suddi-6 (4)

 

 

ಚಿಕ್ಕಮಗಳೂರು  ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್‍ಗೆ ನೂತನ ಅಧ್ಯಕ್ಷರಾಗಿ ಕೆ.ಪಿ.ಸತೀಶ್‍ಗೌಡ ಮತ್ತು ಉಪಾಧ್ಯಕ್ಷರಾಗಿ ಎಲ್.ಆರ್.ಈಶ್ವರಪ್ಪ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಂದ್ಯಾರಾಣಿ ಕಾರ್ಯನಿರ್ವಹಿಸಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಅಭಿನಂದನೆ ಸಲ್ಲಿಸಿ ಮಾತನಾಡಿ 1931ರ ಸ್ವಾತಂ ತ್ರ್ಯ ಪೂರ್ವದ ಮುನ್ನವೇ ಸ್ಥಾಪನೆಗೊಂಡ ಬ್ಯಾಂಕ್ ಕೆಲವೇ ವರ್ಷಗಳಲ್ಲಿ ಶತಮಾನೋತ್ಸವ ಪೂರೈಸು ತ್ತಿದೆ. ಆರಂಭದಲ್ಲಿ ಭೂಅಭಿವೃಧ್ದಿಗೆ ಸಾಲಸೌಲಭ್ಯ ಕೊಡುವ ಮೂಲಕ ರೈತರ ಬದುಕಿಗೆ ಆಸರೆಯಾಗಿತ್ತು ಎಂದರು.

ರೈತರ ಅಭಿವೃದ್ದಿಗಾಗಿ ಮೀಸಲಿರುವ ಬ್ಯಾಂಕ್ ಶೇ.3 ರಷ್ಟು ಕಡಿಮೆ ಬಡ್ಡಿದರದಲ್ಲಿ ರೈತರಿಗೆ ಸಾಲಸೌ ಳಭ್ಯದ ನೆರವು ಕಲ್ಪಿಸುವಂತಾಗಲಿ. ಈ ಸಂಸ್ಥೆಯನ್ನು ಆಡಳಿತ ಮಂಡಳಿ ನಿರ್ದೇಶಕರು, ರೈತಾಪಿ ವರ್ಗವು ಉಳಿಸಿ, ಬೆಳೆಸುವ ಕಾಯಕದಲ್ಲಿ ತೊಡಗಿಸಿಕೊಂಡು ವಿಶ್ವಾಸ, ನಂಬಿಕೆ ಗಳಿಸಿಕೊಳ್ಳಬೇಕೆಂದು ಆಶಿಸಿದರು.

ಬ್ಯಾಂಕ್‍ನ ನೂತನ ಅಧ್ಯಕ್ಷ ಕೆ.ಪಿ.ಸತೀಶ್‍ಗೌಡ ಮಾತನಾಡಿ ಎನ್‍ಡಿಎ ಮೈತ್ರಿಯಂತೆ ಬ್ಯಾಂಕ್ ಆಡಳಿತ ಮಂಡಳಿಯ ಎರಡನೇ ಅವಧಿಗೆ ಜೆಡಿಎಸ್ ನಿರ್ದೇಶಕರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಅವಧಿಯಲ್ಲಿ ಬ್ಯಾಂಕ್ ಅಭಿವೃದ್ದಿ ಹಾಗೂ ರೈತರ ಏಳಿಗೆಗಾಗಿ ನಿಕಟಪೂರ್ವ ಅಧ್ಯಕ್ಷರು, ಹಾಲಿ ಉಪಾಧ್ಯಕ್ಷರು, ನಿರ್ದೇ ಶಕರ ಸಹಕಾರದಿಂದ ಮುಂದುವರೆಸುತ್ತೇನೆ ಎಂದು ಭರವಸೆ ನೀಡಿದರು.

ನಿಕಟಪೂರ್ವ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ ಎನ್‍ಡಿಎ ಒಪ್ಪದದಂತೆ ಮುಂದಿನ ಅವಧಿಗೆ ಇತರೆ ನಿರ್ದೇಶಕರಿಗೆ ಅವಕಾಶ ಕಲ್ಪಿಸಿದೆ. ತಮ್ಮ ಅವಧಿಯಲ್ಲಿ ಪಕ್ಷಾತೀತವಾಗಿ ಎಲ್ಲರಿಗೂ ನ್ಯಾಯ ಒದಗಿಸ ಬೇಕು. ಮುಂದೆ ಬ್ಯಾಂಕ್ ಅಭಿವೃದ್ದಿ ಹಾಗೂ ರೈತರ ಜೀವನ ಉತ್ತೇಜನ, ಸಾಲಸೌಲಭ್ಯ ಕಲ್ಪಿಸುವ ಕಡೆ ಹೆಚ್ಚು ಒತ್ತು ನೀಡಬೇಕು ಎಂದು ತಿಳಿಸಿದರು.

ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‍ಶೆಟ್ಟಿ, ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗ ಯ್ಯ ಸೇರಿದಂತೆ ಸ್ನೇಹಿತರು, ಬ್ಯಾಂಕ್ ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕ್ ನಿರ್ದೇಶಕರುಗಳಾದ ವಿ.ಎನ್.ರಮೇಶ್, ಈ.ಆರ್.ಮಹೇಶ್, ದಾನಿಹಳ್ಳಿ ಮಂಜುನಾಥ್, ರಾಜು ಮಣೇನಹಳ್ಳಿ, ಎ.ಎಲ್.ದಿನೇಶ್, ಎಂ.ಟಿ.ಸುನೀಲ್, ಟಿ.ಈ.ದಿನೇಶ್, ಶಶಿ ಚಂದ್ರೇ ಗೌಡ, ಹೇಮಾವತಿ, ಮ್ಯಾನೇಜರ್ ಚೇತನ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ