October 24, 2026
;
kousalya

 

 

ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು, ಇವರ ಪ್ರಯೋಜಕತ್ವದಲ್ಲಿ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಚಿಕ್ಕಮಗಳೂರು ಜಿಲ್ಲೆ ಇವರ ವತಿಯಿಂದ ಸ್ವಂತ ಉದ್ಯಮವನ್ನು ಸ್ಥಾಪಿಸಲು ಬಯಸುವ ಅಭ್ಯರ್ಥಿಗಳಿಗೆ ನವೆಂಬರ್ 05 ರಿಂದ ನವೆಂಬರ್ 17 ರವರೆಗೆ ಜಿಲ್ಲೆಯಲ್ಲಿ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೆತಿ ಕಾರ್ಯಕ್ರಮವನ್ನು ಜಿಲ್ಲಾ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

18 ರಿಂದ 45 ವರ್ಷ/ವಯೋಮಿತಿಯ, 10 ನೇ ತರಗತಿ ಉತ್ತೀರ್ಣರಾದ ಎಲ್ಲಾ ವರ್ಗದ ಆಸಕ್ತ  ಉದ್ಯಮ ಆಕಾಂಕ್ಷಿಗಳು, ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು 2 ಪಾಸ್ ಪೋರ್ಟ್ ಅಳತೆಯ ಪೋಟೋ, ಜಾತಿ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್  ಜೆರಾಕ್ಸ್ ಪ್ರತಿಯೊಂದಿಗೆ ಜಂಟಿ ನಿರ್ದೇಶಕರ ಕಛೇರಿ,ಸಿಡಾಕ್.ಜಿಲ್ಲಾ ಕೈಗಾರಿಕಾ ಕೇಂದ್ರ,ಜಿಲ್ಲಾ ಪಂಚಾಯತಿ ಹತ್ತಿರ, ಕೆ.ಎಂ.ರಸ್ತೆ, ಚಿಕ್ಕಮಗಳೂರು .(ದೂ.ಸಂ. 6364826966, 9448812974)ಈ ವಿಳಾಸಕ್ಕೆ ಸಲ್ಲಿಸಬಹುದಾಗಿದೆ.

 

 

Leave a Reply

Your email address will not be published. Required fields are marked *