crime

 

 

ಧರ್ಮಸ್ಥಳದಲ್ಲಿ ಮಹಿಳಾ ಯಾತ್ರಾರ್ಥಿ ಒಬ್ಬರಿಗೆ ಪ್ರಜ್ಞೆ ತಪ್ಪುವ ಔಷಧಿ ನೀಡಿ ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಡೆದಿದೆ. 70 ವರ್ಷದ ಮಹಿಳೆಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಬೆಂಗಳೂರು ಬನ್ನೇರುಘಟ್ಟ ಮೂಲದ ಪ್ರೇಮಾ ಕೆ. ಮೋಸ ಹೋದ ಮಹಿಳೆ.

ಅಪರಿಚಿತರು ಪ್ರಸಾದ, ಜ್ಯೂಸ್ ನೀಡಿ ಪರಿಚಯ ಬೆಳೆಸಿ ಕೃತ್ಯ ಎಸಗಿದ್ದಾರೆ. 112 ಗ್ರಾಂ ಚಿನ್ನಾಭರಣ, 7 ಸಾವಿರ ನಗದು ಕಳವು ಮಾಡಲಾಗಿದೆ. ದೇವಸ್ಥಾನದ ಮುಖ್ಯದ್ವಾರದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ.

ಅಸ್ವಸ್ಥಗೊಂಡ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಕಲಂ 307 ಅಡಿ ಪ್ರಕರಣ ದಾಖಲಾಗಿದೆ. ಯಾತ್ರಾರ್ಥಿಗಳು ಅಪರಿಚಿತರಿಂದ ಆಹಾರ, ಪಾನೀಯ ಸ್ವೀಕರಿಸದಂತೆ ಪೊಲೀಸ್ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ