November 6, 2026
;
suddi1

 

 

ಕಬ್ಬು ಬೆಳೆಗಾರರಿಗೆ ನಿಗಧಿತ ಬೆಲೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲ್ಲೂಕು ಘಟಕದಿಂದ ಮಂಗಳವಾರ ಚಿಕ್ಕಮಗಳೂರು ನಗರದ ಆಜಾದ್‍ಪಾರ್ಕ್ ವೃತ್ತದಲ್ಲಿ ರೈತ ಮುಖಂಡರುಗಳು ಪ್ರತಿಭಟಿಸುವ ಮುಖೇನಾ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಮಾತನಾಡಿದ ರೈತ ಸಂಘದ ಸದಸ್ಯ ವೈ.ಸಿ.ಸುನೀಲ್‍ಕುಮಾರ್ ರಾಜ್ಯಸರ್ಕಾರ ರೈತರ ಸಮನ್ವಯ ಸಭೆ ನಡೆಸುವ ಮೂಲಕ ಎರಡು ದಿನದಲ್ಲಿ ಬೆಂಬಲ ಬೆಲೆ ನಿಗಧಿಗೊಳಿಸುತ್ತೇವೆಂದ ಮುಖ್ಯ ಮಂತ್ರಿಗಳು, ರೈತರ ಕಣ್ಣಿಗೆ ಮಣ್ಣು ಎರಚಿ, ಕಬ್ಬಿನ ಬೆಳೆ ಒಣಗುವಂತೆ ಮಾಡಿದ್ದಾರೆ ಎಂದು ದೂರಿದರು.

ಕಬ್ಬು, ರಾಗಿ, ಕೊಬ್ಬರಿ, ಜೋಳದ ಬೆಳೆಗೆ ರಾಜ್ಯಾದ್ಯಂತ ರೈತರು ಬೆಂಬಲ ಬೆಲೆಗೆ ಬೃಹತ್ ಹೋರಾ ಡುವ ಸ್ಥಿತಿ ಉದ್ಬವವಾಗಿದೆ. ಬೆಂಬಲ ಬೆಲೆಯ ಖರೀದಿ ಕೇಂದ್ರಗಳಿಲ್ಲ. ಕೇಂದ್ರ ಹಾಗೂ ರಾಜ್ಯಸರ್ಕಾರ ರೈತರ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ರಾಜ್ಯಸರ್ಕಾರ ಉದ್ದೇಶ ಪೂರಿತವಾಗಿ ಕಬ್ಬಿನ ಬೆಳೆಗಳಿಗೆ ವಂಚಿ ಸುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಹಾಲಿನ 7 ರೂ.ಗಳ ನಿಗಧಿ ಮಾಡಿದರೆ, ಖರೀದಿಸುವ ಗ್ರಾಹಕರ ಮೇಲೆ ಭರಿಸುವಂತೆ ಮಾಡುತ್ತಿದ್ದಾ ರೆ. ರೈತರು ಸಂಕಷ್ಟ ವ್ಯಕ್ತಪಡಿಸಿದರೆ, ಸಾರ್ವಜನಿಕರ ಮೇಲೆ ಹೊರೆಹೊರಿಸಿ, ರೈತರ ಚಳುವಳಿಗೆ ಸಾರ್ವಜ ನಿಕರು ಅಸಹಕಾರ ತೋರಿಸಬೇಕು ಎಂಬುದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಹುದೊಡ್ಡ ಹುನ್ನಾರ ವಾಗಿದೆ ಎಂದು ಹೇಳಿದರು.

ರೈತರು ಬೆಂಬಲ ಬೆಲೆ ಕೇಳಿದರೆ ಸಕ್ಕರೆ ಬೆಲೆ ಜಾಸ್ತಿ, ಹಾಲಿನ ದರ ಜಾಸ್ತಿ ಈ ರೀತಿಯ ಹೊರೆ ಗ್ರಾಹ ಕರಿಗೆ ಹಾಕಲಾಗುತ್ತಿದೆ. ರೈತರ ಸಂಕಷ್ಟಕ್ಕೆ ಸ್ಪಂದಿಸಲು ಕಲ್ಯಾಣನಿಧಿ, ಬೆಂಬಲಬೆಲೆ ನಿಧಿ, ಬೆಳೆನಷ್ಟ ಪರಿಹಾರ, ಬರಗಾಲದ ನಿಧಿ ಮೀಸಲಿಡಲು ಶಾಸಕ ಸಭೆಯಲ್ಲಿ ನಿರ್ಧಾರ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ರಾಜ್ಯಸರ್ಕಾರದಲ್ಲಿ ಹಣಕಾಸಿನ ಸಮಸ್ಯೆಯಿದೆ ಎಂದು ಸಂಕಟಪಡುವ ಮುಖ್ಯಮಂತ್ರಿಗಳು, ಎಲ್ಲಾ ಹೊರೆ ಗ್ರಾಹಕರಿಗೆ ಮೇಲೆ ಹೊರಿಸುತ್ತಿದ್ದು ಆಡಳಿತ ನಿರ್ವಹಿಸಲಾಗದ ಡಿ.ಕೆ.ಶಿವಕುಮಾರ್ ಸ್ಥಾನಕ್ಕೆ ರಾಜೀ ನಾಮೆ ಸಲ್ಲಿಸಬೇಕು. ರೈತ ಪರ ನಾಯಕ ಮುಖ್ಯಮಂತ್ರಿಯಾಗಿ ರೈತರಿಗೆ ನೆರವಾಗುತ್ತಾರೆ ಎಂದರು.

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೀಯ ಮಂಡಳಿ ಸದಸ್ಯ ಡಿ.ರಾಮೇಗೌಡ ಮಾತನಾಡಿ ಕಟಾ ವಿಗೆ ಸಿದ್ಧವಾಗಿರುವ ಕಬ್ಬು ಒಣಗುವುದನ್ನು ನಿರೀಕ್ಷಿಸುತ್ತಾ ರೈತ ಚಳುವಳಿಯನ್ನು ಹತಾಶೆಗೆ ನೂಕುವ ವ್ಯವ ಸ್ಥಿತ ಹುನ್ನಾರವನ್ನು ಸರ್ಕಾರಗಳು ನಡೆಸುತ್ತಿವೆ. ಈ ರೈತ ವಿರೋಧಿ ನಿಲುವ ಕೈಬಿಟ್ಟು ತಕ್ಷಣವೇ ನೆರೆರಾಜ್ಯದ ಮಾದರಿಯಂತೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡರುಗಳಾದ ಪರ್ವತೇಗೌಡ, ಕೆ.ಪೂವನೇಶ್, ಎಂ.ಚಂದ್ರ ಶೇಖರ್, ಹುಲಿಯಪ್ಪಗೌಡ, ಮಲ್ಲುಂಡಪ್ಪ, ಯೋಗಾನಂದ್, ಕೆ.ಹೆಚ್.ಪ್ರತೀಶ್ ಬೈರೇಗೌಡ ಮುಂತಾದವರಿದ್ದರು.

 

 

Leave a Reply

Your email address will not be published. Required fields are marked *