ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಮೇ 28 ರಂದು ಮಿಣುಕು ಹುಳುಗಳ ಕುರಿತ ವಿಚಾರ ಮಂಥನ, ಸಂವಾದ, ಮಿಣುಕು ಹುಳುಗಳ ವೀಕ್ಷಣೆ ಕಾರ್ಯಕ್ರಮ ನಡೆಯಲಿದೆ.
ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಮಿತ್ರಾ ಎನ್ವಿರಾನ್ಮೆಂಟ್ ಮತ್ತು ವೈಲ್ಡ್ ಲೈಫ್ ಸೊಸೈಟಿ ಸಹಯೋಗದೊಂದಿಗೆ ಅಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳಾದ ಡಾ.ಅವಿನಾಶ್ ಮತ್ತು ಪೂರ್ಣೇಶ್ ಮತ್ತಾವರ ಅವರು ಮಿಣುಕು ಹುಳುಗಳ ಬದುಕು, ಪರಿಸರದ ಮಹತ್ವ ಮತ್ತು ಅವುಗಳ ಅಸ್ತಿತ್ವದ ಕುರಿತು ಮಾಹಿತಿ ನೀಡಲಿದ್ದಾರೆ. ಆಸಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.
ಕಾರ್ಯಕ್ರಮದ ಕುರಿತ ಮಾಹಿತಿಗಾಗಿ 9663098873/9449309067 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.



