ಚಿಕ್ಕಮಗಳೂರು ಜ್ಯೋತಿನಗರ ನಿವಾಸಿ ಸರ್ವೀಸ್ ಸ್ಟೇಷನ್ ಮಾಲೀಕ ಭರತ್ (32 ವರ್ಷ) ಎಂಬ ಯುವಕ ನೇಣಿಗೆ ಶರಣಾಗಿದ್ದಾರೆ.
ಕಂದಾಯ ಇಲಾಖೆ ನಿವೃತ್ತ ರೆವೆನ್ಯೂ ಇನ್ಸ್ ಪೆಕ್ಟರ್ ಗಂಗಾಧರ್ ಎಂಬುವವರ ಪುತ್ರ ಭರತ್ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭರತ್ ಚಿಕ್ಕಮಗಳೂರಿನಲ್ಲಿ ಹೋಟೆಲ್ ಮತ್ತು ಜ್ಯೋತಿನಗರದಲ್ಲಿ ಸರ್ವೀಸ್ ಸ್ಟೇಷನ್ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭರತ್ ತಂದೆ ತಾಯಿ ಸಹೋದರಿಯನ್ನು ಅಗಲಿದ್ದಾರೆ. ಅವರು ಅಪಾರ ಸ್ನೇಹಬಳಗವನ್ನು ಹೊಂದಿದ್ದರು. ಭರತ್ ಅವರ ಅಕಾಲಿಕ ನಿಧನಕ್ಕೆ ಸ್ನೇಹಬಳಗ ಕಂಬನಿ ಮಿಡಿದಿದೆ.


