ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಸಮೀಪದ ಹೆಡದಾಳು ಗ್ರಾಮದ ಸರ್ವೆ ನಂಬರ್ 392ರಲ್ಲಿ ಒಟ್ಟು 6 ಎಕರೆ 11 ಗುಂಟೆ ಜಮೀನು ಇದ್ದು, ಅದರಲ್ಲಿ ನಮ್ಮ ಕುಟುಂಬವು ಹಲವು ತಲ ತಲಾಂತರದಿಂದ ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಜಮೀನಿನ ಭಾಗವನ್ನು ಇತರರ ಹೆಸರಿಗೆ ಮಂಜೂರು ಮಾಡಿದ್ದು ನಾವು ಸಾಗುವಳಿ ಮಾಡಿಕೊಂಡು ಬರುತ್ತಿದ್ದ ಜಮೀನು ಉಳ್ಳವರ ಪಾಲಾಗಿದ್ದು ನಾವು ಬೀದಿಗೆ ಬಿದ್ದಿದ್ದೇವೆ ಒಪ್ಪತ್ತು ಊಟಕ್ಕೂ ಗತಿಯಿಲ್ಲದಂತಾಗಿದೆ. ವಯೋ ವೃದ್ದರೂ ಸಹಾ ಉಪವಾಸ ಇರುವ ಹಾಗೇ ಇದೆ ಈ ವಿಚಾರವಾಗಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲಾ ನಮ್ಮ ಬದುಕು ಮೂರಾಬಟ್ಟೆಯಾಗಿದ್ದು ಜಿಲ್ಲಾಧಿಕಾರಿಗಳು ನಮ್ಮ ತೋಟವನ್ನು ನಮಗೆ ಬಿಟ್ಟುಕೊಡಿ ಇಲ್ಲವೇ ದಯಾಮರಣ ಕೊಡಿ ಎಂದು ನೊಂದ 2 ಕುಟುಂಬಗಳು ಅಜಾದ್ ಪಾರ್ಕ್ ಬಳಿ ಮಂಗಳವಾರ ಮಧ್ಯಾಹ್ನ ಸುರಿಯುತ್ತಿರುವ ಮಳೆಯನ್ಮ್ನ ಲೆಕ್ಕಿಸದೆ ಛತ್ರಿ ಹಿಡಿದು ಕುಳಿತಿದ್ದ ಘಟನೆ ವರದಿಯಾಗಿದೆ.
ವೃದ್ದರಾದ ಯಶೋದಮ್ಮ ಮತ್ತು ಜಯಮ್ಮ ಮಾತನಾಡುತ್ತಾ. ನಮ್ಮ ಮಾವನವರ ಕಾಲದಿಂದಲೂ ಸರ್ವೆ ನಂಬರ್ 392 ಸರ್ಕಾರಿ ಜಮೀನನ್ನು ಉತ್ತು ಬಿತ್ತುತ್ತಾ ಬಂದಿದ್ದು ನನಗೆ 82 ವರ್ಷವಾಗಿದ್ದು ಅದಕ್ಕಿಂತ ಮುಂಚೆ ಅಂದರೆ ನೂರು ವರ್ಷಗಳ ಹಿಂದಿನಿಂದಲು ಹಿಡುವಳಿ ಮಾಡಿಕೊಂಡು ಬಂದಿದ್ದೇವೆ. ಆದರೆ ನನ್ನ ಮಗನನ್ನ ಕೊಲೆ ಮಾಡಿ ಜೈಲು ಸೇರಿದ ವ್ಯಕ್ತಿಯಾರ್ವ ಜೈಲಿನಲ್ಲೆ ಕುಳಿತು ನಾವು ಉಳುಮೆ ಮಾಡುತ್ತಿರುವ ಜಮೀನನ್ನು ಜೈಲಿನಲ್ಲಿರುವ ವ್ಯಕ್ತಿ ಅವನ ಹೆಸರಿಗೆ ಮಾಡಿಕೊಂಡಿದು. ಈ ಬಗ್ಗೆ ಅಧಿಕಾರಿಗಳನ್ಮ್ನ ವಿಚಾರಿಸಿದರೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ನಮಗೆ ಓದು ಬರುವುದಿಲ್ಲಾ ನಮ್ಮ ಕೈಯಲ್ಲಿ ಹಣವಿಲ್ಲಾ ಕೋರ್ಟು ಕಛೇರಿ ಕಂಡವರಲ್ಲಾ ಜಮೀನು ಇದ್ದು ಈಗ ಅದು ಉಳ್ಳವರ ಪಾಲಾಗಿದ್ದು ನಮಗೆ ಗಂಜಿಗೂ ಗತಿ ಇಲ್ಲದಂತಾಗಿದೆ ಅಕ್ಕ ಪಕ್ಕದ ತೋಟಗಳಲ್ಲಿ ಕೆಲಸ ಮಾಡಿ ಹೊಟ್ಟೆಹೊರೆಯುತ್ತಿದ್ದು .ನಮಗೆ ಜಿಲ್ಲಾಧಿಕಾರಿಗಳು ನ್ಯಾಯಾಧಿಶರು ಎಂದು ಹೇಳುತ್ತಾರೆ ಜಿಲ್ಲಾಧಿಕಾರಿಗಳೇನ್ಯಾಯ ಕೊಡಿಸಿ ಎಂದು ಕಣ್ಣೀರು ಹಾಕುತ್ತಾ ಕುಳಿತಿದ್ದು , ಜಮೀನು ಇಲ್ಲದೆ ಹೋದಲ್ಲಿ ದಯಾ ಮರಣವನ್ನಾದರೂ ದಯಪಾಲಿಸಲಿ ಎಂದು ಪ್ರತಿಭಟನೆ ನಡೆಸಿದರು.


