September 2, 2026
;
madumitha

 

 

ಮೂಡಿಗೆರೆ ತಾಲ್ಲೂಕಿನ ಕೂವೆ ಕಲ್ಮನೆ ಗ್ರಾಮದ ವೆಂಕಟೇಶ್ ಹಾಗೂ ವಿನಯಾ ನವಾಟೆ ದಂಪತಿಯ ಪುತ್ರಿ ಡಾ. ಮಧುಮಿತಾ ಕೆ.ವಿ. ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಮಣಿಪಾಲ್ ತಾಂತ್ರಿಕ ಸಂಸ್ಥೆಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

‘ಗ್ರಾಫ್‌ಗಳ ಸ್ಪೆಕ್ಟ್ರಾ ಮತ್ತು ಗುಪ್ತಲಿಪಿ ಶಾಸ್ತ್ರದಲ್ಲಿ ಗ್ರಾಫ್ ಪರಿಮಾಣಗಳ ಅನ್ವಯಿಕೆ’ ವಿಷಯದ ಕುರಿತು ಸಂಶೋಧನೆ ನಡೆಸಿ ಮಹಾಪ್ರಬಂಧ ಮಂಡಿಸಿದ್ದರು. ಆಗಸ್ಟ್ 3ರಂದು ನಡೆದ ಅಂತಿಮ ಮೌಖಿಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಉತ್ತೀರ್ಣರಾಗಿ ಡಾಕ್ಟರೇಟ್ ಪದವಿಗೆ ಅರ್ಹತೆ ಪಡೆದಿದ್ದಾರೆ. ಸಬಿತಾ ಡಿಸೋಜಾ ಅವರು ಸಂಶೋಧನಾ ಮಾರ್ಗದರ್ಶಕರಾಗಿದ್ದರು.

ಗ್ರಾಮೀಣ ಪ್ರದೇಶದ ಕೂವೆ ಕಲ್ಮನೆಯಿಂದ ಉನ್ನತ ಶಿಕ್ಷಣದ ಹಾದಿಯಲ್ಲಿ ಮುನ್ನಡೆದು ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ. ಮಧುಮಿತಾ ಕೆ.ವಿ. ಅವರ ಸಾಧನೆಗೆ ತಂದೆ ವೆಂಕಟೇಶ್, ತಾಯಿ ವಿನಯಾ ನವಾಟೆ, ಬಂಧುಗಳು ಹಾಗೂ ಊರಿನ ಎಲ್ಲಾ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;