ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘ, ಮೂಡಿಗೆರೆ ಇವರ ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಇತ್ತೀಚೆಗೆ ಮೂಡಿಗೆರೆ ಪಟ್ಟಣದ ರೈತ ಭವನದಲ್ಲಿ ಸಂಘದ ವತಿಯಿಂದ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯನ್ನು ನೆರವೇರಿಸಲಾಯಿತು.
ಸರ್ವಾಲಂಕೃತ ವರಮಹಾಕ್ಷ್ಮೀ ಮೂರ್ತಿಯನ್ನು ಪ್ರತಿಷ್ಠಾಪಿಸಿ ಶ್ರದ್ಧಾಭಕ್ತಿಯಿಂದ ಪೂಜೆಯನ್ನು ನಡೆಸಲಾಯಿತು. ಅರ್ಚಕರಾದ ಶರತ್ ಭಟ್ ಅವರು ಸಾಂಪ್ರದಾಯಿಕ ಪೂಜಾ ವಿಧಾನಗಳ ಮೂಲಕ ವರಮಹಾಕ್ಷ್ಮೀ ಸ್ತುತಿಗಳನ್ನು ಮಾಡಿ ಪೂಜೆಯನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.
ಈ ಸಂದರ್ಭದಲ್ಲಿ ಕಾಫಿನಾಡು ಒಕ್ಕಲಿಗರ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ನಿರ್ಮಲಾ ಮಂಚೇಗೌಡ ಅವರು ಮಾತನಾಡಿ ; ಕಾಫಿನಾಡು ಮಹಿಳಾ ಒಕ್ಕಲಿಗರ ಸಂಘವು ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು, ತಾಲ್ಲೂಕಿನ ಒಕ್ಕಲಿಗ ಮಹಿಳೆಯರು ಒಂದೆಡೆ ಕಲೆತು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಒಟ್ಟಾಗಿ ಆಚರಿಸುತ್ತಾ ಬಂದಿದ್ದೇವೆ. ಇದೀಗ ನಮ್ಮ ಸಂಘದಿಂದ ಮೊದಲ ಬಾರಿಗೆ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯನ್ನು ನೆರವೇರಿಸುತ್ತಿದ್ದೇವೆ. ವರಮಹಾಲಕ್ಷ್ಮೀ ಪೂಜೆಯು ನಮ್ಮ ಹಿಂದೂ ಸಾಂಪ್ರದಾಯದಲ್ಲಿ ಒಂದು ಮುಖ್ಯ ಆಚರಣೆಯಾಗಿದೆ. ಸರ್ವರಿಗೂ ಉತ್ತಮ ಆರೋಗ್ಯ, ಆಯಸ್ಸು ಮತ್ತು ಸಂಪತ್ತನ್ನು ಕರುಣಿಸಲಿ ಎಂಬುದು ಈ ಪೂಜೆಯ ಹಿನ್ನಲೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ರೇಖಾ ಮೋಹನ್, ಕಾರ್ಯದರ್ಶಿ ಶ್ರೀಮತಿ ರಮ್ಯಾ ಸಂದೇಶ್, ಖಚಾಂಚಿ ಸಾಧನ ಮಣೀಶ್, ಸಹಕಾರ್ಯದರ್ಶಿ ಶ್ರೀಮತಿ ರಚಿತಾ ರತ್ನಾಕರ್, ನಿರ್ದೇಶಕರುಗಳಾದ ಶ್ರೀಮತಿ ದೇವಕಿ ರಾಜರಾಮ್, ಶ್ರೀಮತಿ ಭಾರತಿ ರವೀಂದ್ರ, ಶ್ರೀಮತಿ ಸುಚಿತ್ರ ಪ್ರಸನ್ನ, ಶ್ರೀಮತಿ ಕವಿತಾ ಪೂರ್ಣೇಶ್, ಶ್ರೀಮತಿ ಸುಜಾತ ಪ್ರಸನ್ನ, ಶ್ರೀಮತಿ ಕವಿತಾ ಸಂತೋಷ್, ಶ್ರೀಮತಿ ರಶ್ಮಿ ಸುಧೀರ್, ಶ್ರೀಮತಿ ಸೌಮ್ಯ ವಿನೂತ್, ಸಂಘದ ಪೂರ್ವ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.



