Screenshot_20260629-111424~2

 

 

ಭರತನಾಟ್ಯ ವಿದೂಷಿ ಸುಮನಾ ನಮ್ಮೂರಿನ ಸಾಂಸ್ಕøತಿಕ ಶಕ್ತಿ ಮತ್ತು  ನೃತ್ಯ ಬಳಗದ ಸಾಂಸ್ಕøತಿಕ ಶಕ್ತಿಯೂ ಹೌದು ಎಂದು ಪ್ರಾಂಶುಪಾಲ ಹಿರಿಯ ಕಲಾವಿದ, ಸಾಹಿತಿ ನಾಗರಾಜರಾವ್ ಕಲ್ಕಟ್ಟೆ ಪ್ರಶಂಸಿಸಿದರು.

ಶ್ರೀಕಂಠೇಶ್ವರ ಕಲಾಮಂದಿರ ಶಿಷ್ಯವೃಂದ  ಮತ್ತು  ಪೋಷಕಬಳಗ ನೃತ್ಯಶಾಲೆಯ ಬೆಳ್ಳಿಹಬ್ಬದ ಪ್ರಯುಕ್ತ  ಭರತನಾಟ್ಯ ವಿದೂಷಿ ಸುಮನಾ ರಾಮಚಂದ್ರರಿಗೆ  ನಿನ್ನೆ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಿದ್ದ ಗುರುವಂದನಾ  ಸಮಾರಂಭ ‘ರಜತಪರ್ವ’ದಲ್ಲಿ  ಅವರು ಅಭಿನಂದನಾ ಭಾಷಣ ಮಾಡಿದರು.

ಬಾಲ್ಯದಿಂದಲೇ ನೃತ್ಯದ ಗೀಳು ಹಚ್ಚಿಕೊಂಡ ಹುಡುಗಿ ಗಣೇಶೋತ್ಸವದಲ್ಲಿ ವೇದಿಕೆ ಏರಿ ನೃತ್ಯಮಾಡಿ ಮೆಚ್ಚುಗೆ ಪಡೆಯುವುದರ ಜೊತೆಗೆ ಸುತ್ತಲ ಮಕ್ಕಳಿಗೆ ನಾಟ್ಯ ಕಲಿಸುವ ಮೂಲಕ ಸುಮನಾ ಗಮನ ಸೆಳೆದವರು.  700ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ನೃತ್ಯ ಪರೀಕ್ಷೆಗೆ ಅಣಿಗೊಳಿಸಿದ್ದಾರೆ.  2,000ಕ್ಕೂ ಹೆಚ್ಚು ನೃತ್ಯ ಕಾರ್ಯಕ್ರಮಗಳನ್ನು ಜಿಲ್ಲೆ, ರಾಜ್ಯಗಳಲ್ಲಿ ನೀಡಿ ಕಲಾಸಕ್ತರ ಗಮನಸೆಳೆದಿದ್ದಾರೆ.

ಕಲೆ, ಸಂಸ್ಕøತಿಯ ಜೊತೆಗೆ ಜೀವನ ಪ್ರೀತಿಯನ್ನೂ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಗಿಸುತ್ತಿರುವ ಸುಮನಾ,  ವಿದ್ಯಾರ್ಥಿಗಳನ್ನು ಪ್ರೀತಿಸಿ ತಿದ್ದಿ-ತೀಡಿ ಸಂಗೀತವನ್ನೂ ಕಲಿಸಿ ಜೊತೆಗೆ ಶಿಸ್ತು ನಡವಳಿಕೆಯನ್ನು ರೂಢಿಸಿಕೊಳ್ಳುವಂತೆ ಮಾಡಿರುವುದು ಹೆಚ್ಚುಗಾರಿಕೆ.  20ವಿದ್ಯಾರ್ಥಿನಿಯರು ವಿದ್ವತ್ ಪೂರ್ಣಗೊಳಿಸಿದ್ದು, 6 ಕಲಾವಿದರು ರಂಗಪ್ರವೇಶ ಮಾಡಿದ್ದು, 10ಕ್ಕೂ ಶಿಷ್ಯರು ವಿವಿಧೆಡೆ ನೃತ್ಯಶಿಕ್ಷಕಿಯರಾಗಿ ಸೇವೆ ಸಲ್ಲಿಸುತ್ತಿದ್ದಾರೆಂದು ನಾಗರಾಜರಾವ್ ವಿವರಿಸಿದರು.

ಜಿಲ್ಲೆಯಲ್ಲಿ ಹಲವು ಸಾಧಕರಿದ್ದು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗುರುತಿಸಿ-ಗೌರವಿಸುತ್ತಿದ್ದ ಪರಂಪರೆ ಕಳೆದ 9ವರ್ಷಗಳಿಂದ ಸ್ಥಗಿತಗೊಂಡಿರುವುದು ವಿಷಾದನೀಯ.  ಜನಪ್ರತಿನಿಧಿಗಳು ಗಮನಹರಿಸಿ ಇಂತಹ ಸೇವೆ ಸಲ್ಲಿಸುವವರೆಗೆ ಕನಿಷ್ಠ ಜಿಲ್ಲಾ ಪ್ರಶಸ್ತಿಯಾದರೂ ನೀಡುವುದು ಸೂಕ್ತ ಎಂದರು.

ಶಿಷ್ಯ ಪ್ರೀತಿಯ ಜೊತೆಗೆ ಇಡೀ ಕುಟುಂಬದ ವಾತ್ಸಲ್ಯ ಸಂಪಾದಿಸಿದವರು.  ಕನ್ನಡ ಕುವರಿಗೆ ಇಂಗ್ಲೀಷ್ ಕಾದಂಬರಿಗಳನ್ನು ಓದುವ ಗೀಳು.  ಜಿಡ್ಡು, ಜಗ್ಗಿ, ಭಾರತಿಗಳು… ಸೇರಿದಂತೆ ಸಾಧಕರನ್ನು ಓದುವ ಸುಮನಾಗೆ ಆಧ್ಯಾತ್ಮಿಕ ಸೆಳೆತವಿದೆ.  ಪ್ರಸ್ತುತ ಇಂಗ್ಲೀಷ್ ಎಂಎ ಮಾಡುತ್ತಿದ್ದು, ಕದಂಬ-ಹಂಪಿ-ದಸರಾ-ತ್ರಿಶೂರ್ ಮತ್ತಿತರ ಉತ್ಸವಗಳೂ ಸೇರಿದಂತೆ ನಾಡಿನ ಪ್ರಮುಖ ಉತ್ಸವವಗಳಲ್ಲಿ ನೃತ್ಯಕಾರ್ಯಕ್ರಮ ನೀಡಿರುವ ಸುಮನಾ,  ಹುಟ್ಟಿದ್ದು ಹಾಸನವಾದರೂ ಅವರ ಹೆಚ್ಚಿನ ಸೇವೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂದಾಯವಾಗಿದೆ ಎಂದ ನಾಗರಾಜರಾವ್, ಈವರೆಗೂ ಯಾವುದೇ ಪ್ರಶಸ್ತಿ ಬರದಿದ್ದರೂ ಶಿಷ್ಯವೃಂದ ಪ್ರೀತಿಪೂರ್ವಕವಾಗಿ ಅದ್ಧೂರಿ ಅಭಿನಂದನಾ ಸಮಾರಂಭ ನಡೆಸುತ್ತಿರುವುದು ಸಂತೋಷದ ಸಂಗತಿ ಎಂದರು.

ಖ್ಯಾತ ಭರತನಾಟ್ಯಕಲಾವಿದೆ ವಿದೂಷಿ ಅಂಬಳೆರಾಜೇಶ್ವರಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ  ಎರಡುಲಕ್ಷ ಶಿಷ್ಯರನ್ನು ಹೊಂದಿರುವ ತಮಗೆ ಸುಮನಾ ಪ್ರೀತಿ ಪಾತ್ರಳು.  ಮಾನಸಪುತ್ರಿಯೂ ಹೌದು.  ಅಭಿಜಾತ ಪ್ರತಿಭೆ, ಪೋಷಕರ ಸಹಕಾರ. ಒಳ್ಳೆಯ ಗುರು, ರಾಕ್ಷಸ ಸಾಧನೆ, ಅದೃಷ್ಟ  ಹೀಗೆ  ಸಾಧಕರಿಗೆ ಬೇಕಾದ ಐದೂ ಲಕ್ಷಣ ಇವರಲ್ಲಿದೆ.  ಸಾಮಾನ್ಯವಾಗಿ ಕಲಾವಿರ ನಗುವಿನ ಹಿಂದೆ ನೋವು ಇರುತ್ತದೆ.  ಆದರೆ ಸುಮನಾ ಇದಕ್ಕೆ ಅಪವಾದ ಎಂದವರು ಶ್ಲಾಘಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಪ್ರತಿಭೆ ಯಾರೊಬ್ಬರ ಸ್ವತ್ತೂ ಅಲ್ಲ, ಸಾಧಕರಿಗೆ ಒಲಿಯುತ್ತದೆ.  ಸ್ವಾಸ್ಥ್ಯಸಮಾಜ ನಿರ್ಮಾಣಕ್ಕೆ ಕಲಾವಿದರೂ ಹಾಗೂ ತಾಯಂದಿರ ಪಾತ್ರ ಗಣನೀಯವಾಗಿರುತ್ತದೆ ಎಂದರು.

ಶಿಷ್ಯವೃಂದದ ಪೋಷಕರ ಪರವಾಗಿ ಅಭಿಪ್ರಾಯ ಹಂಚಿಕೊಂಡ ಎಐಟಿ ಪ್ರಾಂಶುಪಾಲ ಡಾ.ಎಂ.ಎ.ಗೌತಮ್  ನಾಟ್ಯದ ಜೊತೆಗೆ ಸಂಗೀತ, ಸಾಹಿತ್ಯ, ಜೀವನ ಕೌಶಲ್ಯಗಳನ್ನು ಕಲಿಸುವ ಸುಮನಾ,  ಮಕ್ಕಳಿಗಿಂತ ಶಿಕ್ಷಕರಿಗೆ ಹೆಚ್ಚಿನ ಶ್ರದ್ಧೆ ಅಗತ್ಯವೆಂದು ನಂಬಿ ನಡೆದವರೆಂದರು.

ಎಐಟಿ ವಿ.ವಿ. ರಿಜಿಸ್ಟಾರ್ ಡಾ.ಸಿ.ಕೆ.ಸುಬ್ರಾಯ ಮಾತನಾಡಿ ನೃತ್ಯವನ್ನು ಪ್ರೀತಿಸಿ ತಪಸ್ಸಿನಂತೆ ಆಚರಿಸಿಕೊಂಡು ಬಂದ ಸಾಧಕಿಗೆ ಇನ್ನಷ್ಟು ಪ್ರೋತ್ಸಾಹ ನೀಡಬೇಕಾಗಿದೆ ಎಂದರು.

ಸಂಗೀತ ಶಿಕ್ಷಕ ವಿದ್ವಾನ್ ಕೆ.ಆರ್.ವೆಂಕಟೇಶ್  ಮಾತನಾಡಿ ಬಹುಮುಖ ಪ್ರತಿಭೆಯ ಸುಮನಾಗೆ ಸಂಗೀತ ಪಾಠ ಹೇಳಿದ್ದು ಸುಕೃತ.  ಸಾಧಕಿಗೆ ‘ಗಾನ ಕಲಾ ಕಸ್ತೂರಿ’ ಎಂಬ ಅಭಿದಾನ ನೀಡಿ ಆಶೀರ್ವದಿಸಿದರು.

ಅಭಿನಂದನೆಗೆ  ಕೃತಜ್ಞತೆ ಸಲ್ಲಿಸಿ ಮಾತನಾಡಿದ ಶ್ರೀಕಂಠೇಶ್ವರ ಕಲಾಮಂದಿರದ ಪ್ರಧಾನಗುರು ಸುಮನಾರಾಮಚಂದ್ರ, ಹಾಸನದಲ್ಲಿ ಹುಟ್ಟಿ ಬಾಲ್ಯ ಕಳೆದ ದಿನಗಳನ್ನು ಮೆಲುಕುಹಾಕಿದರು. ತಂದೆಯ ಪ್ರೋತ್ಸಾಹ, ತಾಯಿಯ ಪರಿಶ್ರಮ ನೃತ್ಯ ಕಲಿಯುವ ಆಸೆ ಈಡೇರಿಸಿತು. ರಾಮಚಂದ್ರ ಅವರನ್ನು ವಿವಾಹವಾಗಿ ಚಿಕ್ಕಮಗಳೂರಿಗೆ ಬಂದ ನಂತರ ಹಲವು ಶಿಕ್ಷಣಸಂಸ್ಥೆಗಳಲ್ಲಿ ನೃತ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸುವ ಅವಕಾಶವಾಗಿದ್ದು ನಂತರ ಸರ್ಕಾರದ ನೇಮಕಾತಿಯೂ ಆಗಿದ್ದು ಹರ್ಷ ತಂದಿದೆ ಎಂದಿದೆ.

25ವರ್ಷಗಳ ಹಿಂದೆ ಹಾಸನದಲ್ಲಿ ಪ್ರಾರಂಭಿಸಿದ ನೃತ್ಯಶಾಲೆಯನ್ನು ಎರಡುವರ್ಷಗಳ ನಂತರ ಇಲ್ಲಿಗೆ ವರ್ಗಾಯಿಸಲಾಯಿತು.  ನೃತ್ಯ ತರಗತಿ, ಕಾರ್ಯಕ್ರಮ, ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ ತೃಪ್ತಿ ಇದೆ.  ಸುಸಂಸ್ಕøತರಿರುವ ಊರಿನ ಜನರು ಬೊಗಸೆ ತುಂಬಿ ಪ್ರೀತಿ ಕೊಟ್ಟಿದ್ದಾರೆ.  ಕಲಾವಿದರನ್ನು ಗೌರವಿಸುವ ಗುಣವಿಶೇಷ ಈ ಮಣ್ಣಿನದೆಂದರು.

ಕಲೆಯಿಂದ ನಾವಿದ್ದೇವೆ.  ಕಲೆ ನಮಗೆ ಸೇವೆ ಮಾಡುವ ಅವಕಾಶ, ಐಡೆಂಟಿಟಿ, ಒಳ್ಳೆಯ ಆಕೃತಿಯನ್ನು ಕೊಟ್ಟಿದೆ.  ಕಲೆ ಒಳ್ಳೆಯ ಹಾದಿಗೆ ಕರೆದೊಯ್ಯುತ್ತಿದೆ.  ಕಲೆಯ ಶಕ್ತಿ, ಭಕ್ತಿ ಅದ್ಭುತ. ಶಿಷ್ಯರು ನೃತ್ಯ ಸಂಗೀತದ ಜೊತೆಗೆ ಸಮಾಜ ಎದುರಿಸುವ ಸಾಮಥ್ರ್ಯವನ್ನೂ ಪಡೆದಿರುವ ಪುಣ್ಯಫಲವೆಂದ ಸುಮನಾ,  ಕಲಾವಿದಸ್ನೇಹಿತರ ಸಹಕಾರ, ಕುಟುಂಬ, ಶಿಷ್ಯವೃಂದ, ಪೋಷಕರ  ಪ್ರೋತ್ಸಾಹಕ್ಕೆ ವಂದನೆ ಸಲ್ಲಿಸಿದರು.

ಭರತನಾಟ್ಯ ಕಲಾವಿದೆ-ಉಪನ್ಯಾಸಕಿ ಡಾ.ಶಿಲಾಲಿಗೌತಮ್ ಸ್ವಾಗತಿಸಿ, ಸಂಗೀತಾ ವಂದಿಸಿದರು.  ಪಲ್ಲವಿಗೌಡ ಕಾರ್ಯಕ್ರಮ ನಿರೂಪಿಸಿದರು.  ಶ್ರೀಕಂಠೇಶ್ವರ ಭರತನಾಟ್ಯ ವಿದ್ಯಾರ್ಥಿಗಳಿಂದ ಗುರುಗೌರವ  ನೃತ್ಯನಮನ ಕಾರ್ಯಕ್ರಮ ಗಮನಸೆಳೆಯಿತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ