ್ತದ ಔಷಧ ಸರಬರಾಜು ಆದೇಶ ಕೊಡಿಸಲಾಗುವುದು, ಶೇ.20ರಷ್ಟು ಕಮಿಷನ್‌ ನೀಡಬೇಕು ಎಂದು ಮಿಥುನ್‌ ಕೇಳಿದ್ದ. ಅದರಂತೆ ಡಾ. ಚಂದ್ರಶೇಖರ್‌ ಅವರ ಸಮ್ಮುಖದಲ್ಲೇ ಬೆಂಗಳೂರಿನ ಜಕ್ಕೂರು ಏರೋಡ್ರಮ್‌ ಪಕ್ಕದ ರಸ್ತೆಯಲ್ಲಿ ಕಳೆದ ಜ.18ರಂದು ಜಿ.ಆರ್‌.ಸತೀಶ್‌ ಹಣ ನೀಡಿದ್ದರು. ಆದೇಶದ ಬಗ್ಗೆ ಮತ್ತೊಮ್ಮೆ ಸಂಪರ್ಕಿಸಿದಾಗ ಮತ್ತೆ 5 ಲಕ್ಷ ರೂಗೆ ಬೇಡಿಕೆ ಇಟ್ಟಿದ್ದು ಅವರ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಬಳಿಕ ಮೂರು ತಿಂಗಳಾದರೂ ಆದೇಶ ಬಾರದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವವರ ಬಳಿ ವಿಚಾರಿಸಿದಾಗ ಮಿಥುನ್‌ ಎಂಬ ಐಎಎಸ್‌ ಅಧಿಕಾರಿ ಇಲ್ಲ ಎಂಬುದು ತಿಳಿದು ಬಂದಿದೆ. ಆ ಬಳಿಕ ಸತೀಶ್‌ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿಂದಂತೆ ಸೃಷ್ಟೀಕರಣ ನೀಡಿರುವ ಚಿಕ್ಕಮಗಳೂರು ಜಿಲ್ಲಾ ಸರ್ಜನ್ ಡಾ ಚಂದ್ರಶೇಖರ್ ಅವರು, ಐಎಎಸ್‌ ಅಧಿಕಾರಿ ಎಂದು ಹೇಳಿಕೊಂಡು ಬಂದಿದ್ದ ಮಿಥನ್‌ ನಂಬಿ ನಾನೂ ಮೋಸ ಹೋಗಿದ್ದೇನೆ. ಲಾಲ್‌ ಬಹುದ್ದೂರ್‌ ಶಾಸ್ತ್ರಿ ನ್ಯಾಷನಲ್‌ ಅಕಾಡೆಮಿಯಲ್ಲಿ ತರಬೇತಿ ಪಡೆದಿರುವ ಗುರುತಿನ ಚೀಟಿಯನ್ನೂ ಮಿಥುನ್‌ ತೋರಿಸಿದ್ದ. ಅದು ನಕಲಿಯೋ ಅಸಲಿಯೋ ಎಂಬುದನ್ನು ಪತ್ತೆ ಹಚ್ಚಲು ನಾನೂ ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ. ಬಂಧನವಾದ ನಂತರ ನಕಲಿ ಐಎಎಸ್‌ ಅಧಿಕಾರಿ ಎಂಬುದು ಗೊತ್ತಾಗಿದೆ. ನನ್ನಿಂದಲೂ ಮಿಥುನ್‌ ಹಣ ಪಡೆದಿದ್ದು, ಪೊಲೀಸರಿಗೆ ದೂರು ನೀಡುವೆ ಎಂದು ಮಾಹಿತಿ ನೀಡಿದ್ದಾರೆ.

ಜಿಲ್ಲಾ ಸರ್ಜನ್ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ ;

ನಕಲಿ ಐಎಎಸ್ ಅಧಿಕಾರಿಯನ್ನು ಇಲಾಖೆಯ ನೌಕರರು ಮತ್ತು ಮೆಡಿಕಲ್ ಶಾಪ್ ಮಾಲೀಕರಿಗೆ ಪರಿಚಯಿಸಿ  ವಂಚನೆಗೆ ಒಳಗಾಗಲು ಕಾರಣವಾಗಿರುವ ಚಿಕ್ಕಮಗಳೂರು ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ವಿರುದ್ಧ ಕ್ರಮ ಜರುಗಿಸಬೇಕು ಜಿಲ್ಲಾ ಬಿಜೆಪಿ ಆಗ್ರಹಿಸಿದೆ. ಶುಕ್ರವಾರ ಚಿಕ್ಕಮಗಳೂರು ನಗರದಲ್ಲಿ ಮೆರವಣಿಗೆ ನಡೆಸಿ ಜಿಲ್ಲಾ ಸರ್ಜನ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ