1003663446

 

 

ಚಿಕ್ಕಮಗಳೂರು ವೈಲ್ಡರ್ ನೆಸ್ ಕ್ಲಬ್ ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ವತಿಯಿಂದ ಅಕ್ಟೋಬರ್ 3 ರಂದು ಮೂಡಿಗೆರೆಯಲ್ಲಿ ಹಮ್ಮಿಕೊಳ್ಳುತ್ತಿರುವ ಮ್ಯಾರಾಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆಯ ಪ್ರಮೋಷನ್ ಬ್ಯಾನರ್ ಬಿಡುಗಡೆ ಮಾಡಲಾಯಿತು.

ಈ ಬಗ್ಗೆ ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ಅಧ್ಯಕ್ಷ ಸಾಂಜಿತ್ ಗೌಡ ಹಾಗೂ ಕಾರ್ಯದರ್ಶಿ ಡಾ. ಕೌಸಿಕ್  ಮಾಹಿತಿ ಹಂಚಿಕೊಂಡಿದ್ದಾರೆ.

ಮೂಡಿಗೆರೆ ಕಾಫಿ ಕೋರ್ಟ್ ನಲ್ಲಿ ಭಾನುವಾರ ಸಂಜೆ ನಡೆದ ಸರಳ ಕಾರ್ಯಕ್ರಮದಲ್ಲಿ ಮ್ಯಾರಾಥಾನ್ ಸ್ಪರ್ಧೆಯ ಬ್ಯಾನರ್ ಅನಾವರಣ ಮಾಡಲಾಯಿತು.

ಕಾಫಿ ಕೋರ್ಟ್ ಅಧ್ಯಕ್ಷ ಡಿ.ಬಿ. ಜಯಪ್ರಕಾಶ್ ಅವರು ಪ್ರಮೋಷನ್ ಬ್ಯಾನರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣ, ಮುದ್ರೆಮನೆ ಕಾಫಿ ಅಂಡ್ ಸ್ಪೈಸಸ್ ಎಕ್ಸಿಕ್ಯೂಟೀವ್ ಡೈರೆಕ್ಟರ್ ಕುಮಾರಿ ಸಮೀಕ್ಷ, ಉಪಸ್ಥಿತರಿದ್ದರು. ಪ್ರವೀಣ್ ಬಣಕಲ್ ಕಾರ್ಯಕ್ರಮ ನಿರೂಪಿಸಿದರು.

ಚಿಕ್ಕಮಗಳೂರು ವೈಲ್ಡರ್ ನೆಸ್ ಕ್ಲಬ್ ಮತ್ತು ಚಿಕ್ಕಮಗಳೂರು ಸೈಕ್ಲಿಂಗ್ ಕ್ಲಬ್ ವತಿಯಿಂದ  2022ರಲ್ಲಿಪ್ರಥಮ ಬಾರಿಗೆ ಖಾಂಡ್ಯ ಕ್ಲಬ್ ನಲ್ಲಿ ಮ್ಯಾರಾಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆಯನ್ನು ಯಶಸ್ವಿಯಾಗಿ ಏರ್ಪಡಿಸಿದ್ದೆವು. ಇದೀಗ ಮಲೆನಾಡ ಮಡಿಲು ಮೂಡಿಗೆರೆಯಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸ್ಪರ್ಧೆ ಮೂಡಿಗೆರೆ ಕಾಫಿ ಕೋರ್ಟ್ ಆವರಣದಿಂದ ಪ್ರಾರಂಭವಾಗಲಿದೆ. ಮುದ್ರೆಮನೆ ಕಾಫಿ ಅಂಡ್ ಸ್ಪೈಸಸ್ ಸ್ಪರ್ಧೆಯ ಟೈಟಲ್ ಸ್ಪಾನ್ಸರ್ ಆಗಿದ್ದು, ಕಾಫಿ ಕೋರ್ಟ್ ಮೂಡಿಗೆರೆ ವೆನ್ಯೂ ಸ್ಪಾನ್ಸರ್ ಹಾಗೂ ವೀರು ಅವರ ಮಾಯಾಸ್ ಕಾನ್ಸೆಪ್ಟ್ ಸ್ಟುಡಿಯೋ ಡಿಜಿಟಲ್ ಪಾರ್ಟನರ್ ಆಗಿದ್ದಾರೆ.

10 K   ಮತ್ತು 5 K ಮ್ಯಾರಾಥಾನ್ ಜೊತೆಗೆ ಸೈಕ್ಲಿಂಗ್ ಸ್ಪರ್ಧೆಯು ಇರುತ್ತದೆ. ರಾಜ್ಯ ಮತ್ತು ಹೊರರಾಜ್ಯಗಳ ಸ್ಪರ್ಧಾಳುಗಳು ಭಾಗವಹಿಸುತ್ತಾರೆ. ಸ್ಪರ್ಧೆ ಸಾಗುವ ಮಾರ್ಗ ಮತ್ತಿತರ ಮಾಹಿತಿಗಳ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಆಸಕ್ತರು ಸ್ಪರ್ಧೆಯಲ್ಲಿ ಭಾಗವಹಿಸಲು ಮುಕ್ತ ಅವಕಾಶವಿದೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಸ್ಪರ್ಧೆಯ ವಿವರ ಮತ್ತು ಎಂಟ್ರಿ ಫಾರಂ ಇರಲಿದ್ದು, ಆನ್ ಲೈನ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ ಎಂದು  ಸಂಘಟಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ