September 2, 2026
;
asvini chandra

 

 

ದಿನಾಂಕ 22.08.2026 ಶನಿವಾರ ಹಾಗು 23.08.2026 ರ ಭಾನುವಾರ ದಂದು ಶಿವಮೊಗ್ಗದ ನೆಹರು ಒಳ ಕ್ರಿeಡಾಂಗಣದಲ್ಲಿ ನಡೆದ  7ನೇ ಅಂತರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯನ್ನು  ಶಿವಮೊಗ್ಗದ ಸಿಟಿ ಕರಾಟೆ ಅಸೊಸಿಯೇಷನ್   ಸಂಸ್ಥೆಯ ಶಿಕ್ಷಕರು ಹಾಗು ಅಯೋಜಕರಾದ ಶಿಹಾನ್ ವಿನೋದ್ ರವರು ಆಯೋಜಿಸಿದ್ದು ಈ ಪಂದ್ಯಾವಳಿಗೆ ಅಮೇರಿಕಾ, ಶ್ರೀಲಂಕ, ಗಬಾನ್, ನೇಪಾಳ, ಹಾಗು ಭಾರತದ 21 ರಾಜ್ಯಗಳಿಂದ ಸುಮಾರು 1500 ಕ್ಕೂ ಹೆಚ್ಚು ಕರಾಟೆ ಪಟುಗಳು ಭಾಗವಹಿಸಿದ್ದರು.

ಈ ಪಂದ್ಯಾವಳಿಗೆ ಮೂಡಿಗೆರೆಯ ಬಿ.ಜಿ ಎಸ್ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ಸೆನ್ಸಾಯ್ ಅಶ್ವಿನಿ ಚಂದ್ರ ಬ್ಲಾಕ್ ಬೆಲ್ಟ್ Ill ಡನ್  ಇವರು ಭಾಗವಹಿಸಿ ವೈಯಕ್ತಿಕ ಕಥಾ ವಿಭಾಗದಲ್ಲಿ ಪ್ರಥಮ ಹಾಗು ವೈಯಕ್ತಿಕ ಆಯುಧ ಕಥಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು 2.8 ತಿಂಗಳು ಪ್ರಾಯದಿಂದಲೂ ಕರಾಟೆ ತರಬೇತಿಯನ್ನು ತನ್ನ ತಾಯಿ ಬೇಬಿಲತಾ ಹಾಗು ಸೋದರ ಮಾವ ರಾಜೇಂದ್ರನ್ ರಿಂದ ಕರಾಟೆ ತರಬೇತಿಯನ್ನು ಅತೀ ಚಿಕ್ಕ ಪ್ರಾಯದಲ್ಲಿ Black Belt ಪದವಿಯನ್ನು ಪಡೆದು ತಮ್ಮ ಬಿಡುವಿನ ಸಮಯದಲ್ಲಿ ಕರಾಟೆ ತರಬೇತಿಯನ್ನು ನೀಡುತಿದ್ದಾರೆ.

ಈ ಬಾರಿಯ ಪಂದ್ಯಾವಳಿಯಲ್ಲಿ ಎರಡೂ ಪ್ರಥಮ ಸ್ಥಾನ ತಂದಿರುವುದು ನಮ್ಮ ಕಾಲೇಜಿನ ಹೆಮ್ಮೆಯ ವಿಷಯ ಎಂದು ಬಿ. ಜಿ. ಎಸ್. ಕಾಲೇಜು ಪ್ರಾಂಶುಪಾಲರಾದ ಶ್ರೀ ಸಂದೇಶ್ ರವರು ಪತ್ರಿಕೆಗೆ ತಿಳಿಸಿರುತ್ತಾರೆ

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;