jappadakallu

 

 

ಮೂಡಿಗೆರೆ ತಾಲ್ಲೂಕು ಗೋಣಿಬೀಡು ಹೋಬಳಿ ಚಕ್ಕುಡಿಗೆ ಗ್ರಾಮದ ಜಪ್ಪದಕಲ್ಲು ರೆಸಾರ್ಟ್ ನ ಹತ್ತನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾಗಿ ಭಾಗವಹಿಸಿದ್ದ ಹಿರಿಯ ಚಿತ್ರ ನಟ ದೊಡ್ಡಣ್ಣ ಅವರು ಮಾತನಾಡಿ ; ಅನ್ನ ಮತ್ತು ಅಮ್ಮನ ಋಣ ಬಹು ಶ್ರೇಷ್ಟವಾದುದು. ನಮ್ಮ ತಂದೆ ತಾಯಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ತಂದೆ ತಾಯಿಗಳ ಮನಸ್ಸನ್ನು ನೋಯಿಸಿದರೆ ನಮಗೆ ಎಂದಿಗೂ ಒಳ್ಳೆಯದಾಗುವುದಿಲ್ಲ. ಹಾಗೆಯೇ ಅನ್ನವಿಲ್ಲದೇ ಯಾರೂ ಬದುಕಲು ಸಾಧ್ಯವಿಲ್ಲ.  ಅನ್ನ ಹಾಕಿದವರನ್ನು, ನಮಗೆ ಸಹಾಯ ಮಾಡಿದವರನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಅನ್ನವನ್ನು ವ್ಯರ್ಥ ಮಾಡಬಾರದು, ಎಷ್ಟು ಬೇಕೋ ಅಷ್ಟನ್ನು ಹಾಕಿಸಿಕೊಂಡು ಊಟಮಾಡಬೇಕು ಎಂದು ಕಿವಿಮಾತು ಹೇಳಿದರು.

ಜಪ್ಪದಕಲ್ಲು ರೆಸಾರ್ಟ್ ಗೆ ನಾನು ಹಲವು ಬಾರಿ ಬಂದಿದ್ದೇನೆ. ಇಲ್ಲಿನ ವ್ಯವಸ‍್ಥೆ ಬಹಳ ಅಚ್ಚುಕಟ್ಟಾಗಿದ್ದ, ರುಚಿಕಟ್ಟು ಮತ್ತು ಶುದ್ಧವಾದ ಊಟ, ನದಿತಟದ ಸುಂದರ ಪರಿಸರ, ರೆಸಾರ್ಟ್ ಮಾಲೀಕ ನೇಮಿರಾಜ್ ಅವರ ಆತಿಥ್ಯ ಎಲ್ಲವೂ ನನಗೆ ಖುಷಿ ನೀಡಿದೆ ಎಂದರು.

ಸಕಲೇಶಪುರ ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್ ಅವರು ಮಾತನಾಡಿ ; ಕಾಫಿ ನಾಡಿನ ಜನರು ಕಾಫಿ ಕೃಷಿಯ ಜೊತೆಗೆ ಪರ್ಯಾಯ ಆದಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಇತ್ತೀಚೆಗೆ ಮಲೆನಾಡಿನ ಕಡೆಗೆ ಪ್ರವಾಸಿಗರು ದೊಡ್ಡ ಸಂಖ್ಯೆಯಲ್ಲಿ ಬರುತ್ತಿದ್ದು, ಇಲ್ಲಿ ಹೋಂ ಸ್ಟೇ, ರೆಸಾರ್ಟ್ ಉದ್ಯಮ ಸ್ಥಾಪನೆ ಮಾಡಿ ಜನರು ಆರ್ಥಿಕ ಅಭಿವೃದ್ಧಿ ಕಾಣುತ್ತಿದ್ದು, ಉತ್ಸಾಹಿ ಯುವಕರು ಈ ನಿಟ್ಟಿನಲ್ಲಿ ಹೆಚ್ಚು ಆಸಕ್ತಿಯಿಂದ ತೊಡಗಿಸಿಕೊಳ್ಳಬೇಕು. ಜಪ್ಪದಕಲ್ಲು ರೆಸಾರ್ಟ್ ಮಾಲೀಕ ನೇಮಿರಾಜ್ ಅವರು ಚಿಕ್ಕದಾಗಿ ಪ್ರಾರಂಭಿಸಿದ್ದ ಹೋಂ ಸ್ಟೇ ಈಗ ಏಕಕಾಲದಲ್ಲಿ ಸುಮಾರು 180 ಜನರು ಉಳಿದುಕೊಳ್ಳಲು ವ್ಯವಸ್ಥೆ ಇರುವ ರೆಸಾರ್ಟ್ ಆಗಿ ಪರಿವರ್ತನೆ ಮಾಡಿದ್ದಾರೆ. ಇದಕ್ಕೆ ಅವರ ಮತ್ತು ಅವರ ಪತ್ನಿ ಶ್ರೀಮತಿ ಭಾಗ್ಯ ಹಾಗೂ ಅವರ ಶ್ರದ್ಧೆ, ಪರಿಶ್ರಮ, ಆತಿಥ್ಯ ಪ್ರಮುಖ ಕಾರಣವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಹಿರಿಯ ವೈದ್ಯ ಮತ್ತು ಸಮಾಜ ಸೇವಕ ಜೆ.ಪಿ. ಕೃಷ್ಣೇಗೌಡ, ನಟ ದೊಡ್ಡಣ್ಣ, ಮಾಜಿ ಶಾಸಕ ಹೆಚ್.ಎಂ. ವಿಶ್ವನಾಥ್, ಮೂಡಿಗೆರೆ ಶಾಸಕಿ ಶ್ರೀಮತಿ ನಯನಾ ಮೋಟಮ್ಮ, ಮದ್ದೂರು ಶಾಸಕ ಕೆ.ಎಂ. ಉದಯ, ಮುದ್ರೆಮನೆ ಕಾಫಿ ಕ್ಯೂರರ್ಸ್ ಮಾಲೀಕ ಬಿ.ಎಸ್ ಸಂತೋಷ್, ಕಾಫಿಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ, ಕರ್ನಾಟಕ ಬೆಳೆಗಾರರ ಸಂಘದ ಅಧ್ಯಕ್ಷ ಹಳಸೆ ಶಿವಣ‍್ಣ, ಕೆ. ಹೆಚ್. ವೆಂಕಟೇಶ್ ಕೊಲ್ಲಿಬೈಲ್, ಮಾಜಿ ಸೈನಿಕ ಚಂದ್ರಶೇಖರ್, ಸೈನಿಕ ಪುನೀತ್ ಬಿದರಹಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಪ್ಪದಕಲ್ಲು ರೆಸಾರ್ಟ್ ಹಿರಿಯ ಸಿಬ್ಬಂದಿಗಳನ್ನು ಗೌರವಿಸಲಾಯಿತು.

ರೇಸಾರ್ಟ್ ಮಾಲೀಕ ಸಿ.ಆರ್. ನೇಮಿರಾಜ್ ಅವರು ತಮ್ಮ ಹತ್ತು ವರ್ಷಗಳ ಪಯಣದ ಏಳುಬೀಳುಗಳ ಬಗ್ಗೆ ಮೆಲುಕು ಹಾಕಿದರು. ಇದೇ ಸಂದರ್ಭದಲ್ಲಿ ನೇಮಿರಾಜ್ ಅವರ ಮೊಮ್ಮಗಳ ನಾಮಕರಣ, ಸೊಸೆಯ ಸೀಮಂತ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ