September 2, 2026
;
janapada

 

 

ಕನ್ನಡ ಜಾನಪದ ಪರಿಷತ್ ಬೆಂಗಳೂರು ತಾಲ್ಲೂಕು ಘಟಕ ಮೂಡಿಗೆರೆ ಮತ್ತು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜಾನಪದ ಕಲಾ ಸಂಘ ಮೂಡಿಗೆರೆ ಇವರ ಸಂಯುಕ್ತ ಆಶ್ರಯದಲ್ಲಿ ಇಂದಿರಗಾಂಧಿ ವಸತಿ ಶಾಲೆ, ಬಾಳೂರು, ಜನ್ನಾಪುರ ಇಲ್ಲಿ ವಿಶ್ವ ಜಾನಪದ ದಿನಾಚರಣೆ, ಬುಡಕಟ್ಟು ದಿನಾಚರಣೆ ಮತ್ತು ಕಾನೂನು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಗೋಣಿಬೀಡು ಠಾಣೆ ಕ್ರೈಂ ಎಸೈ ಗಾಯತ್ತಿ ಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಾಸ್ತಾವಿಕ ನುಡಿಯನ್ನು ಕನ್ನಡ ಜಾನಪದ ಪರಿಷತ್ ಚಿಕ್ಕಮಗಳೂರು ತಾಲ್ಲೂಕು ಅಧ್ಯಕ್ಷ ಅಶೋಕ್ ರಾಜರತ್ನಂ ಅವರು ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ಮೂಡಿಗೆರೆ ತಾಲ್ಲೂಕು ಅಧ್ಯಕ್ಷ ಹೆಚ್.ಎಸ್.ರವಿ ಹಂತೂರು ಮಾತನಾಡಿ : ನಮ್ಮ ಗ್ರಾಮೀಣ ಸಂಸ್ಕೃತಿಯ ಭಾಗವಾಗಿ ಬಂದಿರುವ ಜಾನಪದ ಕಲೆಯನ್ನು ಇಂದಿನ ಯುವಪೀಳಿಗೆ, ವಿದ್ಯಾರ್ಥಿಗಳಲ್ಲಿ ಮೂಡಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಜಾನಪದ ಪರಿಷತ್ ಹಲವು ಕಾರ್ಯಯೋಜನೆಗಳನ್ನು ನಡೆಸುತ್ತಾ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ್ ಎಂ ಹೆಚ್ ಪ್ರಾಂಶುಪಾಲರು ಇಂದಿರಾ ಗಾಂಧಿ ವಸತಿ ನಿಲಯ ಬಾಳೂರು ಜಾನಪದ ಬಗ್ಗೆ ಮಾತಾಡಿದರು.  ಶ್ರೀಮತಿ ಭಾನುಮತಿ ಕನ್ನಡ ಜಾನಪದ ಪರಿಷತ್  ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷರು  ಮೂಡಿಗೆರೆ. ಸುರೇಶ್ ಮಗ್ಗಲಮಕ್ಕಿ ಅಧ್ಯಕ್ಷರು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಕಲಾ ಸಂಘ ಮೂಡಿಗೆರೆ, ಶ್ರೀಮತಿ ದೀಪಿಕಾ ಕನ್ನಡ ಜಾನಪದ ಪರಿಷತ್ ಹೋಬಳಿ ಅಧ್ಯಕ್ಷರು, ಮಹೇಂದ್ರ ಕಸಬಾ ಅಧ್ಯಕ್ಷರು, ಶ್ರೀಮತಿ ಆಶಾ ಜಯಕುಮಾರ್  ಮುಂತಾದವರು ಉಪಸ್ಥಿತರಿದ್ದರು.

ಗಿರೀಶ್ ಜನಪದ ಕಲಾವಿದರು ಹಾಗೂ ದೇಜಪ್ಪ ಬುಡಕಟ್ಟು ಸಮುದಾಯದ ಹಿರಿಯರು ಇವರನ್ನು ಸನ್ಮಾನಿಸಲಾಯಿತು.

ಕಾರ್ಯದರ್ಶಿಗಳಾದ ಪೂರ್ಣೇಶ್ ಕಣಚೂರು, ರಂಜಿತ್ ಕೋಗಿಲೆ, ಮಂಜುನಾಥ್, ಕೌಶಿಕ್, ಮಧು, ಹಾಗೂ ವೆಂಕಟೇಶ್ ಪಾಲ್ಗೊಂಡಿದ್ದರು.

ಸ್ವಾಗತ. ಪೂರ್ಣೇಶ್ ಕಣಚೂರು. ಪ್ರಾರ್ಥನೆ. ಮದು  ವಂದನಾರ್ಪಣೆ. ರಂಜಿತ್ ಕೋಗಿಲೆ ನೆರವೇರಿಸಿದರು.

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;