suddi-10(A)

 

 

ಮಲೆನಾಡು ಭಾಗದ ಗ್ರಾಮೀಣ ಪ್ರದೇಶದಲ್ಲಿ ರೈತರ ಕಾಫಿ ತೋಟದಲ್ಲಿ ಸಂಭವಿಸಿರುವ ಭಾರೀ ಹಾನಿಯ ದೃಶ್ಯಗಳು ಸಾರ್ವಜನಿಕರಲ್ಲಿ ಆತಂಕ ಮೂಡಿಸಿವೆ. ಸ್ಥಳದಲ್ಲಿರುವ ದೃಶ್ಯಗಳಲ್ಲಿ ಕಾಡಾನೆಗಳು  ಕಾಫಿ, ಅಡಿಕೆ ಗಿಡಗಳು ಮುರಿದು ಬಿಳಿಸಿದ್ದು, ಅರಣ್ಯ ಇಲಾಖೆಯವರು ಜನ ವಸತಿ ಪ್ರದೇಶದಿಂದ ಕಾಡಾನೆಗಳನ್ನು ಓಡಿಸಲು ಪದೇ ಪದೇ ವಿಫಲರಾಗುತ್ತಿದ್ದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಗೋಣಿಬೀಡಿನ ಶುಭನಗರದ ಅವಿನಾಶ್ ಅವರ ಕಾಫಿ ತೋಟದಲ್ಲಿ 3 ಕಾಡಾನೆಗಳು ದಾಳಿ ನಡೆಸಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿದ್ದು, ಈ ಹಾನಿಯಿಂದ ರೈತ ಅವಿನಾಶ್ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಮೇಲೆ ಅವಲಂಬಿತವಾಗಿರುವ ಕುಟುಂಬಗಳ ಜೀವನೋಪಾಯಕ್ಕೂ ಹೊಡೆತ ಬಿದ್ದಿದೆ. ಸ್ಥಳೀಯರು ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯ ತಂದಿದ್ದರೂ ಸಮರ್ಪಕ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಗೋಣಿಬೀಡಿನ ಹಲವು ರೈತರ ಪ್ರಮುಖ ಬೇಡಿಕೆಗಳನ್ನು ಅರಣ್ಯ ಇಲಾಖೆ ಮತ್ತು ಸರ್ಕಾರದ ಮುಂದಿಟ್ಟಿದ್ದು ಬೆಳೆ ಕಳೆದುಕೊಂಡ ರೈತರ ಜಮೀನನ್ನುತಕ್ಷಣ ಸ್ಥಳ ಪರಿಶೀಲನೆ ನಡೆಸಬೇಕು. ಹಾನಿಯ ನಿಖರ ಕಾರಣ ಪತ್ತೆಹಚ್ಚಬೇಕು. ರೈತರಿಗೆ ತುರ್ತು ಪರಿಹಾರ ಘೋಷಿಸಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ತಡೆ ಕ್ರಮ ಜಾರಿಗೊಳಿಸಬೇಕು.

ಪ್ರದೇಶದ ಜನರು, “ತೋಟಗಳ ಸುರಕ್ಷತೆ ಬಗ್ಗೆ ರೈತರು ದಿನವೂ ಭಯದಲ್ಲಿದ್ದಾರೆ. ಅಧಿಕಾರಿಗಳು ಕಚೇರಿಗಳಲ್ಲೇ ಕುಳಿತುಕೊಳ್ಳದೆ ಸ್ಥಳಕ್ಕೆ ಬಂದು ವಾಸ್ತವ ಸ್ಥಿತಿ ಪರಿಶೀಲಿಸಬೇಕು” ಎಂದು ಆಗ್ರಹಿಸಿದ್ದಾರೆ.

ಆನೆ ಮತ್ತು ರೈತರ ನಡುವಿನ ಸಂಘರ್ಷ ತುಂಬಾ ವರ್ಷಗಳಿಂದ ನಡೆಯುತ್ತಿದ್ದು ಕಾಡಾನೆಗಳನ್ನು ಜನ ವಸತಿ ಪ್ರದೇಶದಿಂದ ಕಾಡಿಗೆ ಅಟ್ಟಲು ಅರಣ್ಯ ಇಲಾಖೆಯವರು ಪದೇಪದೇ ವಿಫಲರಾಗುತ್ತಿದ್ದಾರೆ. ಕಾಡಾನೆಗಳು ನಮ್ಮ ಬಾಗಿಲಿಗೆ ಬಂದಿದ್ದಾವೆ ಎಂದು ಸಹಾಯವಾಣಿಗೆ ಕರೆ ಮಾಡಿದರೆ 7ರಿಂದ 10 ಗಂಟೆಯವರೆಗೆ ಸ್ಥಳಕ್ಕೆ ಯಾವೊಬ್ಬ ಅಧಿಕಾರಿಗಳು ಬರದಿರುವುದು ಬೇಸರದ ಸಂಗತಿ ಅರಣ್ಯ ಇಲಾಖೆಯವರು ಬರದ ಕಾರಣ ನಮ್ಮ ಗ್ರಾಮದ ಹತ್ತಾರು ಯುವಕರು ಸೇರಿ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದೇವೆ ನಮ್ಮ ಜೀವಕ್ಕೆ ಏನಾದರು ತೊಂದರೆಯಾದರೆ ಅರಣ್ಯ ಇಲಾಖೆಯವರು ಮತ್ತು ಅರಣ್ಯ ಸಚಿವರು ಹೊಣೆ ಹೊರಬೇಕು. ಅರಣ್ಯ ಸಚಿವರೆ ನಮ್ಮ ರೈತರ ಜೀವ ಉಳಿಸಿ ರೈತರ ಬದುಕನ್ನು ಉಳಿಸಿ.

*  ರೈತ ಅವಿನಾಶ್, ಶುಭನಗರ

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ