September 12, 2026
;
4Mudigere1A_copy_1024x461

 

 

ಸಾಹಿತ್ಯ ಕೇವಲ ಪುಸ್ತಕದಲ್ಲಿಲ್ಲ. ಅದು ನಮ್ಮ ಅಡುಗೆ ಮನೆಯ ಗೋಡೆ ಮೇಲಿನ ಗೀಚು, ಜೋಳಿಗೆ ಹಾಡು, ಹೊಲದ ದುಡಿಮೆ, ಮಕ್ಕಳಿಗೆ ಹೇಳುವ ಕಥೆ. ಈ ಎಲ್ಲದರಲ್ಲೂ ಸಾಹಿತ್ಯ ಇದೆ ಎಂದು ಸಮ್ಮೇಳನಾಧ್ಯಕ್ಷೆ ಭಾಗ್ಯ ಲಕ್ಷ್ಮಣ ಗೌಡ ಹೇಳಿದರು.

ಅವರು ಶುಕ್ರವಾರ ಮೂಡಿಗೆರೆ ಅಡ್ಯಂತಾಯ ರಂಗಮಂದಿರದ ಎಂ.ಕೆ.ಇಂದಿರಾ ವೇದಿಕೆಯಲ್ಲಿ 2ನೇ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷೆತೆ ವಹಿಸಿ ಮಾತನಾಡಿದರು.

ಈ ನೆಲದಲ್ಲಿ ಅಕ್ಕಮಹಾದೇವಿಯಿಂದ ಹಿಡಿದು ಬಿ.ಜಿ.ಸ್ವಾಮಿ ಅವರ ಹೂ ಹಣ್ಣು, ಆರ್.ವಿ.ಸರೋಜ ಕವಿತೆಗಳವರೆಗೆ ಮಹಿಳೆಯರ ಪಾತ್ರ ಇಂದಿಗೂ ನಿಂತಿಲ್ಲ. ಮಹಿಳೆಯರ ಸಾಹಿತ್ಯವೆಂದರೆ ಕೇವಲ ಕುಟುಂಬ ಕಥೆಯಲ್ಲ. ಅದು ಕೃಷಿ, ರಾಜಕೀಯ, ಅರ್ಥಶಾಸ್ತ್ರ, ವಿಜ್ಞಾನವೂ ಹೌದು. ನಾವು ಅಡುಗೆ ಮಾಡುವಾಗ, ಮಗು ಅಳುವಾಗ, ಗಂಡನ ಆದಾಯಕ್ಕೆ ಮನೆ ನಡೆಸುವ ಲೆಕ್ಕವನ್ನು ಇದನೆಲ್ಲ ಸಾಹಿತ್ಯವನ್ನಾಗಿ ಮಾಡಿದಾಗ ಇಡೀ ಸಮಾಜದ ಸಾಹಿತ್ಯ ಲೋಕವಾಗುತ್ತದೆ ಎಂದು ಹೇಳಿದರು.
ಶಕ್ತಿದೇವತೆ, ವೀರ ವನಿತೆ ಎಂದು ಹೆಸರಾದವಳು, ತಾಳ್ಮೆಯ ಮೂರ್ತಿ, ಗಂಗೆ, ತುಂಗೆ, ಯಮುನ, ಭದ್ರೆಯಾಗಿ ಹರಿದವಳು, ಜನ್ಮ ಕೊಡುವವಳು ಹೆಣ್ಣು, ಆದರು ಹೆಣ್ಣು ಬ್ರೂಣ ಕಂಡರಾಗದು ಕೆಲವರಿಗೆ. ಇದು ನಿಲ್ಲದಿದ್ದರೆ ನಿನಗೆ ನೀನೆ ನಶಿಸಿ ಹೋಗುವ ಎಚ್ಚರಿಕೆ ಹಾಗೂ ಮಹಿಳೆಯರ ಒಕ್ಕೊರಳಿನ ಕಹಳೆಯಾಗಿದೆ. ಇಂದು ನಾವು ಮೊಬೈಲ್ ಯುಗದಲ್ಲಿ ಪುಸ್ತಕದಿಂದ ದೂರ ಹೋಗುತ್ತಿದ್ದೇವೆ. ಕವಿತೆ ರೀಲಾಗಬಹುದು, ಭಾವ ಬದಲಾಗಬಹುದು. ಆದರೆ ನಮ್ಮ ಆಡು ಭಾಷೆ ಗ್ರಾಮೀಣ ಪದಗಳು ನಶಿಸಿಹೋಗಬಾರದು. ನಿಜವಾದ ಸಾಹಿತ್ಯ ಬರಹಗಾರ್ತಿಯಾಗಬೇಕೆಂದರೆ ನಮ್ಮ ಸುತ್ತಮುತ್ತಲಲ್ಲಿ ಉಂಟಾಗುವ ಪ್ರತಿಯೊಂದು ಘಟನೆಯನ್ನು ಸಾಹಿತ್ಯ ರೂಪರದಲ್ಲಿ ಕಾಣುವ ಪ್ರಯತ್ನ ಮಾಡಬೇಕು. ಅದನ್ನೇ ಚುಟುಕಾಗಿ ಬರೆಯಬೇಕು. ಮುಂಂದೊಂದು ದಿನ ಆ ಚುಟುಕುಗಳು ಒಂದು ಪುಸ್ತಕವಾಗಿ ಬಿಡುಗಡೆ ಮಾಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಾಹಿತ್ಯ ಕ್ರಾಂತಿಯಾಗಬೇಕಿದೆ ಎಂದು ಹೇಳಿದರು.

ಸಾಹಿತ್ಯ ಬರೆಯಲು ಭಯ ಬಿಡಬೇಕು. ನಿಮ್ಮ ಅನುಭವವೇ ನಿಮ್ಮ ದೊಡ್ಡ ಪದವಿ. ಕಾಗದ, ಡೈರಿ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಬರೆಯಿರಿ. ಆದರೆ ಬರೆಯುವುದನ್ನು ನಿಲ್ಲಿಸಬೇಡಿ. ನಿಮ್ಮ ನೋವು ನಾಳೆ ಯಾರದ್ದೋ ಔಷಧಿಯಾಗುತ್ತದೆ. ಈ ಕರೆ ಯುವ ಪೀಳಿಗೆಗಾಗಿ ಕೊಡುತ್ತೇನೆ. ನಮ್ಮ ಜಿಲ್ಲೆಯಲ್ಲಿಯೂ ಸಹ ಅನೇಕ ಮಹಿಳಾ ಸಾಧಕಿಯರು ವಿವಿಧ ಕ್ಷೇತ್ರದಲ್ಲಿ, ಅಂದರೆ ರಾಜಕೀಯವಾಗಿ, ಶೈಕ್ಷಣಿಕವಾಗಿ, ಉದ್ಯಮಿಯಾಗಿ, ಕೃಷಿಕರಾಗಿ, ಬರಹಗಾರ್ತಿಯಾರಾಗಿ ಸಾಧನೆ ಮಾಡಿರುತ್ತಾರೆ ಇದರಿಂದ ಪ್ರೇರಿತರಾಗೋಣ. ಸಾಹಿತ್ಯ ಎಂದರೆ ಕೇವಲ ಪುಸ್ತಕವಲ್ಲ ಅದು ನಮ್ಮ ಉಸಿರು, ಮಹಿಳೆಯ ಜೀವನವೇ ಮಹಾಕಾವ್ಯ ಅಡುಗೆ ಮನೆಯಿಂದ ಅರಮನೆವರೆಗೆ, ಹೊಲದಿಂದ ಹೋರಾಟದ ವೇದಿಕೆ ವರೆಗೆ, ಮಹಿಳೆ ಬರೆದ ಬದುಕಿದ ಪ್ರತಿಕ್ಷಣವು ಸಾಹಿತ್ಯ ಇಂದು ನಾವು ಇಲ್ಲಿ ಸೇರಿರುವುದು ಕವಿತೆ ಓದಲು ಮಾತ್ರವಲ್ಲ ನಮ್ಮ ಅನುಭವಕ್ಕೆ,ನೋವಿಗೆ, ಕನಸಿಗೆ ಪದ ಕೊಡಲು. ಅವಳು ಬರೆಯಲಾರಳು ಎಂದಿದ್ದ ಕಾಲ ಒಂದಿತ್ತು. ಇಂದು ಅವಳು ಬರೆಯದೆ ಇತಿಹಾಸವೇ ಅಪೂರ್ಣ ಎಂಬ ಕಾಲದಲ್ಲಿ ನಾವಿದ್ದೇವೆ ಎಂದು ಹೇಳಿದರು.

ಕನ್ನಡ ಮಹಿಳಾ ಸಾಹಿತ್ಯದ ಬಗ್ಗೆ ದೊಡ್ಡ ಇತಿಹಾಸವೆ ಇದೆ. ಸಹೋದರಿಯರೆ ನಮ್ಮ ನೆಲಕ್ಕೆ ಬಹಳ ದೊಡ್ಡ ಪರಂಪರೆ ಇದೆ, 12ನೇ ಶತಮಾನದಲ್ಲಿ ಅಕ್ಕಮಹಾದೇವಿ ಕಾಯಕವೆ ಕೈಲಾಸ ಎಂದು ವಚನದ ಮೂಲಕ ದ್ವನಿ ಎತ್ತಿದರು 20ನೇ ಶತಮಾನದಲ್ಲಿ ತ್ರಿವೇಣಿ, ಎಂ ಕೆ ಇಂದಿರ, ಅನಸೂಯ ಮುಂತಾದವರು ಕಾದಂಬರಿಯ ಮೂಲಕ ಹೆಣ್ಣಿನ ಮನಸ್ಸನ್ನು ಅನಾವರಣ ಮಾಡಿದರು. ಇಂದಿನವರೆಗು ಅನೇಕ ಕವಿಯತ್ರಿಯರು ಸಾಹಿತ್ಯಕವಾಗಿ ಸಾಧನೆ ಮಾಡಿದ್ದಾರೆ.ಅದರೆ ಇನ್ನು ಪ್ರಶ್ನೆ ಇದೆ. ಇಂದಿನ ಪಠ್ಯ ಪುಸ್ತಕದಲ್ಲಿ ಎಷ್ಟು ಮಹಿಳಾ ಲೇಖಕರಿದ್ದಾರೆ, ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಲ್ಲಿ ಎಷ್ಟು ಮಹಿಳೆಯರು ಇದ್ದಾರೆ. ಈ ಅಂತರವನ್ನು ತುಂಬುವುದು ನಮ್ಮ ಜವಾಬ್ದಾರಿ. ಮನೆ ಕೆಲಸ ಮುಗಿಸಿ ರಾತ್ರಿ 12 ರ ನಂತರ ಬರೆಯುವ ನಮ್ಮ ತಾಯಂದಿರ ಶ್ರಮಕ್ಕೆ ಸಲಾಂ ಎಂದು ಹೇಳಿದರು.
ಇಷ್ಟೆಲ್ಲಾ ಕ್ಷೇತ್ರದಲ್ಲಿ ಸಾಧಿಸಿದ ಗಳಿಸಿದ ಅನುಭವಿಸಿದ ಕೀರ್ತಿ ಹೆಣ್ಣು ಮಕ್ಕಳದು ಅಂತ ಹೇಳ್ತಿನಿ.ಇಲ್ಲೆಲ್ಲಾ ಅಲ್ಲೆಲ್ಲಾ ಎಲ್ಲೆಲ್ಲಾ ಸಾಹಿತ್ಯ ಹುಟ್ಟುತ್ತಲೇ ಇರುತ್ತದೆ. ಇದನ್ನು ಹೆಕ್ಕಿ ತೆಗೆಯುವ ಹೃದಯ ಕವಿ ಹೃದಯ ಆಗಿರುತ್ತದೆ. ಇಷ್ಸಾಟೆಲ್ಲಾ ಧಕ ಹೆಣ್ಣು ಮಕ್ಕಳು ಯಾವುದೇ ಪ್ರಶಸ್ತಿ ಕೇಳುವುದಿಲ್ಲ, ಸನ್ಮಾನ ಕೇಳುವುದಿಲ್ಲ, ಅವರವರ ಕರ್ತವ್ಯ ನಿರ್ವಹಿಸುತ್ತಾ ದಿನದೊಡುತ್ತಾರೆ. ಇಷ್ಟೆಲ್ಲಾ ಸಾಧಕರಾದ ಮಹಿಳೆಯರ ಬಗ್ಗೆ ಬರೆಯಲು ಸಾಹಿತ್ಯದ ಬಗ್ಗೆ ಬರೆಯಲು ಸಹ ಪದಗಳು ಸಾಲಲ್ಲ, ಪುಟಗಳು ಸಾಲಲ್ಲ ಆದರೂ ಸಹ ಹೆಣ್ಮಕ್ಕಳ ಅತ್ಯಾಚಾರ ಯಥೇಚ್ಛವಾಗಿ ನಡೆಯುತ್ತಾ ಇರುವುದು ಶೋಷಣೆ ಇವೆಲ್ಲ ವಿಷಾದನೀಯ. ಶಾಲೆಗೆ ಹೋಗುವ ಕಂದಮ್ಮಗಳು ಇವತ್ತು ಅರಿವಿಗೆ ಮುನ್ನವೇ ಆತ್ಯಾಚಾರಕ್ಕೆ ಒಳಗಾಗುತ್ತಿದ್ದಾವೆ ಇದು ಅತ್ಯಂತ ಘೋರ ಒಂಟಿ ಹೆಣ್ಣುಮಗಳು ಮತ್ತು ಮಹಿಳೆ ಹಾಗೂ ವೃದ್ದ ಮಹಿಳೆಗೆ ಇದು ತಪ್ಪಿದ್ದಲ್ಲ. ಸಮಾಜದಲ್ಲಿ ಇದು ನಿಲ್ಲದಿದ್ದರೆ ಸಮಾಜವೇ ಸರ್ವನಾಶ ಆಗುತ್ತದೆ. ಬಹುಷಃ ನಮ್ಮಲ್ಲಿ ಶಿಕ್ಷೆಯ ಕಾನೂನಿನ ಪ್ರಮಾಣ ಕಡಿಮೆ ಇರಬಹುದು ಅನ್ನಿಸುತ್ತೆ ಇದಕ್ಕೆ ಸಾಹಿತ್ಯ ಹೋರಾಟದ ಲೇಖನಗಳು ಹುಟ್ಟಬೇಕು. ಇನ್ನು ಹೆಣ್ಮಕ್ಕಳಿಗೆ ಅಚ್ಚುಕಟ್ಟು ಜನ್ಮ ಸಿದ್ಧ ಹಕ್ಕು ಅದನ್ನು ನಾವು ಮನೆ, ಅಂಗಡಿ, ಬೀದಿ, ದಾರಿ, ಮಾಲುಗಳು, ಊರು, ಪಟ್ಟಣ ಹೀಗೆ ಎಲ್ಲಾ ಸ್ವಚ್ಛತೆಗೆ ಆದ್ಯತೆಗೆ ನಮ್ಮ ಸಾಹಿತ್ಯ ಹುಟ್ಟಬೇಕು.

ಮಹಿಳೆ ಎಂದರೆ ಕೇವಲ ಮನೆಯ ಬೆಳಕಲ್ಲ ಅವಳು ಸಮಾಜದ ಶಕ್ತಿ ದೇಶದ ಭವಿಷ್ಯ ಇಂದು ನಾವು ಇಲ್ಲಿ ಸೇರಿರುವುದು ನಮ್ಮ ಸಮಸ್ಯೆಗಳನ್ನು ಮಾತನಾಡಲು ಮಾತ್ರವಲ್ಲ ನಮ್ಮ ಸಾಧನೆಗಳನ್ನು ಆಚರಿಸಲುಮತ್ತು ಮುಂದಿನ ಹಾದಿಯನ್ನು ನಿರ್ಧರಿಸಲು.ಇತ್ತೀಚಿನ ವರ್ಷಗಳಲ್ಲಿ ನಮ್ಮ ಜಿಲ್ಲೆಯ ಮಹಿಳೆಯರು ಸಹ ಶಿಕ್ಷಣಸ್ವ ಉದ್ಯೋಗ, ಕೃಷಿ, ಆರೋಗ್ಯ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳು ನಿಜಕ್ಕೂ ಹೆಮ್ಮೆಯ ವಿಷಯ. ಸ್ವಸಹಾಯಸಂಘಗಳ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುತ್ತಿರುವ ನಮ್ಮ ತಾಯಂದಿರು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಹೋರಾಡುತ್ತಿರುವ ತಾಯಂದಿರು ಇವರೆಲ್ಲರೂ ನಮಗೆ ನಿಜವಾದ ಪ್ರೇರಣೆ ಎಂದು ಹೇಳಿದರು.

ಸಮ್ಮೇಳನವನ್ನು ಮಾಜಿ ಸಚಿವೆ ಶ್ರೀಮತಿ ಮೋಟಮ್ಮ ಉದ್ಘಾಟಿಸಿದರು, ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಶ್ರೀಮತಿ ನಿರ್ಮಲ ಮಂಚೇಗೌಡ ಪ್ರಾಸ್ತಾವಿಕ ನುಡಿಗಳನ್ನು ಹಾಡಿದರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಆಶಯ ನುಡಿಗಳನ್ನು ಆಡಿದರು,

ಕಾರ್ಯಕ್ರಮದಲ್ಲಿ ಮಹಿಳಾ ಗೋಷ್ಠಿ, ಎಸ್ ಜಾನಕಿ ನುಡಿ ನಮನ ಗೋಷ್ಠಿ ಹಾಗೂ ಮಹಿಳಾ ಸಾಹಿತ್ಯ ಸಾಧಕರಿಗೆ ವಿವಿಧ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಇದಕ್ಕೂ ಮುನ್ನ ರಾಷ್ಟ್ರಧ್ವಜಾರೋಹಣವನ್ನು ಮಾಜಿ ಸಚಿವೆ ಮೋಟಮ್ಮ, ಪರಿಷತ್ತಿನ ಧ್ವಜಾರೋಹಣವನ್ನು ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ನಾಡಧ್ವಜಾರೋಹಣವನ್ನು ಕಸಾಪ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ ನೆರವೇರಿಸಿದರು. ಬಳಿಕ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಮ್ಮೇಳನಾಧ್ಯಕ್ಷೆ ಭಾಗ್ಯ ಲಕ್ಷ್ಮಣ್ ಗೌಡ ಅವರ ಮೆರವಣಿಗೆ ನಡೆಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣ ನುಡಿಯನ್ನು ಡಾ.ಜೆ.ಪಿ.ಕೃಷ್ಣೇಗೌಡ ಬಿಡುಗಡೆಗೊಳಿಸಿದರು. ವಿವಿಧ ಸಂಘ ಸಂಸ್ಥೆ ಮುಖಂಡರು ಸಮ್ಮೇಳನಾಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಾಹಿತಿ ಹಳೆಕೋಟೆ ರಮೇಶ್, ಡಾ. ಜೆ.ಪಿ ಕೃಷ್ಣೇಗೌಡ, ನಿಕಟಪೂರ್ವ ಸಮ್ಮೇಳನಾಧ್ಯರಾದ ಡಾ.ಸಿ.ಎಂ.ಸುಲೋಚನಾ, ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಚೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಡಿ.ಕೆ.ಲಕ್ಷ್ಮಣ್ ಗೌಡ, ಕಾರ್ಯದರ್ಶಿ ಸುಚಿತ್ರ ಪ್ರಸನ್ನ, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ರೇಖಾ ರವಿರಾಜ್, ಸುನಿತಾ ಕಿರಣ್ ತರಿಕೆರೆ, ಲತಾ ರಾಜಶೇಖರ್ ಕಡೂರು, ಅಶ್ವಿನಿ ಸಂತೋಷ್, ವಿಜಯಲಕ್ಷ್ಮಿ, ವಿದ್ಯಾರಾಜು ಮತ್ತಿತರರಿದ್ದರು.

ಸಮ್ಮೇಳನದಲ್ಲಿ ಮಹಿಳೆಯರು ಹಾಗೂ ಸಾಹಿತ್ಯಾಸಕ್ತರು ಸಂಭ್ರಮದಿಂದ ಭಾಗವಹಿಸಿದ್ದರು. ಅತ್ಯಂತ ಯಶಸ್ವಿಯಾಗಿ ವಿಜೃಂಭಣೆಯಿಂದ ಮಹಿಳಾ ಸಾಹಿತ್ಯ ಸಮ್ಮೇಳನವು ನೆರವೇರಿತು

 

 

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
;