ಉದ್ದೇಶಿತ ಶಿಶಿಲ-ಬೈರಾಪುರ ರಸ್ತೆ ಅಭಿವೃದ್ಧಿ ಬಗ್ಗೆ ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನಾ (ಪಿಎಂಜಿಎಸ್‍ವೈ) ಯೋಜನಾ ವಿಭಾಗ ಚಿಕ್ಕಮಗಳೂರು ವತಿಯಿಂದ ರಸ್ತೆಯ ಸ್ಥಳ ಪರಿಶೀಲನೆ ನಡೆಸಲಾಯಿತು. ಕಾರ್ಯನಿರ್ವಾಹಕ ಅಭಿಯಂತರರಾದ ತರುಣ್ ಶಶಿ ಹಾಗೂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಹರೀಶ್ ರವರಿಗೆ ಗ್ರಾಮಸ್ಥರು ಪಿಎಂಜಿಎಸ್‍ವೈ ಅಧಿಕಾರಿಗಳು ರಸ್ತೆಯ ಪ್ರಸ್ತುತ ದುಸ್ಥಿತಿ, ಮಳೆಗಾಲದಲ್ಲಿ ಸಂಭವಿಸಿರುವ ಮಣ್ಣಿನ ಸವೆತ, ಬದಿ ಚರಂಡಿ ಇಲ್ಲದಿರುವುದು ಹಾಗೂ ಗುಡ್ಡ ಕುಸಿತದ ಸ್ಥಳಗಳನ್ನು ಪರಿಶೀಲಿಸಿದರು.
ಈ ರಸ್ತೆಯು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕನ್ನು ದಕ್ಷಿಣ ಕನ್ನಡ ಜಿಲ್ಲೆ ಧರ್ಮಸ್ಥಳ ಶಿಶಿಲಕ್ಕೆ ಸಂಪರ್ಕಿಸುವ ಅಂತರ ಜಿಲ್ಲಾ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಇದನ್ನು ಎಲ್ಲಾ ಹವಾಮಾನಕ್ಕೂ ತಡೆದುಕೊಳ್ಳುವ ರಸ್ತೆಯಾಗಿ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಗ್ರಾಮಸ್ಥರು ಮನವಿ ಮಾಡಿದರು..
1. ಹಸಿರು ಮಾದರಿ ರಸ್ತೆ ಪರಿಕಲ್ಪನೆ ಪ್ರಸ್ತಾವನೆ:
ಈ ಸಂದರ್ಭದಲ್ಲಿ ನಿವೃತ್ತ ಅಭಿಯಂತರರಾದ ಹೆಚ್.ಎಂ. ಶಿವಪ್ರಕಾಶ್ ರವರು ಪರಿಶೀಲನೆಗೆ ಬಂದಂತಹ ಅಧಿಕಾರಿಗಳಿಗೆ ಈ ರಸ್ತೆಯನ್ನು ರಾಜ್ಯದಲ್ಲೇ ಮಾದರಿಯಾದ ಶೂನ್ಯ ಇಂಗಾಲ ಹೊರಸೂಸುವಿಕೆ ಹಸಿರು ರಸ್ತೆಯಾಗಿ (Zero Carbon Green Road) ಅಭಿವೃದ್ಧಿಪಡಿಸಲು ಚರ್ಚಿಸಿದರು..
- ಕೋಲ್ಡ್ ಮಿಕ್ಸ್ ಎಮಲ್ಷನ್ ತಂತ್ರಜ್ಞಾನ: ರಸ್ತೆ ಡಾಂಬರೀಕರಣಕ್ಕೆ ಬಿಸಿ ಮಾಡುವ ಅಗತ್ಯವಿಲ್ಲದ ಎಮಲ್ಷನ್ ಕೋಲ್ಡ್ ಮಿಕ್ಸ್ ಪದ್ಧತಿ. ಇದರಿಂದ ಹೊಗೆ ಇಲ್ಲ, ಇಂಧನ ಉಳಿತಾಯ, ಅರಣ್ಯ ಪ್ರದೇಶಕ್ಕೆ ಪೂರಕ ಹಾಗೂ ಮಳೆಗಾಲದಲ್ಲೂ ಕಾಮಗಾರಿ ಮಾಡಬಹುದು.
- ಮಳೆ ನೀರು ಕೊಯ್ಲು ವ್ಯವಸ್ಥೆ: ರಸ್ತೆಯ ಇಕ್ಕೆಲಗಳಲ್ಲಿ ನಿರ್ಮಿಸುವ ಚರಂಡಿ ನೀರನ್ನು ಪ್ರತಿ 200 ಮೀಟರ್‍ಗೊಮ್ಮೆ 1x1x1.5 ಮೀ ಅಳತೆಯ ಇಂಗು ಗುಂಡಿಗಳಿಗೆ ಸಂಪರ್ಕಿಸಿ ಅಂತರ್ಜಲ ವೃದ್ಧಿಗೆ ಕ್ರಮ. ಗುಡ್ಡದ ಬದಿಯಲ್ಲಿ ಗಲ್ಲಿ ಪ್ಲಗ್ ನಿರ್ಮಾಣ. ಮಾಡಬಹುದಾಗಿದೆ ಎಂದರು.
ಗೃಹಮಂಡಲಿಯ ಮಾಜಿ ಅಧ್ಯಕ್ಷ ಜಿ.ಹೆಚ್.ಹಾಲಪ್ಪಗೌಡರು ಮಾತನಾಡುತ್ತಾ. ಸ್ಥಳೀಯ ಮರಗಳ ನೆಡುವಿಕೆ: ರಸ್ತೆಯ ಇಕ್ಕೆಲಗಳಲ್ಲಿ ಮಲೆನಾಡಿನ ಸ್ಥಳೀಯ ತಳಿಗಳಾದ *ಹೊನ್ನೆ, ನಂದಿ, ತೇಗ, ನೆಲ್ಲಿ, ಹoಟಿge, ಹಲಸು, ಮಾವು, ಅತ್ತಿ, ಬೇವು, ಬಿದಿರು ಮತ್ತು ವೆಟಿವರ್ ಹುಲ್ಲು ಗಳನ್ನು ನೆಡುವುದು. ಪ್ರತಿ ಮರವನ್ನು ಗ್ರಾಮದ ಒಂದು ಕುಟುಂಬ ದತ್ತು ತೆಗೆದುಕೊಂಡು ಸಂರಕ್ಷಿಸಲಿದೆ. ಇದರಿಂದ ಮಣ್ಣಿನ ಸವಕಳಿ ತಡೆ, ಇಂಗಾಲ ಹೀರಿಕೆ ಹಾಗೂ ಹಕ್ಕಿಗಳ ಆವಾಸ ಸ್ಥಾನವಾಗಿದೆ ಎಂದರು.
ಮುಖಂಡರಾದ ಬಿ.ಕೆ.ಲಕ್ಷ್ಮಣ್ ಕುಮಾರ್, ನಿಡುವಾಳೆ ಚಂದ್ರಣ್ಣ, ವಾಸುದೇವ್ ಸತ್ತಿಗನಹಳ್ಳಿ, ಊರುಬಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಚ್ಚಿ ಗೌಡ, ಲಿಂಗಪ್ಪ ಪೂಜಾರಿ, ಸುಮಿತ್ರೆ ಗೌಡ ಬೈರಾಪುರ ಹಾಗೂ ಗ್ರಾಮಸ್ಥರಾದ ರುದ್ರೇಗೌಡ, ಜಗದೀಶ್, ದೀಕ್ಷಿತ್, ಪವನ್ ಅವರುಗಳು ನಮ್ಮ ಕುಲದೇವರು ಶಿಶಿಲಕ್ಕೆ ಹೋಗಬೇಕಾದರೆ ಹರ ಸಹಾಸವೇ ಪಡಬೇಕಾಗಿದೆ. ಆದ್ದರಿಂದ ಈ ರಸ್ತೆಯನುನ ಅಭಿವೃದ್ದಿ ಪಡಿಸುವಂತೆ ಮತ್ತು ಪ್ರತಿ ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವುದೇ ಕಷ್ಟಕರವಾಗಿದ್ದು ಈ ರಸ್ತೆ ಅಭಿವೃದ್ದಿ ಪಡಿಸಿದಲ್ಲಿ ಸುಲಭವಾಗಿ ದಕ್ಷಿಣ ಕನ್ನಡಕ್ಕೆ ಸಂಪರ್ಕ ದೊರೆತಂತಾಗುತ್ತದೆ ಇದು ಬಹಳ ಹಿಂದಿನಿಂದಿನಿಂದ ಇರುವ ಹೇರೆತ್ತಿನ ದಾರಿಯಾಗಿದ್ದು ನಮ್ಮ ಪೂರ್ವಜರು ಕಂಡ ಕನಸಾಗಿದೆ. ಎಂದರು.
ಗ್ರಾಮಸ್ಥರ ಈ ಪರಿಕಲ್ಪನೆಯನ್ನು ಮೆಚ್ಚಿದ ಕಾರ್ಯನಿರ್ವಾಹಕ ಅಭಿಯಂತರರಾದ ತರುಣ್ ಶಶಿ ರವರು, ಈ ಪ್ರಸ್ತಾವನೆಯನ್ನು ದೆಹಲಿಯ NRIDA ಹೊಸ ತಂತ್ರಜ್ಞಾನ (New Technology Initiative) ಅಡಿಯಲ್ಲಿ ಹಾಗೂ ಜಲ್ ಶಕ್ತಿ ಅಭಿಯಾನದೊಂದಿಗೆ ಒಗ್ಗೂಡಿಸಿ (Convergence) ಅಂದಾಜು ತಯಾರಿಸಿ ಕಳುಹಿಸುವುದಾಗಿ ಭರವಸೆ ನೀಡಿದರು.


