daradahalli ranga

 

 

ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡದ ಪಕ್ಕದಲ್ಲಿರುವ ಸಾಂಸೃತಿಕ ಪ್ರಚಾರ ಮಂದಿರವು ಇದು ತುಂಬಾ ಹಳೆದಾಗಿದ್ದು ಅದನ್ನು ದುರಸ್ಥಿಗೊಳಿಸಲು ಅನುದಾನ ನೀಡಬೇಕು ಎಂದು ರೈತ ಮುಖಂಡ ಡಿ.ಎಸ್. ರಮೇಶ್ ಗೌಡ ದಾರದಹಳ್ಳಿ ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ಮೂಲಕ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.

ಸಾಂಸ್ಕೃತಿಕ ಮಂದಿರವು ದಾರದಹಳ್ಳಿಯಲ್ಲಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರ ಕಾಲದಲ್ಲಿ ಗ್ರಾಮದ ಹಿರಿಯರ ಕಾಳಜಿಯಿಂದ ನಿರ್ಮಾಣಗೊಂಡಿತ್ತು. ಅಲ್ಲಿ ಬಹಳ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆದರೆ ಈಗ ಈ ಕಟ್ಟಡ ಶಿಥಿಲವಾಗಿದೆ.

ಅದನ್ನು ದುರಸ್ಥಿಗೊಳಿಸಿದರೆ ಹಿಂದಿನಂತೆ ನಡೆದುಕೊಂಡು ಬಂದಿರುವ ಹಾಗೂ ಮುಂದೆಯೂ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಉತ್ತಮ ವೇದಿಕೆಯಾಗುತ್ತದೆ ಆದ್ದರಿಂದ ಈ ಕಟ್ಟಡದ ಮೇಲ್ಛಾವಣಿಗೆ ಕಬ್ಬಿಣದ ಟ್ರಸ್ ಮತ್ತು ಸೀಲ್ಲಿಂಗ್ ಹಂಚು ಹಾಗೂ ಸುಣ್ಣ ಬಣ್ಣಕ್ಕೆ ಹೆಚ್ಚಿನ ಅನುದಾನದ ಅವಶ್ಯಕತೆ ಇರುವುದರಿಂದ ಸರ್ಕಾರದ ಯಾವುದಾದರು ಅನುದಾನದಲ್ಲಿ ಸದರಿ ಕಟ್ಟಡದ ಕಾಮಾಗಾರಿಯನ್ನು ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಈ ಬಗ್ಗೆ ಗ್ರಾಮ ಪಂಚಾಯತಿ ಯಲ್ಲಿ ನಡಾವಳಿ ಮಾಡಲಾಗಿದ್ದು, ತಾಲ್ಲೂಕು ಪಂಚಾಯಿತಿ ಮೂಲಕ ಶಾಸಕರಿಗೆ ಪತ್ರವನ್ನು ಬರೆಯಲಾಗಿದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ