October 7, 2026
;
alduru 1

 

 

ಆಲ್ದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025 26ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆಯಿತು. ಸಂಘದ ಪ್ರಭಾರ ಕಾರ್ಯನಿರ್ವಾಹಕರಾದ ಅನ್ನಪೂರ್ಣ ಎಂಎಂ ವಾರ್ಷಿಕ ವರದಿ ಮಂಡಿಸಿ ವಾರ್ಷಿಕ ವಹಿವಾಟು ಲಾಭಾಂಶ ಆಪತ್ತಿನ ನಿಧಿ ಶೇರು ಬಂಡವಾಳ ಇತರೆ ನಿಧಿಗಳು ಸದಸ್ಯರಿಂದ ಪಡೆದಿರುವ ಠೇವಣಿ ಸಾಲ ವಿತರಣೆ ಮುಂತಾದ ವಿವರಗಳು ಮಾಹಿತಿಯನ್ನು ಸಭೆಯಲ್ಲಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷರಾದ ಹೆಚ್ ಬಿ ವೆಂಕಟೇಶಗೌಡ, ತಾನು ಇದೆ ಸಂಘದಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದು ಸಂಘವು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾ ಬಂದಿದ್ದು, ನಾನು ಸಿಇಒ ಹುದ್ದೆಯಲ್ಲಿದ್ದಾಗ ಒಂದು ಹಂತದಲ್ಲಿ 86 ಲಕ್ಷ ನಷ್ಟದಲ್ಲಿತ್ತು. ಸಂಘದ ಪ್ರತಿಯೊಬ್ಬ ನಿರ್ದೇಶಕರು ಪದಾಧಿಕಾರಿಗಳು ಸಿಬ್ಬಂದಿಗಳ ಸಹಕಾರ ಪರಿಶ್ರಮದಿಂದ ಪ್ರಸ್ತುತ ಸಂಘವು 3502685 ರೂ ನಿವ್ವಳ ಲಾಭದಲ್ಲಿದ್ದು,ಸಭೆಯಲ್ಲಿ ಶೇಕಡ 10ರಷ್ಟು ಡಿವಿಡೆಂಟನ್ನು ಷೇರುದಾರರಿಗೆ ಒದಗಿಸಲಾಗುವುದು ಎಂದು ತಿಳಿಸಿದರು.

ಸಂಘದ ಅಭಿವೃದ್ಧಿಗೆ ಸರ್ವರು ಸಹಮತ ಮತ್ತು ಒಗ್ಗಟ್ಟಿನಿಂದ ಸಹಕರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಉಪಾಧ್ಯಕ್ಷರಾದ ಡಿಎಂ ವಿನೋದ, ನಿರ್ದೇಶಕರುಗಳಾದ ಎಚ್ಎಸ್. ಕವೀಶ್,ಎಡಿ. ಕೌಶಿಕ್,ಎಚ್ ಆರ್ ಸಂದೇಶ್,ಡಿ ಆರ್ ದಿಲೀಪ್ ಕುಮಾರ್,ಡಿ ಚಂಪಾ, ಎಚ್ ಪಿ ನಾರಾಯಣಗೌಡ, ಹೂವಪ್ಪ ಶೆಟ್ಟಿ, ದೇವರಾಜ್, ಚನ್ನಪ್ಪ, ಬಿ ಎಂ ಸುದರ್ಶನ್, ಮೇಲ್ವಿಚಾರಕ ಕೆಆರ್ ರಘು, ಸಿಬ್ಬಂದಿಗಳು ಸದಸ್ಯರು ಶೇರುದಾರರು ಭಾಗವಹಿಸಿದ್ದರು.

 

 

Leave a Reply

Your email address will not be published. Required fields are marked *