ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಕಡೂರು ತಾಲ್ಲೂಕಿನ ಹಲವಾರು ರೈತರ ಹಕ್ಕುಪತ್ರಗಳನ್ನು ಕಂದಾಯ ಅಧಿಕಾರಿಗಳು ಸುಳ್ಳು ಆರೋಪ ಮಾಡಿ ವಜಾ ಮಾಡಿದ್ದರು. ಅನ್ಯಾಯಕ್ಕೆ ಒಳಗಾದ ಕಾನೂನುಬಾಹಿರ ಆಜ್ಞೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಕಾನೂನಾತ್ಮಕವಾಗಿ ಪ್ರಶ್ನಿಸಿದ್ದು, ಉಚ್ಚ ನ್ಯಾಯಾಲಯವು ದಾಖಲೆಗಳನ್ನು ಪರಿಶೀಲಿಸಿ ಮತ್ತು ಸರ್ಕಾರಿ ವಕೀಲರಾದ ಅಡ್ವಕೇಟ್ ಜನರಲ್‌ರವರ ವಾದವನ್ನು ಕೇಳಿ ಅಂತಿಮವಾಗಿ ಕಂದಾಯ ಅಧಿಕಾರಿಗಳು ಮಾಡಿದ ಆಜ್ಞೆಯನ್ನು ತಡೆ ನೀಡಲಾಗಿದೆ ಎಂದು ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಲಕ್ಷ್ಮಣ್ ಕುಮಾರ್ ತಿಳಿಸಿದ್ದಾರೆ.
ಅವರು ಚಿಕ್ಕಮಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಸಾವಿರ ಹಾಗೂ ಕಡೂರು ತಾಲ್ಲೂಕಿನಲ್ಲಿ ಐದು ಸಾವಿರ ರೈತರ ಅಕ್ರಮ ಸಕ್ರಮ ನಮೂನೆ 50 ಮತ್ತು 53 ಹಕ್ಕಪತ್ರಗಳನ್ನು ವಿನಾಕಾರಣ ವಜಾ ಮಾಡಲಾಗಿದೆ ಎಂದು ಹೇಳಿದರು.
ಬಹು ಮುಖ್ಯವಾಗಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹೊರಡಿಸಿದ್ದ ಸರ್ಕಾರ ಆದೇಶ ಸಂಖ್ಯೆ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆ, ಉಚ್ಚ ನ್ಯಾಯಾಲಯ ಏಪ್ರಿಲ್ 28 ರಂದು ತಡೆಯಾಜ್ಞೆ ನೀಡಿದೆ ಎಂದು ವಿವರಿಸಿದರು. ರೈತರ ಪಹಣಿಗೆ ಎಫ್‌ಐಡಿ ಆಗಬೇಕು. ಎಫ್‌ಐಡಿ ಆಗದಿದ್ದರೆ ರೈತರಿಗೆ ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಕಂದಾಯ ಅಧಿಕಾರಿಗಳು ರೈತರಿಗೆ ಮಲತಾಯಿ ಧೋರಣೆ ಮಾಡುವುದರ ಜೊತೆಗೆ ತೊಂದರೆ ಕೊಡಲಾಗುತ್ತಿದೆ ಎಂದು ತಿಳಿಸಿದರು.
ಈ ಹಿಂದೆಯೇ ರೈತರಿಗೆ ಕಂದಾಯ ಇಲಾಖೆಯಿಂದ ಹಕ್ಕುಪತ್ರಗಳನ್ನು ನೀಡಲಾಗಿದ್ದು, ಇತ್ತೀಚಿನ ದಿನಗಳಿಂದ ಅವರು ಕೊಟ್ಟಿರುವ ದಾಖಲೆಗಳು ಸರಿಯಿಲ್ಲ ಎಂದು ಯಾವುದೇ ವಿಚಾರಣೆ ನಡೆಸದೇ ಸಾರಸಾಗಟಾಗಿ ವಜಾ ಮಾಡಲಾಗುತ್ತಿದೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಮೂಡಿಗೆರೆ ಮತ್ತು ಕಡೂರು ರೈತರಿಗೆ ಮತ್ತು ಬಡಜನ ರಿಗೆ ವಿನಾಕಾರಣ ಸುಳ್ಳು ಆರೋಪ ಮಾಡಿ ವಜಾಗೊಳಿಸಿರುವ ಹಕ್ಕುಪತ್ರಗಳ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಹಿತರಕ್ಷಣಾ ವೇದಿಕೆ ಉಪಾಧ್ಯಕ್ಷ ಜಿ.ಯು. ಚಂದ್ರೇಗೌಡ, ಸುರೇಶ್ ಗೌಡ, ಎಂ.ಕೆ. ರವಿ, ಪ್ರಧಾನ ಕಾರ್ಯದರ್ಶಿ ಹೆಚ್.ಜಿ. ಸುರೇಂದ್ರ, ಖಜಾಂಚಿ ರೆಹಮಾನ್, ಮುಖಂಡರಾದ ಗುರುದೇವ್ ಅನಿಲ್, ನವೀನ್ ಕುಮಾರ್, ವಿಕ್ರಂ ಜಿ.ಸಿ ಮುಂತಾದವರು ಇದ್ದರು.

ಫಾರಂ =50/53 . ಅಕ್ರಮ ಸಕ್ರಮ ಸಮಿತಿ ಯಿಂದ ಮಂಜೂರಾಗಿದಂತಹ ಭೂಮಿಯನ್ನುಮೂಡಿಗೆರೆ ಹಾಗೂ ಕಡೂರು ತಾಲೂಕಿನಲ್ಲಿ ಇತ್ತೀಚೆಗೆ ಪಹಣಿಗಳನ್ನು ವಜಾ .. ಮಾಡಿ ರೈತರಿಗೆ ಆಗುತ್ತಿದ್ದಂತಹ ಅನ್ಯಾಯವನ್ನುಕಳೆದ ಒಂದುವರೆ ವರ್ಷದಿಂದಸತತವಾಗಿವಿರೋಧಿಸಿ ರೈತ ಹಿತ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಬಿಕೆ ಲಕ್ಷ್ಮಣ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕಉಚ್ಚ ನ್ಯಾಯಾಲಯದಲ್ಲಿ .. ಕಾನೂನು ಹೋರಾಟದಲ್ಲಿ ಗೆಲುವನ್ನು ತಂದುಕೊಟ್ಟಂತಹ ಹಿರಿಯ ವಕೀಲರು ಎಂ .ಶಿವಪ್ರಕಾಶ್ .. ಜನಾರ್ದನ್ ಅಂಡ್ ಜನಾರ್ಧನ್ ಅಸೋಸಿಯೇಟ್ಸ…ಹಾಗೂ ಹಿರಿಯ ವಕೀಲರಾದಂತಹ ಹೆಚ್ ಎನ್ ಎಮ್ ಪ್ರಸಾದ್.. ಇವರುಗಳಿಗೆ ರೈತ ಹಿತರಕ್ಷಣಾ ವೇದಿಕೆ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳ ವತಿಯಿಂದ ಗೌರವ ಸಮರ್ಪಿಸಲಾಯಿತು

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಹಾಗೂ ಕಡೂರು ತಾಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಅಕ್ರಮ ಸಕ್ರಮ.50/53 ಸಮಿತಿಯಲ್ಲಿ.. ಮಂಜುರಾಗಿದ್ದ ಕೃಷಿ ಭೂಮಿಯನ್ನಪಹಣಿಗಳನ್ನ.. ವಜಾ ಮಾಡುತ್ತಿದ್ದ ವಿಚಾರವನ್ನು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿ ತಡೆಯಾಗ್ನೇ.. ತಂದಂತಹ ವಿಚಾರವನ್ನು ರೈತ ರಕ್ಷಣಾ ವೇದಿಕೆಯ.. ಅಧ್ಯಕ್ಷರು ಬಿಕೆ ಲಕ್ಷ್ಮಣ್ ಕುಮಾರ್ ನೇತೃತ್ವದಲ್ಲಿ ಎಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ಚಿಕ್ಕಮಗಳೂರು ಜಿಲ್ಲೆ ಮಾನ್ಯ ಜಿಲ್ಲಾಧಿಕಾರಿಗಳು ಚಿಕ್ಕಮಗಳೂರು ಇವರಿಗೆ ಲಿಖಿತವಾಗಿ ವರದಿ ನೀಡಿ… ಮುಂದೆ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಸುವ್ಯವಸ್ಥೆಯನ್ನು ಕಾಪಾಡಬೇಕಾಗಿ ಕೇಳಿಕೊಳ್ಳಲಾಯಿತು.



