suddi-1

 

 

ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮದ ಜಕ್ಕಣಕ್ಕಿ ಎಂಬಲ್ಲಿ ರೈತರೊಬ್ಬರು  ಗೋಡೋನ್ ನಲ್ಲಿಟ್ಟಿದ್ದ ಸುಮಾರು 149 ಅಡಿಕೆ ಮೂಟೆಗಳಲ್ಲಿ  7 ಅಡಿಕೆ ಮೂಟೆಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು  ಈ ಬಗ್ಗೆ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೆ ಪ್ರಸಾದ್ ಮೂರ್ತಿ ಸೇರಿದ ಜಕ್ಕಣಕ್ಕಿ ಗೋಡೋನ್ ನಲ್ಲಿದ್ದ ಅಡಿಕೆ ಮೂಟೆ ಕದ್ದ ಕಳ್ಳರನ್ನು ಬಂಧಿಸುವಲ್ಲಿ ಬಾಳೆಹೊನ್ನೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿತರುಗಳಾದ ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ  ಮಂಜು ಎಸ್ (30), ಮೂಡಿಗೆರೆ ತಾಲ್ಲೂಕಿನ ಬಿಳಗುಳ ಇಂದಿರನಗರದ ವಾಸಿ ಚಾಲಕ  ಸಂತೋಷ (34) ಅವರುಗಳನ್ನು ದಸ್ತಗಿರಿ ಮಾಡಿ  ಕಳ್ಳತನ ಮಾಡಿದ್ದ  270000 ಮೌಲ್ಯದ   ಅಡಿಕೆಯನ್ನು ಹಾಗೂ ಕೃತ್ಯಕ್ಕೆ ಬಳಸಿದ್ದ  ಗೂಡ್ಸ್ ವಾಹನ,  ಓಮಿನಿ ಕಾರ್ ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತಿದ್ದಾರೆ. ಸದರಿ ಪತ್ತೆ ಕಾರ್ಯವನ್ನು ಪೊಲೀಸ್ ಅಧೀಕ್ಷಕರು  ಚಿಕ್ಕಮಗಳೂರು ಜಿಲ್ಲೆ ರವರು  ಶ್ಲಾಘಿಸಿ ಬಹುಮಾನ ಘೋಷಿಸಿರುತ್ತಾರೆ.

ಪೊಲೀಸ್ ಅಧೀಕ್ಷಕರಾದ ಜಿತೇಂದ್ರಕುಮಾರ್  ದಯಾಮ್ ಐಪಿಎಸ್  ರವರು ಹಾಗೂ ಹೆಚ್ಚುವರು  ಪೊಲೀಸ್ ಅಧೀಕ್ಷಕರಾದ ಸಿ ಟಿ ಜಯಕುಮಾರ್ ರವರ ಹಾಗೂ  ಪೊಲೀಸ್ ಉಪಾಧೀಕ್ಷಕರಾದ ಬಾಲಾಜಿ ಸಿಂಗ್  ಕೊಪ್ಪ ಉಪ ವಿಭಾಗ  ರವರ  ಮಾರ್ಗದರ್ಶನದಲ್ಲಿ  ಗುರುದತ್ ಕಾಮತ್ ಸಿಪಿಐ ನ.ರಾ.ಪುರ , ಅಂಬರೀಶ್ ಪಿಎಸ್ ಐ ಬಾಳೆಹೊನ್ನೂರು  ಹಾಗೂ ಸಿಬ್ಬಂದಿಗಳಾದ  ಶಂಕರ್, ಶಂಕರಪ್ಪ ಎಂ.ಬಿ,  ಮನು, ಭೀಮಸೇನ್, ಗಿರೀಶ್ ಕುಮಾರ್,ಕಾರ್ತಿಕ್, ರಘು ಕೆ, ಆನಂದ ಬಿರಾದಾರ್, ಕಿರಣ್ ಕುಮಾರ್, ಮಂಜುನಾಥ ಬರಿಗಾಲ್. ಚನ್ನಯ್ಯ   ಜಿಲ್ಲಾ ಪೊಲೀಸ್ ಕಚೇರಿ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ನಯಾಜ್ ಅಂಜುಮ್, ರಬ್ಬಾನಿ ರವರ ತಂಡ ರಚನೆ ಮಾಡಿ ಅಡಿಕೆ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ