suddi-3

 

 

ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಸಮೀಪದ ಕೆಳಗೂರು ದಿಣ್ಣೆಕೆರೆ ಗ್ರಾಮದಲ್ಲಿ ಕಳಪೆ ಗುಣಮಟ್ಟದ  ಕಲಬೆರಕೆ ತುಂಬಿದ ಸಾವಯವ ಗೊಬ್ಬರವನ್ನು ಮಾರಾಟ ಮಾಡಲು ಬಂದ ಜಾಲವನ್ನು ರೈತರುಪತ್ತೆ ಹಚ್ಚಿರುವ ಘಟನೆ ಬುಧವಾರ ನಡೆದಿದೆ.

ಕೆಳಗೂರು ದಿಣ್ಣೆಕೆರೆ ಗ್ರಾಮಕ್ಕೆ ಮದ್ದೂರು ಮೂಲದ  ಸಮೃದ್ಧಿ ಮತ್ತು ಅಂಕನಾಥೇಶ್ವರ ಕಂಪನಿಯ ಹೆಸರನ್ನು ಹೇಳಿಕೊಂಡು ಎರಡು ಹೆಸರುಗಳಲ್ಲಿ ಮುದ್ರಿತವಾಗಿರುವ ಹಳದಿ ಬಣ್ಣದ ಚೀಲಗಳಲ್ಲಿ ಕಲಬೆರಕೆ ಸಾವಯವ ಗೊಬ್ಬರವನ್ನು ಸರಕು ವಾಹನದಲ್ಲಿ ತಂದಿದ್ದು ಕೆಳಗೂರು ದಿಣ್ಣೆಕೆರೆ ಗ್ರಾಮದ ರೈತ ಡಿಎಲ್ ಕುಮಾರ್ ರವರನ್ನು ಸಂಪರ್ಕಿಸಿ 9 ಮೂಟೆ ಸಾವಯವ ಗೊಬ್ಬರ ವಿತರಿಸಿದ್ದು ಬಳಿಕ ಲೋಹಿತ್ ಎಂಬುವರಿಗೆ 15 ಮೂಟೆ ಕಿರಣ್ ಎಂಬುವರಿಗೆ 5 ಮೂಟೆ ವಿತರಿಸಿದ ಕಂಪನಿಯ ಏಜೆಂಟ್ ತಿಪ್ಪೇಸ್ವಾಮಿ, ಗೊಬ್ಬರದ ಬಗೆಯಲ್ಲಿ ಅನುಮಾನವಿದ್ದರೆ ಪರೀಕ್ಷಿಸಿ ಎಂದು ರೈತ ಡಿಎಲ್ ಕುಮಾರ್ ಅವರಿಗೆ ತಿಳಿಸಿದ್ದು ಕೂಡಲೇ ಅವರು ಸಾವಯವ ಗೊಬ್ಬರವನ್ನು ನೀರಿನಲ್ಲಿ ತೊಳೆದಿದ್ದು ಕಪ್ಪು ಕೆರೆಯ ಮಣ್ಣಿನ ರೀತಿಯಲ್ಲಿ ಇದ್ದಂತಹ ಗೊಬ್ಬರ ಕೊನೆಗೆ  ಸಣ್ಣ ಸಣ್ಣ ಕಲ್ಲುಗಳು ಮರಳು ಕಸ ಈ ರೀತಿ ಮಾತ್ರ ಉಳಿದುಕೊಂಡಿದ್ದು ಸಂಪೂರ್ಣ ಕಳಪೆ ಎಂದು ತಿಳಿದುಬಂದಿತ್ತು.

ಆತನನ್ನು ಅಲ್ಲಿಯೇ ಇರಿಸಿಕೊಂಡಿದ್ದು ಕೂಡಲೇ ವಿಷಯ ತಿಳಿದ ಸ್ಥಳೀಯ ಕಾಂಗ್ರೆಸ್ ಹೋಬಳಿ ಅಧ್ಯಕ್ಷರಾದ ಕೆಳಗೂರು ಪೂರ್ಣೇಶ್ ಭೇಟಿ ನೀಡಿ ವಿಚಾರಣೆ ನಡೆಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡ ಏಜೆಂಟ್ ತಿಪ್ಪೇಸ್ವಾಮಿ ತನ್ನ ಸ್ವಂತ ಊರು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಶಿಡ್ಲಯ್ಯನ ಕೋಟೆ ಎಂದು ಮಾಹಿತಿ ನೀಡಿದ್ದು, ಸಮೃದ್ಧಿ ಸಾವಯವ ಗೊಬ್ಬರ ಕಂಪನಿ ಮದ್ದೂರಿನಲ್ಲಿದ್ದು, ಇದರ ಮಾಲೀಕರು ಯೋಗೇಶ್ ಎಸ್ ಆರ್ ಮತ್ತು ಮಾನಸ ಎಂದು ಮಾಹಿತಿ ನೀಡಿದ್ದಾನೆ.

ತಿಪ್ಪೇಸ್ವಾಮಿ ಪ್ರಸ್ತುತ ತಂದಿರುವ ಲೋಡ್ ನಲ್ಲಿ ಒಟ್ಟು 107 ಮೂಟೆ ಸಾವಯವ ಗೊಬ್ಬರ ತಂದಿದ್ದು, ಕೆ ಆರ್ ಪೇಟೆ, ದಬ್ಬೆ, ಕಣಚೂರು, ಗೋಣಿಬೀಡು ಗ್ರಾಮಗಳ ರೈತರಿಗೂ ವಿತರಿಸಿದ್ದೇನೆ ಎಂದು ಮಾಹಿತಿ ತಿಳಿಸಿದ್ದಾನೆ.

ಕೆಳಗೂರು ಪೂರ್ಣೇಶ್ ಮಾತನಾಡಿ ಈ ಮೇಲಿನ ಊರುಗಳಲ್ಲಿ ಈತ ಕಲಬೆರಕೆ ಕಳಪೆ ಗುಣಮಟ್ಟದ ಸಾವಯವ ಗೊಬ್ಬರವನ್ನು ವಿತರಿಸಿದ್ದು ಪ್ರಸ್ತುತ ಪ್ರತಿಯೊಬ್ಬ ರೈತರಿಗೆ 300 ಇಂದ ವಿಭಿನ್ನ ಬೆಲೆಯಲ್ಲಿ 800 ರೂಪಾಯಿವರೆಗೆ ಈ ಗೊಬ್ಬರವನ್ನು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಕೃಷಿ ಇಲಾಖೆಗೆ ಕರೆ ಮಾಡಿ ದೂರು ನೀಡಿ ಅಧಿಕಾರಿಗಳನ್ನು ಘಟನಾ ಸ್ಥಳಕ್ಕೆ ಕರೆಸಿ ಇನ್ಯಾವ ರೈತರಿಗೆ ಮೋಸ ಆಗದಂತೆ ತಡೆಯಲು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದೇವೆ ಎಂದರು.

ಕೃಷಿ ಇಲಾಖೆಯ ಜಾರಿದಳ ಸಹಾಯಕ ಕೃಷಿ ನಿರ್ದೇಶಕ ತಿಮ್ಮನ ಗೌಡ ಎಸ್ ಪಾಟೀಲ್, ಹೋಬಳಿ ಕೃಷಿ ಅಧಿಕಾರಿ ಇಂದ್ರ ಕುಮಾರ್ ನಾಯಕ್ ನೇತೃತ್ವದ ತಂಡ ಕಳಪೆ ಕಲಬೆರಕೆ ಸಾವಯವ ಗೊಬ್ಬರ ಗಳನ್ನು ವಶಪಡಿಸಿಕೊಂಡು ತಿಪ್ಪೇಸ್ವಾಮಿ ಮತ್ತು ಗೊಬ್ಬರ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಕಾನೂನು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದೆ.

ಆಲ್ದೂರು ಪೋಲೀಸ್ ಠಾಣೆಯ ಎಎಸ್‍ಐ ಸತೀಶ್ ನಾಯಕ್ ಪೋಲೀಸ್ ಸಿಬ್ಬಂದಿಗಳ ತಂಡ ಗೊಬ್ಬರ ಸಾಗಿಸಿದ ವಾಹನ ಏಜೆಂಟ್ ತಿಪ್ಪೇಸ್ವಾಮಿ ಮತ್ತು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ಆರಂಭಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ