ರಾಷ್ಟ್ರೀಯ ಹೆದ್ದಾರಿ 173ರ ಕಿ.ಮೀ.ಯ 26.326 (ಮೂಡಿಗೆರೆಯಿಂದ ಮೂಗ್ತೀಹಳ್ಳಿ) ವರೆಗಿನ ರಸ್ತೆ ಅಗಲೀಕರಣ ಕಾಮಗಾರಿಯ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನಕ್ಕೆ ಒಳಪಡುವ ಭೂ ಮಾಲೀಕರುಗಳಿಗೆ ಭೂಸ್ವಾಧೀನದ ಪರಿಹಾರವನ್ನು ಪಾವತಿಸಲು ಈಗಾಗಲೇ ಅವಾರ್ಡ್ ನೋಟಿಸನ್ನು ನೀಡಲಾಗಿದೆ. ಅದರಂತೆ ಕೆಲವು ಭೂಮಾಲೀಕರಿಂದ ಮಾತ್ರ ಭೂಸ್ವಾಧೀನದ ಪರಿಹಾರ ಪಾವತಿಗೆ ಅವಶ್ಯ ದಾಖಲೆಗಳು ಭೂಸ್ವಾಧೀನ ಪ್ರಾಧಿಕಾರಕ್ಕೆ ಸ್ವೀಕೃತವಾಗಿವೆ.
ಭೂಸ್ವಾಧೀನದ ಪರಿಹಾರ ಮೊತ್ತವನ್ನು ಪಡೆಯಲು ಅವಶ್ಯಕವಾದ ದಾಖಲೆಗಳನ್ನು ಇದುವರೆಗೂ ಸಲ್ಲಿಸದೇ ಇರುವ ಭೂಮಾಲೀಕರುಗಳು ಮೇ 8ರ ಒಳಗಾಗಿ ಉಪವಿಭಾಗಾಧಿಕಾರಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗಳ ಸಕ್ಷಮ ಪ್ರಾಧಿಕಾರಿ (ಮೂಡಿಗೆರೆಯಿಂದ ಮೂಗ್ತೀಹಳ್ಳಿವರೆಗೆ), ಚಿಕ್ಕಮಗಳೂರು ಉಪವಿಭಾಗ, ಚಿಕ್ಕಮಗಳೂರು ಕಚೇರಿಗೆ ಸಲ್ಲಿಸಬಹುದು. ತಪ್ಪಿದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



