November 7, 2026
;
suddi-10 (1)

 

 

ಚಿಕ್ಕಮಗಳೂರು  ತಾಲ್ಲೂಕಿನ ಅಂಬಳೆ ಹೋಬಳಿಯ ಮರ್ಲೆ ಗ್ರಾಮಕ್ಕೆ ಪ್ರತಿನಿತ್ಯ ಕೆ.ಎ ಸ್.ಆರ್.ಟಿ.ಸಿ ಬಸ್ ಸಂಚರಿಸದಿರುವ ಕಾರಣ ಶಾಲಾ-ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯ ದುಡಿಯುವ ವರ್ಗದವರು  ಬಸ್‍ಗಾಗಿ ಕಾದು ಹೈರಾಣಾಗುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮಸ್ಥರು ಮಾತನಾಡಿ ಗ್ರಾಮದಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು, ವೃದ್ದರು ಹಾಗೂ ಈಮಾರ್ಗದಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೂ ತುಂಬ ಅನಾನುಕೂಲವಾಗಿದೆ. ಈ ಬಗ್ಗೆ ಕೆ.ಎಸ್.ಆರ್.ಟಿ.ಸಿ. ಇಲಾಖೆ ಅಧಿಕಾರಿಗಳೂ ಗಮನಹರಿಸಿ ಬಸ್ ಸಂಚಾರ ವ್ಯವಸ್ಥೆ ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಮರ್ಲೆ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಸೂಕ್ತ ಬಸ್ ಸೌಕರ್ಯ ಒದಗಿ ಸದಿದ್ದಲ್ಲಿ ವಿದ್ಯಾರ್ಥಿ, ರೈತ ಸಂಘ, ಪ್ರಗತಿಪರ ಸಂಘಟನೆ ಹಾಗೂ ಗ್ರಾಮಸ್ಥರು ಒಟ್ಟಾಗಿ ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಜಿಲ್ಲಾಡಳೀತ ಹಾಗೂ ಸರ್ಕಾರ ಗಮನ ಸೆಳೆಯಲಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮರ್ಲೆ ಗ್ರಾಮಸ್ಥರಾದ ಸಂತೋಷ್, ರಿತೇೀಶ್, ಮನು, ಶಶಿ, ತಮ್ಮೇಗೌಡ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *