ಡಾ. ಕೆ. ಮಧುಕರ್ ಶೆಟ್ಟಿ ಐಪಿಎಸ್ ಸಮಾಜ ಸೇವಾ ಸಂಘ (ರಿ), ಗುಪ್ತಶೆಟ್ಟಿಹಳ್ಳಿ, ಅಲ್ದೂರು ಹೋಬಳಿ, ಚಿಕ್ಕಮಗಳೂರು ತಾಲ್ಲೂಕು ವತಿಯಿಂದ ಸೋಮವಾರ ಬಣಕಲ್ ಹೋಬಳಿಯ ದೊಡ್ಡನಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಸಾಮಗ್ರಿ ವಿತರಣೆ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ 11:30ಕ್ಕೆ ಶಾಲೆಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಸಭೆ ನಡೆಸಿದರು. ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರು, ಶಿಕ್ಷಕರು, ಅಂಗನವಾಡಿ ಸಹಾಯಕಿ, ಗ್ರಾಮಸ್ಥರು ಹಾಗೂ ಪೋಷಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್, ಪೆನ್ನು, ಪೆನ್ಸಿಲ್ ಹಾಗೂ ನೋಟ್‌ಬುಕ್‌ಗಳನ್ನು ವಿತರಿಸಲಾಯಿತು. ಅಂಗನವಾಡಿ ಮಕ್ಕಳಿಗೆ ಸ್ಲೇಟ್ ಹಾಗೂ ಬಳಪಗಳನ್ನು ನೀಡಲಾಯಿತು.
ಸಂಘದ ಅಧ್ಯಕ್ಷ ಬೈರಿಗದ್ದೆ ರಮೇಶ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯದರ್ಶಿ ಶ್ರೀಕಂಠ ಬಿ.ಆರ್. ಸೇರಿದಂತೆ ಪದಾಧಿಕಾರಿಗಳಾದ ಮಣಿಕಂಠ, ಕಿರಣ್ ಬಿ.ಆರ್., ಕುಮಾರ ಹಾಗೂ ಕಿಶೋರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ಮಹೇಶ್, ಅಂಗನವಾಡಿ ಸಹಾಯಕಿ ಸುಮ ಹಾಗೂ ಗ್ರಾಮಸ್ಥರಾದ ರಾಧಾ, ಪ್ರಶಾಂತಿ, ಶಾಂತ, ಸುನಿತಾ, ಚಿತ್ರ, ಅಶ್ವಿನಿ, ಸುಧಾ ಮತ್ತು ನಿಖಿಲ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



