ಆಲ್ದೂರು ಸಮೀಪದ ಬಾಳೆಹಳ್ಳಿ ಕೃಷ್ಣಪ್ಪ ಬಡಾವಣೆಯ ನಿವಾಸಿ ಶ್ರೀಮತಿ ಗಿರಿಜಾ ಸೀನಾ ರವರು ಮೂರು ದಶಕಗಳಿಂದ ಯಶಸ್ವಿಯಾಗಿ ನೂರಾರು ಬಾಣಂತಿಯರಿಗೆ ಹೆರಿಗೆಯನ್ನು ಮಾಡಿಸಿದ್ದು ಪಾರಂಪರಿಕವಾದ ದಾದಿತನ ಮತ್ತು ಶಿಶು ವೈದ್ಯಕೀಯ ಸೇವೆಯನ್ನು ಪರಿಗಣಿಸಿ 2026ನೇ ಸಾಲಿನ ಆದಿವಾಸಿ ಸಿರಿ ಪ್ರಶಸ್ತಿಯನ್ನು 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ರಿ ಬೆಂಗಳೂರು ವತಿಯಿಂದ ನೀಡಿ ಗೌರವಿಸಿದೆ.
ಈ ಕಾರ್ಯಕ್ರಮದಲ್ಲಿ ಆದಿವಾಸಿ ರಕ್ಷಣಾ ಪರಿಸರ ಜಿಲ್ಲಾ ಅಧ್ಯಕ್ಷರಾದ ಪಿ ರಾಜೇಶ್, ಗ್ರಾಮಸ್ಥರಾದ ನೀಲಯ್ಯ. ಮಂಜುನಾಥ. ದಿನೇಶ. ಸುನಿಲ್. ರಘು. ಪುನೀತ್ . ಶ್ರೀನಾಥ್ ಭಾಗವಹಿಸಿದ್ದರು



