ಆಲ್ದೂರು ಸಮೀಪದ ಕೂದುವಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಸಭೆಯನ್ನು ಮಂಗಳವಾರ ಏರ್ಪಡಿಸಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆ ಗ್ರಾಮ ಸಭೆಯನ್ನು ಮುಂದೂಡಲಾಯಿದೆ.
ಡಿಎಸ್‍ಎಸ್ ಜಿಲ್ಲಾ ಸಂಚಾಲಕರಾದ ಅಶೋಕ್ ರಾಜರತ್ನಂ ಮಾತನಾಡಿ ಗ್ರಾಮ ಸಭೆಯ ಕರಪತ್ರದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸುತ್ತಾರೆ ಸಂಬಂಧಪಟ್ಟ ಇಲಾಖೆಗಳ ಯೋಜನೆಗಳು ಸೌಲಭ್ಯಗಳ ಮಾಹಿತಿಯನ್ನು ಗ್ರಾಮಸ್ಥರುಗಳಿಗೆ ಒದಗಿಸುತ್ತಾರೆ ಎಂದು ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ಜನರು ಭಾಗವಹಿಸುತ್ತಾರೆ ಆದರೆ ಬಹುಪಾಲು ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿರಲಿಲ್ಲ ಇದರಿಂದ ಅಧಿಕಾರಿಗಳ ಗೈರನ್ನು ಪ್ರಶ್ನಿಸಿದಾಗ ನೋಡಲ್ ಅಧಿಕಾರಿಯಾಗಿ ಸಭೆಗೆ ಹಾಜರಾಗಿದ್ದ ಮಲ್ಲಿಕಾರ್ಜುನ್ ಮತ್ತು ಪಿ ಡಿ ಓ ತಿರುಪತಿ ನಾಯಕ್, ಇರುವಂತಹ ಅಧಿಕಾರಿಗಳನ್ನು ಇಟ್ಟುಕೊಂಡು ಸಭೆ ನಡೆಸೋಣ ಅದರ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ ಮುಂದಿನ ಬಾರಿ ಈ ರೀತಿ ಆಗದಂತೆ ನೋಡಿಕೊಳ್ಳೋಣ ಎಂದು ಸಮಾಧಾನ ಪಡಿಸಲು ಮುಂದಾದರು ಕೂಡಲೇ ನನ್ನೊಂದಿಗೆ ಗ್ರಾಮಸ್ಥರಾದ ಶೇಷೇಗೌಡ,ಇಂದ್ರೇಶ್, ದೇವರಾಜ್ ,ಯಶೋಧರ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಬಳಿಕ ಜನಾಭಿಪ್ರಾಯದಂತೆ ಗ್ರಾಮ ಸಭೆಯನ್ನು ಬೇರೊಂದು ದಿನಕ್ಕೆ ಮುಂದೂಡಿದರು ಎಂದು ಮಾಹಿತಿ ನೀಡಿದರು.
ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಗೈರು ಹಾಜರಿಯಲ್ಲಿ ಗ್ರಾಮ ಸಭೆ ನಡೆಸಲು ಮುಂದಾಗಿದ್ದ ಅಧಿಕಾರಿಗಳಿಗೆ ಜನಸಾಮಾನ್ಯರ ಪ್ರತಿಕ್ರಿಯೆ ಕಸಿವಿಸಿ ಉಂಟು ಮಾಡಿ ಮುಂದಿನ ದಿನಾಂಕಗೆ ಗ್ರಾಮ ಸಭೆಯನ್ನು ಮುಂದೂಡುವಂತೆ ಆಗಿದೆ.


