NEWS 3

 

 

ಕಟ್ಟಡ ಸಾಮಾಗ್ರಿಗಳ ದರ ಹೆಚ್ಚಿರುವ ಕ್ರಶರ್ ಮಾಲೀಕರ ವಿರುದ್ಧ ಮಂಗಳವಾರ ಚಿಕ್ಕಮಗಳೂರು ನಗರದ ಆಜಾದ್‍ಪಾರ್ಕ್ ವೃತ್ತದಲ್ಲಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮಾಲೀಕರು, ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಂಘದ ಮುಖಂಡರುಗಳು ಮಾತನಾಡಿ ಕ್ರಶರ್ ಮಾಲೀಕರು ಯಾವುದೇ ಮಾಹಿತಿ ಅಥ ವಾ ಸಭೆ ನಡೆಸದೇ ದಿಡೀರನೇ ಕಟ್ಟಡ ಸಾಮಾಗ್ರಿಗಳ ದರ ಏರಿಸಿರುವುದು ಖಂಡನೀಯ. ಈ ಬಗ್ಗೆ ಕ್ರಶರ್ ಮಾಲೀಕರಿಗೆ ವಿಚಾರಿಸಿದರೆ ದೌರ್ಜನ್ಯವೆಸಗಿ, ಅವಶ್ಯವಿದ್ದಲ್ಲಿ ಮಾತ್ರ ತೆಗೆದುಕೊಳ್ಳಿ ಎಂಬ ಉಡಾಫೆ ನೀಡುತ್ತಿ ದ್ದಾರೆ ಎಂದು ದೂರಿದರು.

ಟಿಪ್ಪರ್ ಹಾಗೂ ಟ್ರ್ಯಾಕ್ಟರ್ ಮಾಲೀಕರ ಗಮನಕ್ಕೂ ತಾರದೇ ಏಕಾಏಕಿ ದರ ಏರಿಸಿರುವುದು ಸರಿಯಾ ದ ಕ್ರಮವಲ್ಲ. ಜಿಲ್ಲೆ ಪಂಚ ನದಿಗಳ ಉಗಮ ಸ್ಥಾನವಾಗಿದೆ. ಮರಳು ಯಥೆಚ್ಚವಾಗಿ ಲಭ್ಯವಾಗಲಿದೆ. ಆದರೆ ಕಳೆದ ಅನೇಕ ವರ್ಷಗಳಿಂದ ಮರಳನ್ನು ಒದಗಿಸುತ್ತಿಲ್ಲ. ಆದರೆ ಬೇರೆ ಜಿಲ್ಲೆಗಳಿಗೆ ಮರಳನ್ನು ಸಲೀಸಾಗಿ ನೀಡಲಾಗುತ್ತಿದೆ ಎಂದರು.

ಕಟ್ಟಡ ಸಾಮಾಗ್ರಿಗಳು ಜಿಲ್ಲೆಯ ಬೇರೆ ತಾಲ್ಲೂಕು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ದರ ಕಡಿಮೆಯಿದೆ. ಆದರೆ ಚಿಕ್ಕಮಗಳೂರು ತಾಲ್ಲೂಕು ಮಾತ್ರ ದರ ಏರಿಕೆ ಮಾಡಲಾಗಿದೆ. ಸಾಮಾಗ್ರಿ ಏರಿಕೆಗೊಂಡಲ್ಲಿ ಗ್ರಾಹಕ ರು ಟಿಪ್ಪರ್, ಟ್ರ್ಯಾಕ್ಟರ್ ಮಾಲೀಕರ ಮೇಲೆ ದೂರುತ್ತಿದ್ದು, ಇದಕ್ಕೆ ಕ್ರಶರ್ ಮಾಲೀಕರೇ ನೇರವಾಗಿ ಉತ್ತರಿಸ ಬೇಕು ಎಂದು ಹೇಳಿದರು.

ಕ್ರಶರ್ ಸ್ಥಳದಿಂದ 15 ಟನ್ ಎಂ.ಸ್ಯಾಡ್ ಲೋಡ್ ಮಾಡಿದರೆ, ನಗರಕ್ಕೆ ತಲುಪುವಷ್ಟರಲ್ಲಿ 1 ಟನ್ ಕಡಿಮೆಯಾಗುತ್ತಿದೆ. ಇದರಿಂದ ಗ್ರಾಹಕರು ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮಾಲೀಕರನ್ನು ಕಳ್ಳರಂತೆ ಬಿಂಬಿಸುವ ಮೂಲಕ ನೇರ ಹೊಣೆಯಾಗಿ ಚಾಲಕರನ್ನು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯ ಕ್ರಶರ್ ಮಾಲೀಕರ ದೌರ್ಜನ್ಯ ಇಡೀ ರಾಜ್ಯಾದ್ಯಂತ ಗೋಚರವಾಗುತ್ತಿದೆ. ಕೂಡಲೇ ಈ ಬಗ್ಗೆ ಕ್ರಶರ್ ಮಾಲೀಕರು ಎಚ್ಚೆತ್ತುಕೊಂಡು ದರ ಕಡಿಮೆಗೊಳಿಸಿ, ನ್ಯಾಯ ಒದಗಿಸಬೇಕು. ನಿರ್ಲಕ್ಷಿಸಿದರೆ ಮುಂದೆ ಸಂಘದ ರಾಜ್ಯಾಧ್ಯಕ್ಷರು, ಅಕ್ಕಪಕ್ಕದ ಜಿಲ್ಲಾಧ್ಯಕ್ಷರು ಜಿಲ್ಲೆಗಾಗಮಿಸಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಇದೇ ವೇಳೆ ಸ್ಥಳಕ್ಕಾಗಮಿಸಿದ ಶಿರಸ್ತೇದಾರ್ ಮನು ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಮಾಲೀಕರ, ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾ ಧ್ಯಕ್ಷ ಜಗದೀಶ್, ಸದಸ್ಯರಾದ ಲಕ್ಷ್ಮಣಗೌಡ, ಹಾಲೇಗೌಡ, ಸುರೇಶ್, ರಮೇಶ್, ತಿಮ್ಮಶೆಟ್ಟಿ, ಮಂಜು, ನಟರಾಜ್, ಮಣಿ, ವೆಂಕಟೇಶ್, ರಾಕೇಶ್ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ