suddi-2

 

 

ಪತ್ರಿಕಾ ರಂಗ ಸಮಾಜದ ಒಂದು ಕಣ್ಣಿನಂತೆ. ಜನಸಾಮಾನ್ಯರ ಸಮಸ್ಯೆ ಆಲಿಸುವ ಜೊತೆಗೆ ಅಧಿಕಾರಿಗಳ ಸರಿ-ತಪ್ಪುಗಳನ್ನು ನೇರವಾಗಿ ತಿಳಿಸುವ ಮುಖೇನಾ ಸಮಾಜಕ್ಕೆ ದಾರಿ ತೋರುತ್ತಿರುವ ಮಾರ್ಗದರ್ಶಕರು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನಾ ಹೇಳಿದರು.

ಚಿಕ್ಕಮಗಳೂರು ನಗರದ ಸುಭಾಶ್‍ಚಂದ್ರ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತ ರ ಸಂಘದ ಜಿಲ್ಲಾ ಘಟಕದಿಂದ ಆಯೋಜಿಸಿದ್ಧ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಾಮಾನ್ಯರ ಕುಂದುಕೊರತೆ ಆಲಿಸಿ, ಅಧಿಕಾರಿಗಳ ಕಣ್ತೆರೆಸುವ ನಿರಂತರ ಕಾಯಕದಲ್ಲಿ ಪತ್ರಕರ್ತ ರು ಕೆಲಸ ಮಾಡುತ್ತಿದ್ದಾರೆ. ಗ್ರಾಮೀಣ ಸೇರಿದಂತೆ ದೊಡ್ಡಮಟ್ಟಿನ ಅಧಿಕಾರಿ ವೃಂದದವರ ಸರಿ-ತಪ್ಪುಗಳ ನ್ನು ಪತ್ರಿಕೋದ್ಯಮ ಮೂಲಕ ಬಹಿರಂಗಪಡಿಸಿ ಸರಿದಾರಿಗೆ ಕೊಂಡೊಯ್ಯುವುದು ಮಹತ್ತರ ಕೆಲಸ ಎಂದು ಹೇಳಿದರು.

ಸಮಾಜದ ಏಳಿಗೆ, ಸಾಮಾನ್ಯ ಜನರ ಧ್ವನಿಯಾಗಿ ಕರ್ತವ್ಯ ನಿರ್ವಹಿಸುವ ಪತ್ರಕರ್ತರು, ಒಂದು ದಿನ ದ ಮಟ್ಟಿಗೆ ವೃತ್ತಿ ಬದುಕನ್ನು ಬದಿಗಿರಿಸಿ, ಮಾನಸಿಕ, ದೈಹಿಕವಾಗಿ ಸದೃಢವಾಗಲು ಕ್ರೀಡಾಕೂಟದಲ್ಲಿ ಭಾಗ ವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ವೃತ್ತಿ ಜೀವನದ ಮಾನಸಿಕ ಒತ್ತಡಗಳನ್ನು ಕಡಿಮೆಗೊಳಿಸಲು ಸಹಕಾರಿ ಎಂದರು.

ಜಿಲ್ಲಾ ಪೊಲೀಸ್ ಹೆಚ್ಚುವರಿ ಅಧೀಕ್ಷಕ ಸಿ.ಟಿ.ಜಯಕುಮಾರ್ ಮಾತನಾಡಿ ಪತ್ರಕರ್ತರು ಮತ್ತು ಪೋ ಲೀಸರ ಸಂಬಂಧ ಅವಿಭಾವದಾಗಿದೆ. ಅನೇಕ ಪ್ರಕರಣಗಳಲ್ಲಿ ಪತ್ರಕರ್ತರ ಸಹಾಯದಿಂದ ಪ್ರಕರಣ ಇತ್ಯ ರ್ಥಗೊಳಿಸಲು ಸಾಕ್ಷಿಯಾಗಿದ್ದು ಒಟ್ಟಾರೆ ಪತ್ರಕರ್ತರು ಮತ್ತು ಪೊಲೀಸರ ಅವಿಸ್ಮರಣೀಯ ಸೇವೆ ಸಮಾ ಜದ ಪರಿವರ್ತನೆಗೆ ಕಾರಣವಾಗಲಿದೆ ಎಂದು ಹೇಳಿದರು.

ಕೆಯುಡ್ಲ್ಯೂಜೆ ಜಿಲ್ಲಾಧ್ಯಕ್ಷ ಅನಿಲ್‍ಆನಂದ್ ಮಾತನಾಡಿ ಜಿಲ್ಲೆಯ ಪತ್ರಕರ್ತರು, ಪತ್ರಿಕಾ ವಿತರಿಕರಿಗೆ ಕ್ರೀಡಾಕೂಟ ಆಯೋಜಿಸುವ ಮೂಲಕ ಶಾರೀರಿಕವಾಗಿ ಗಟ್ಟಿಗೊಳಿಸಲಾಗುತ್ತಿದೆ. ಇಂದು ಜಿಲ್ಲೆಯ ಬಹುತೇ ಕ ಎಲ್ಲಾ ತಾಲ್ಲೂಕು ಘಟಕದಿಂದ ಕ್ರೀಡಾಭಿಮಾನಿಗಳು ಭಾಗವಹಿಸಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿರುವು ದು ಅತ್ಯಂತ ಹೆಮ್ಮೆಯ ಸಂಗತಿ ಎಂದು ತಿಳಿಸಿದರು.

ಹಿರಿಯ ಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು ಮಾತನಾಡಿ ಪತ್ರಿಕೋದ್ಯಮ ಅತಿಹೆಚ್ಚು ರಾಜಕೀಯ ಆಟದಲ್ಲಿ ತಲ್ಲೀನರಾಗುತ್ತಾರೆ. ಇದೀಗ ಎಲ್ಲವನ್ನು ಬದಿಗಿರಿಸಿ ಆರೋಗ್ಯ ಕಾಪಾಡುವ ಕ್ರೀಡಾ ಉತ್ಸª ಜಿಲ್ಲಾ ಮಟ್ಟದಲ್ಲಿ ಆಚರಿಸುತ್ತಿರುವುದು ಖುಷಿಯ ಸಂಗತಿ. ಈ ಆಟದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬದಿಗಿರಿಸುವ ಮೂಲಕ ಗೆದ್ದರು, ಸೋತರು ನಮ್ಮವರೆಂದು ಪರಿಗಣಿಸಬೇಕು ಎಂದು ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ಕೆ.ಯು.ಡಬ್ಲ್ಯೂ.ಜೆ. ರಾಜ್ಯ ಉಪಾಧ್ಯಕ್ಷ ಮದನ್‍ಗೌಡ, ರಾಜ್ಯ ಸಮಿತಿ ಸದಸ್ಯ ವಿಜಯ್‍ಕುಮಾರ್, ಹಿರಿಯ ಸದಸ್ಯ ಎ.ಎನ್.ಮೂರ್ತಿ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು, ಕ್ರೀಡಾ ಭಿಮಾನಿಗಳು, ಎಲ್ಲಾ ತಾಲ್ಲೂಕು ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ