August 31, 2026
;
1003924976

 

 

ಸಹಕಾರ ತತ್ವ ಯಶಸ್ವಿಯಾಗಬೇಕೆಂದರೆ ಸಂಘದ ಸದಸ್ಯರ ಪೂರ್ಣ ಪ್ರಮಾಣದ ಭಾಗವಹಿಸುವಿಕೆ ಬಹುಮುಖ್ಯ ಎಂದು ಚಿಕ್ಕಮಗಳೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಮತ್ತು ಗೌಡಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಿ.ಕೆ. ದಿವಾಕರ್ ಹೇಳಿದರು.

ಅವರು ಶನಿವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಗೌಡಹಳ್ಳಿ,   ಸರ್ವಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಸಹಕಾರ ಸಂಘದ ಆಡಳಿತ ಮಂಡಳಿಯವರ ಬದ್ಧತೆ ಮತ್ತು ಪ್ರಾಮಾಣಿಕತೆ ಸಹಕಾರ ಚಳುವಳಿಯು ಉನ್ನತ ಮಟ್ಟದಲ್ಲಿ ಮುಂದುವರಿಯಲು ತುಂಬಾ ಮುಖ್ಯ. ಕೇವಲ ಲಾಭದ ದೃಷ್ಟಿಯಿಂದ ನೋಡದೇ ಸೇವಾ ಮನೋಭಾವನೆಯಿಂದ ಕಾರ್ಯನಿರ್ವಹಿಸಿದರೆ ಅದರಿಂದ ಸಂಘದ ಸದಸ್ಯರಿಗೆ ಹೆಚ್ಚಿನ ಅನುಕೂಲಗಳನ್ನು ಮಾಡಿಕೊಡಲು ಸಾಧ್ಯ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಗೌಡಹಳ್ಳಿ,   2025-26 ನೇ ಸಾಲಿನಲ್ಲಿ ರೂ. 19.39 ಲಕ್ಷ ನಿವ್ವಳ ಲಾಭಗಳಿಸಿರುತ್ತದೆ, ವರದಿ  ವರ್ಷದ ಅಂತ್ಯಕ್ಕೆ ಸಂಘದ ಸ್ವಂತ ಬಂಡವಾಳವು 227.41 ಲಕ್ಷ ಒಟ್ಟು ಠೇವಣಿಯು ರೂ. 141.71 ಲಕ್ಷ ಪಡೆದ ಸಾಲಗಳ ರೂ. 1042.02 ದುಡಿಯುವ ಬಂಡವಾಳವು ರೂ 1711.86 ಲಕ್ಷ ಮುಂದಿನ ಸಾಲಿಗೆ 2 ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.

2025-26ನೇ ಸಾಲಿನಲ್ಲಿ ಒಟ್ಟು ರೂ. 1275.23 ಲಕ್ಷ ಸಾಲ ವಿತರಣೆ ಮಾಡಿದ್ದು, ಇದರಲ್ಲಿ ಕೃಷಿಗಾಗಿ ನೀಡಿದ ಸಾಲ ರೂ. 1047.82 ಲಕ್ಷ ವಾಗಿದೆ. 2026-27ನೇ ಸಾಲಿಗೆ ಉಳಿದ ಜನ ಸಂಘದ ರೈತ ಸದಸ್ಯರುಗಳಿಗೆ ಸಂಘದ ಮುಖಾಂತರ 50 ಲಕ್ಷ ಕೆ.ಸಿ.ಸಿ ಬೆಳೆಯ ಸಾಲ ವಿತರಣೆ ಮಾಡಲು ಗುರಿ ಹೊಂದಲಾಗಿದೆ. ಸಂಘದ 2025-26ನೇ ಸಾಲಿನ ಲೆಕ್ಕಪರಿಶೋಧನೆಯು ನಿಗಧಿತ ಅವಧಿಯೊಳಗೆ ಆಗಿದ್ದು, ಸಂಘದ ಲೆಕ್ಕ ಪತ್ರಗಳ ನಿರ್ವಹಣೆಯು ಉತ್ತಮವಾಗಿದ್ದು, ಶೇ 100 ರಷ್ಟು ವಸೂಲಾತಿ ಪ್ರಗತಿ ಸಾಧಿಸಿದ್ದು,

ಸಂಘದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಸಂಘದ ಆಡಳಿತ ಮಂಡಳಿಯ ಎಲ್ಲಾ ನಿರ್ದೆಶಕರುಗಳಿಗೆ ಹಾಗೂ ಸಂಘದ ಸಿಬ್ಬಂದಿ ವರ್ಗದವರಿಗೆ ಪ್ರಾಮಾಣಿಕ ಕರ್ತವ್ಯಕ್ಕಾಗಿ ಅವರನ್ನು ಅಭಿನಂದಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷರಾದ ಹೆಚ್.ಜಿ. ವೆಂಕಟೇಶ್ ಹೊನ್ನೇಕೂಲ್, ನಿರ್ದೇಶಕರಾದ ಕೃಷ್ಣೇಗೌಡ ಬೈರಾಪುರ, ಕೆ.ಎಲ್. ಚಂದ್ರೇಗೌಡ ಕುಂಬರಡಿ, ವಿನೇಶ್ ಬೈದುವಳ್ಳಿ, ಸಂತೋಷ್ ಮೇಕನಗದ್ದೆ, ಜಿ.ಟಿ. ರಮೇಶ್ ಗೌಡಹಳ್ಳಿ, ಅರುಣ್ ಮಡ್ಡೀಕೆರೆ, ನಿಂಗಪ್ಪ ಹೊಸಕೆರೆ, ಶ್ರೀಮತಿ ಜಯಮ್ಮ ಗೌಡಹಳ್ಳಿ, ಶ್ರೀಮತಿ ಸುಮಾ ರವಿ   ಗೌಡಹಳ್ಳಿ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಣೇಶ್ ಸ್ವಾಗತಿಸಿದರು. ಸಂಘದ ಲೆಕ್ಕಾಧಿಕಾರಿ ಶ್ರೀಮತಿ ಗೀತಾ ವಾರ್ಷಿಕ ವರದಿ ಮಂಡಿಸಿದರು, ಸಂಘದ ನಿರ್ದೇಶಕ ವಿನೇಶ್  ಬೈದುವಳ್ಳಿ, ಕಾರ್ಯಕ್ರಮ ನಿರೂಪಿಸಿದರು, ಕೆ.ಪಿ.ನಾಗೇಶ್ ಕುಂಬರಡಿ ವಂದಿಸಿದರು.

ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್.ಎಸ್.ಎಲ್. ಪರೀಕ್ಷೆಯಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಉತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;