Screenshot_20260523-171707~3

 

 

ಉನ್ನತ ಶಿಕ್ಷಣದಿಂದ ಉನ್ನತೀಕರಣ ಸಾಧ್ಯ.  ಚಿಕ್ಕಮಗಳೂರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕು. ವಿ.ವಿ.ಪ್ರಾರಂಭಕ್ಕೆ ಎಲ್ಲ ಅವಕಾಶಗಳು ಇಲ್ಲಿವೆ ಎಂದು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಯೋಜಕ ಡಾ.ಕೆ.ಎಸ್.ಲಕ್ಷ್ಮೀಕಾಂತ ಅಭಿಪ್ರಾಯಿಸಿದರು.

ಐಡಿಎಸ್‍ಜಿ ಸರ್ಕಾರಿ ಕಾಲೇಜು ಮಲ್ಲೇಗೌಡಸಭಾಂಗಣದಲ್ಲಿ ಪ್ರಥಮ ಎಂ.ಎ.ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನವಿಭಾಗದ ವಿದ್ಯಾರ್ಥಿಗಳಿಂದ ಅಂತಿಮ ಎಂ.ಎ.ವಿದ್ಯಾರ್ಥಿಗಳಿಗೆ ಇಂದು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಲೇಜಿನ ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗ 16ವಸಂತಗಳನ್ನು ಕಂಡಿದೆ.  ಎಂಟು ಸ್ನಾತಕೋತ್ತರ ವಿಭಾಗಗಳಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಈ ಬಾರಿ ಹಲವು ರ್ಯಾಂಕ್‍ಗಳು ಸಂದಾಯವಾಗಿದೆ.  15ರಿಂದ 20 ಸ್ನಾತಕೋತ್ತರ ವಿಭಾಗಗಳು ಇಲ್ಲಿ ಕಾರ್ಯನಿರ್ವಹಿಸುವ ಅವಕಾಶ-ಬೇಡಿಕೆ ಇದೆ.  ಸಾಂಸ್ಕøತಿಕ-ಶೈಕ್ಷಣಿಕವಾಗಿ ಬೆಳೆಯಲು ಸ್ವಂತ ವಿಶ್ವವಿದ್ಯಾನಿಲಯ ಇಲ್ಲಿ ಸ್ಥಾಪನೆಯಾಗಬೇಕು.  ಮನೆಬಾಗಿಲಿಗೆ ಉನ್ನತಶಿಕ್ಷಣ ಕೊಂಡೊಯ್ಯುವ ಆಶಯ ಕಾರ್ಯಗತಗೊಳ್ಳಬೇಕು.  ನಮ್ಮೆಲ್ಲ ಪ್ರತಿಭೆಗಳ ಅನಾವರಣಕ್ಕೆ ಅವಕಾಶವಾಗುತ್ತದೆ ಎಂದರು.

ಅರ್ಥಶಾಸ್ತ್ರ ಮಹತ್ವಪೂರ್ಣವಾದ ವಿಷಯ.  ಭಾರತೀಯ ಅರ್ಥಶಾಸ್ತ್ರ ಸೇವೆಗೆÉ ಉತ್ತಮ ಅವಕಾಶಗಳಿವೆ.  ಐಇಎಸ್ ವಿಶೇಷವಾಗಿದ್ದು ಆಡಳಿತಾತ್ಮಕ ಸೇವೆಗೆ ಅರ್ಥಶಾಸ್ತ್ರ ಅಧ್ಯಯನದ ಏಕೈಕ ವಿಷಯವಾಗಿದ್ದು, ಇನ್ನಿತರೆ ವಿಷಯಗಳಿಗೆ ಈ ಅವಕಾಶವಿಲ್ಲ ಎಂದ ಡಾ.ಲಕ್ಷ್ಮೀಕಾಂತ, ಅರ್ಥಶಾಸ್ತ್ರ ಓದಿದವರಿಗೆ ಉದ್ಯೋಗಾವಕಾಶಗಳು ವಿಫುಲವಾಗಿದೆ ಎಂದು ವಿವರಿಸಿದರು.

ನಂಬಿಕೆ, ವಿಶ್ವಾಸ, ಆತ್ಮವಿಶ್ವಾಸ, ಪ್ರೀತಿ, ದೃಷ್ಟಿಕೋನ ಬದುಕಿನಲ್ಲಿ ಮುಂದೆ ಬರಲು ಅವಶ್ಯಕ.  ವಿದ್ಯಾರ್ಥಿಗಳು ಒಳ್ಳೆಯ ಗುಣ, ನಡತೆ, ಸೇವಾಮನೋಭಾವ ಬೆಳೆಸಿಕೊಳ್ಳಬೇಕು.  ಮನಸ್ಸನ್ನು ಉಲ್ಲಾಸವಾಗಿಟ್ಟುಕೊಂಡರೆ ಯಾವ ರೋಗವೂ ಸುಳಿಯುವುದಿಲ್ಲ ಎಂದ ಲಕ್ಷ್ಮೀಕಾಂತ,  ಹುಟ್ಟು ಸಾವಿನಂತೆ ಕಾಲೇಜು ಸೇರ್ಪಡೆ ಮತ್ತು ಬೀಳ್ಕೊಡುಗೆ ಸಹಜ ಪ್ರಕ್ರಿಯೆ ಎಂದರು.

ಸಾಹಿತಿ-ಪತ್ರಕರ್ತ ಬಿ.ಟಿ.ತಿಪ್ಪೇರುದ್ರಪ್ಪ ಸಮಾರಂಭ ಉದ್ಘಾಟಿಸಿ ಮಾತನಾಡಿ ದೀಪ ಪರಂಜ್ಯೋತಿ, ಕತ್ತಲೆಯನ್ನು ಓಡಿಸಿ ಬೆಳಕು ತರುತ್ತದೆ.  ಶಿಕ್ಷಣವೂ ಹಾಗೆ ಅಜ್ಞಾನವನ್ನು ಓಡಿಸಿ ಜ್ಞಾನವನ್ನು ನೀಡುತ್ತದೆ.  ನಮ್ಮದು ಕೃಷಿಪ್ರಧಾನ ದೇಶ.  ಅರ್ಥಶಾಸ್ತ್ರ ರೂಪಿಸಿಕೊಂಡ ದೇಶ ಪ್ರಗತ್ತಿಯತ್ತ ಸಾಗುತ್ತದೆ ಎಂದರು.

ಪ್ರತಿಭೆಗೆ ಅಂಕಪಟ್ಟಿ ಮಾನದಂಡವಲ್ಲ.  ರ್ಯಾಂಕ್ ಪರಮೋಚ್ಛ ಗುರಿ ಆಗಬೇಕಿಲ್ಲ.  ವರ್ತನೆ, ಧ್ಯೇಯ, ಕನಸು, ಪ್ರಯತ್ನಗಳು ಶಿಕ್ಷಣದ ಪ್ರಬಲ ಅಸ್ತ್ರ.  ಮೊಬೈಲ್, ಗೂಗಲ್, ಜೆರಾಕ್ಸ್ ಅವಲಂಬನೆ ಕಡಿಮೆ ಮಾಡಿಕೊಂಡು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದ ತಿಪ್ಪೇರುದ್ರಪ್ಪ, 65ಲಕ್ಷ ಪುಸ್ತಕಗಳನ್ನು ಓದಿದ್ದ ಡಾ.ಅಂಬೇಡ್ಕರ್, ನಮಗೆಲ್ಲ ಮಾದರಿಯಾಗಬೇಕು ಎಂದರು.

ಬದುಕು ರೂಪಿಸಿಕೊಳ್ಳಲು ಸ್ಪಷ್ಟವಾದ ನಿಲುವು, ಜವಾಬ್ದಾರಿ, ಶಿಕ್ಷಣ ಅವಶ್ಯಕ.  ಬದುಕಿಗೆ ಹಣಬೇಕು ನಿಜ.  ಆದರೆ ಹೃದಯದಲ್ಲಿ ಕಾರುಣ್ಯ, ಮೆದುಳಿನಲ್ಲಿ ಜ್ಞಾನ, ಮುಖದಲ್ಲಿ ಆತ್ಮವಿಶ್ವಾಸ, ಕಣ್ಣಿನಲ್ಲಿ ಛಲ, ತಾಳ್ಮೆ-ಸಹನೆ-ಹೊಣೆಗಾರಿಕೆ, ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಮಥ್ರ್ಯ ಹೊಂದಿದವರು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದ ಬಿಟಿಆರ್,  ಗುರುಹಿರಿಯರನ್ನು ಗೌರವಿಸಿ, ದೇಶದ ಅಭಿವೃದ್ಧಿಗೆ ಸಹಕಾರಿಗಳಾಗಿ ಉತ್ತಮ ನಾಗರಿಕರಾದರೆ ಸಾರ್ಥಕವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಕಾಲೇಜು ಪ್ರಾಂಶುಪಾಲೆ ಪ್ರೊ.ತಸ್ನೀಮ್‍ಕೌಸರ್ ಮನಿಯಾರ್ ಮಾತನಾಡಿ ಕಾಲೇಜು ಸೇರುವಾಗ ಹೊಸ ಆಸೆ-ಆಕಾಂಕ್ಷೆ-ಕನಸು ತುಂಬಿ ತುಳುಕುತ್ತಿದ್ದವು.  ಬೀಳ್ಕೊಡುವಾಗ ಅವನ್ನೆಲ್ಲ ಸಾಕಾರಗೊಳಿಸುವ ಸಿದ್ಧತೆಗಳಿರುತ್ತವೆ.  ನಡೆ-ನುಡಿ ಜೊತೆಗೆ ಗುರುತು ನಮ್ಮ ಕುರುಹು ಆಗಬೇಕು.  ಸೋಲಿಗೆ ಕುಗ್ಗದೆ ಸದಾ ಮುನ್ನಡೆಯುವ, ಒಳ್ಳೆಯ ವ್ಯಕ್ತಿಗಳಾಗಿ ರೂಪುಗೊಂಡು ದೇಶಕ್ಕೆ ಉಪಕಾರಿಗಳಾಗಬೇಕು.  ಕನಸುಗಳು ಕಡಲಾದರೆ ಮೌಲ್ಯಗಳು ಅದಕ್ಕಿಂತ ದೊಡ್ಡದಾಗಬೇಕು.  ಭವಿಷ್ಯದ ಬದುಕು ಆಶಾದಾಯಕವಾಗಲೆಂದು ಹಾರೈಸಿದರು.

ಮಾಧ್ಯಮ ಸಂಸ್ಕøತಿ ಪ್ರತಿಷ್ಠಾನ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಮುಖ್ಯಅತಿಥಿಗಳಾಗಿ ಮಾತನಾಡಿ ಬೀಳ್ಕೊಡುಗೆಯ ನಂತರ ನಿಜವಾದ ಬದುಕು ಅನಾವರಣಗೊಳ್ಳುತ್ತದೆ.  ಕೆಡುಕನ್ನು ಬದಿಗಿಟ್ಟು ಒಳಿತನ್ನು ನೋಡುವ-ಅನುಕರಿಸುವ ಅಭ್ಯಾಸ ಉತ್ತಮ.  ಕಾಯಕ ಮತ್ತು ದಾಸೋಹ ಜೀವನದ ಧ್ಯೇಯವಾಗಬೇಕು.  ಸಮಾಜಮುಖಿ ಬದುಕಿನಲ್ಲಿ ಸಾರ್ಥಕತೆ ಇದೆ ಎಂದರು.

ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಮಹೇಶ್ ಸ್ವಾಗತಿಸಿ, ವಿದ್ಯಾರ್ಥಿಗಳಾದ ಕೃತಿಕಾ ಮತ್ತು ನಿರ್ಮಲಾ ನಿರೂಪಿಸಿ, ರೋಷನ್ ವಂದಿಸಿದರು.  ವರ್ಷಾ ತಂಡ ಪ್ರಾರ್ಥಿಸಿತು.  ಉಪನ್ಯಾಸಕರುಗಳಾದ ಕೆ.ಸಿ.ಆಶಾ, ಪೃಥ್ವಿ, ಬಸವರಾಜು ವೇದಿಕೆಯಲ್ಲಿದ್ದರು. ವಿವಿಧ ಸ್ಪರ್ಧಾವಿಜೇತರಿಗೆ ಮುಖ್ಯಅತಿಥಿಗಳು ಬಹುಮಾನ ವಿತರಿಸಿದರು.  ಸಾಂಸ್ಕøತಿಕ ಕಾರ್ಯಕ್ರಮ ಆಕರ್ಷಕವಾಗಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ