August 29, 2026
;
suddi-45

 

 

ವಿದ್ಯಾರ್ಥಿದೆಸೆಯಲ್ಲೇ ಆರೋಗ್ಯ, ಸ್ವಚ್ಚತೆ, ಸನ್ನಡತೆ ಪಾಲನೆ ಜೊತೆಗೆ ಮಾದಕ ವಸ್ತುಗಳ ಬಗ್ಗೆ ಜಾಗೃತಿ ವಹಿಸಬೇಕು. ಇದು ಭವಿಷ್ಯದಲ್ಲಿ ದೇಶದ ಉತ್ತಮ ನಾಗರೀಕರಾಗಲು ಮೊದಲ ಹೆಜ್ಜೆ ಎಂದು ನಿರಂತರ ಸ್ವಚ್ಚ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಡಾ|| ಶುಭವಿಜಯ್ ಹೇಳಿದರು.

ಚಿಕ್ಕಮಗಳೂರು  ನಗರದ ಹೌಸಿಂಗ್ ಬೋರ್ಡ್ ಸಮೀಪದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಿರಂತರ ಸ್ವಚ್ಚ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಲಾಮಕ್ಕಳಿಗೆ ಆಯೋಜಿಸಿದ್ಧ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಲಾ ವಿದ್ಯಾರ್ಥಿಗಳು ಬಾಲ್ಯದಿಂದಲೇ ಸಾಮಾಜಿಕ ಕಳಕಳಿ, ಪರಿಸರಪ್ರಜ್ಞೆ, ಸ್ವಚ್ಚತೆ ನಿರ್ವಹಣೆ ಬಗ್ಗೆ ಕಳೆದ ತಿಂಗಳು ಪುಟ್ಟದೊಂದು ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಶಾಲೆಯ 8, 9 ಮತ್ತು 10ನೇ ತರಗತಿಯ ಪ್ರತಿಯೋರ್ವ ವಿದ್ಯಾರ್ಥಿಯನ್ನು ಶಿಕ್ಷಕರು ಆಯ್ಕೆಗೊಳಿಸಿದ್ದು ಈ ವಿಜೇತರಿಗೆ ಟ್ರಸ್ಟ್‍ನಿಂದ ನಗ ದು ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಗಿದೆ ಎಂದು ಹೇಳಿದರು.

ಜಿಲ್ಲೆ ಪ್ರವಾಸಿಗರ ತಾಣದ ಜೊತೆಗೆ ಸ್ವಚ್ಚಂಧ ಪರಿಸರಕ್ಕೆ ಹೆಸರುವಾಸಿಯಾಗಿದೆ. ದೇಶ-ವಿದೇಶಗಳಿಂದ ಜಿಲ್ಲೆಗಾಗಮಿಸುವ ಪ್ರವಾಸಿಗರು ನೈಸರ್ಗಿಕ ಪರಿಸರಕ್ಕೆ ಮಾರು ಹೋಗಿದ್ದಾರೆ. ಈ ಜಿಲ್ಲೆಯಲ್ಲಿ ಜನಿಸಿರುವ ಪ್ರತಿಯೊಬ್ಬರು ಕೈಲಾದ ಮಟ್ಟಿಗೆ ಪರಿಸರದ ಸೇವೆ ಮಾಡಬೇಕು. ಜೊತೆಗೆ ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಬೇಕು ಎಂದು ಸಲಹೆ ಮಾಡಿದರು.

ನಿರಂತರ ಸ್ವಚ್ಚ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಉಮಾ ನಾಗೇಶ್ ಮಾತನಾಡಿ ಶಾಲಾವರಣ ಸೇರಿದಂತೆ ಶಾಲಾ ಕೊಠಡಿಗಳಲ್ಲಿ ವಿದ್ಯಾರ್ಥಿಗಲು ಸ್ಚಚ್ಚತೆ ಕಾಪಾಡಬೇಕು. ಎಲ್ಲೆಂದರಲ್ಲಿ ಕಸ ಬಿಸಾಡದೇ ಕಸದ ಬುಟ್ಟಿ ಗಳಲ್ಲೇ ಹಾಕಬೇಕು. ಮನೆಯಂಗಳದಿ ಕೂಡಾ ಕಸವನ್ನು ಖಾಲಿನಿವೇಶನದಲ್ಲಿ ಹಾಕಬೇಡಿ, ಕಡ್ಡಾಯವಾಗಿ ಗಂಟೆಗಾಡಿಗಳಿಗೆ ಹಾಕಬೇಕು. ಸುತ್ತಲು ಸಸಿಗಳನ್ನು ನೆಟ್ಟು ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

ಇಂದಿನ ಸಮಾಜದಲ್ಲಿ ಮಾದಕ ವಸ್ತುಗಳು ಯುವಜನತೆ ಜೀವ ಹಾಳುಮಾಡುತ್ತಿದೆ. ಈ ಚಟಗಳಿಗೆ ಎಂದಿಗೂ ಬಲಿಯಾಗಬಾರದು. ಪಾಲಕರು ಮತ್ತು ಶಿಕ್ಷಕರು ಕರ್ತವ್ಯ ಮಾತ್ರ ನಿರ್ವಹಿಸದೇ, ಮಕ್ಕಳ ಚಲನ ವಲನಗಳ ಬಗ್ಗೆ ಗಮನಹರಿಸುವುದು ಪ್ರಮುಖ ಕೆಲಸ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿರಂತರ ಸ್ವಚ್ಚ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಅನುಪಮ ಮನ್ಸೂರ್, ಜಂಟಿ ಕಾರ್ಯದರ್ಶಿ ಕೃಷ್ಣವೇಣಿ, ಮಾಜಿ ಅಧ್ಯಕ್ಷೆ ಲಕ್ಷ್ಮಮ್ಮ, ಟ್ರಿಸ್ಟಿಗಳಾದ ರೂಬೆನ್ ಮೋಸಸ್, ಉಮಾ ರಾಮೇಗೌ ಡ, ಶಾಲೆಯ ಮುಖ್ಯಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;