ವಕೀಲರ ಮೇಲೆ ಹಲ್ಲೆ ಮಾಡುವ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಚಿಕ್ಕಮಗಳೂರು ವಕೀಲರ ಸಂಘವು ಒಂದು ದಿನದ ಕಲಾಪ ಬಹಿಷ್ಕರಿಸುವ ಮೂಲಕ ವಕೀಲರು ಪ್ರತಿಭಟನೆ ನಡೆಸಿದರು.
ಈ ಕುರಿತು ಮಾತನಾಡಿದ ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ಬಿ.ವೀರೇಂದ್ರಕುಮಾರ್ ರಾಜ್ಯಾದ್ಯಂ ತ ವಕೀಲರ ಮೇಲೆ ಹಲ್ಲೆ, ಮಾರಾಣಾಂತಿಕ ದಾಳಿ ಇತ್ತೀಚೆಗೆ ಹೆಚ್ಚುತ್ತಿದೆ. ಈ ಕಾರಣದಿಂದ ರಾಜ್ಯ ವಕೀಲರ ಪರಿಷತ್ ಆದೇಶದ ಮೇರೆಗೆ ಜಿಲ್ಲೆಯಲ್ಲಿ ವಕೀಲರು ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂ ದು ಹೇಳಿದರು.
ವಕೀಲರ ಸಂರಕ್ಷಣೆ ಸೆಕ್ಷನ್ 4ರ ಕಾಯ್ದೆ ಆರು ತಿಂಗಳಿಂದ ಮೂರು ವರ್ಷದವರೆಗೆ ಚಾಲ್ತಿಯಲ್ಲಿದ್ದು ಈ ಕಾಯ್ದೆಯನ್ನು ಕನಿಷ್ಟ 7 ರಿಂದ 10 ವರ್ಷದವರೆಗೆ ತಿದ್ದುಪಡಿ ಮಾಡಬೇಕು. ರಾಜ್ಯದಲ್ಲಿ ಹಲ್ಲೆ, ಕೊಲೆ ಪ್ರಕರಣಗಳನ್ನು ಸಂಘವು ತೀವ್ರ ಖಂಡಿಸಲಾಗುತ್ತಿದ್ದು ರಾಜ್ಯಸರ್ಕಾರ ವಕೀಲರ ರಕ್ಷಣೆಗೆ ಸೂಕ್ತ ಕ್ರಮ ಕೈಗೊ ಳ್ಳಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ರಾಜ್ಯ ವಕೀಲರ ಪರಿಷತ್, ಬೆಂಗಳೂರು ವಕೀಲರ ಸಂಘದ ಆದೇಶದ ಮೇರೆಗೆ ರಾಜ್ಯಾ ದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದು, ಈ ದಿಸೆಯಲ್ಲಿ ಜಿಲ್ಲಾ ಕೇಂದ್ರದ ನ್ಯಾಯಾಲಯದ ಆವರಣದಲ್ಲಿ ವಕೀ ಲರ ಕ್ಷೇಮಾಭಿವೃದ್ದಿ ದೃಷ್ಟಿಯಿಂದ ಪ್ರತಿಭಟನೆ ಹಮ್ಮಿಕೊಂಡು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಲಾ ಗುತ್ತಿದೆ ಎಂದು ತಿಳಿಸಿದರು.
ಇತ್ತೀಚೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಕೀಲ ವೃತ್ತಿಬಾಂಧವರಿಗೆ ಹಲ್ಲೆ, ಹತ್ಯೆ ಪ್ರಕರಣಗಳು ಹೆಚ್ಚಾಗಿ ವೃತ್ತಿ ಮುಂದುವರೆಸುವುದೇ ಕಷ್ಟಸಾಧ್ಯವಾಗಿದೆ. ವಕೀಲರ ನಿಷ್ಟೆ ಹಾಗೂ ಪ್ರಾಮಾಣಿಕವಾಗಿ ಕರ್ತವ್ಯ ಸಲು ವಾಗಿ ಪೊಲೀಸ್ ಇಲಾಖೆ ವಕೀಲರಿಗೆ ಭೀತಿಯಿಲ್ಲದೇ ಸರಾಗವಾಗಿ ಕೆಲಸ ನಿರ್ವಹಿಸಲು ಅನುವು ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.
ವಕೀಲ ಪಿ.ಪರಮೇಶ್ವರ್ ಮಾತನಾಡಿ ವಕೀಲರ ಸಂರಕ್ಷಣಾ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುವ ಜೊತೆ ಗೆ ರಕ್ಷಣಾ ವ್ಯವಸ್ಥೆ, ವಕೀಲರು ದಾಖಲಿಸುವ ಪ್ರಕರಣದಲ್ಲಿ ಶೀಘ್ರವಾಗಿ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳ ಲು ಕೆಲಸ ಮಾಡಬೇಕು ಎಂಬ ಉದ್ದೇಶದಿಂದ ರಾಜ್ಯಸರ್ಕಾರಕ್ಕೂ ಮನವಿ ಸಲ್ಲಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಜಿ.ಹೆಚ್.ಹೇಮಂತ್‍ಕುಮಾರ್, ಖಜಾಂಚಿ ಪಾರ್ವತಿ ಬಾಯಿ, ಮಾಜಿ ಅಧ್ಯಕ್ಷ ಹೆಚ್.ಎಂ.ಸುಧಾಕರ್, ವಕೀಲರಾದ ಟಿ.ಕೆ.ಫಣಿರಾಜ್, ಮೋಹನ್, ದೀ ಪಕ್, ಪರೀಕ್ಷಿತ್‍ಗೌಡ ಮುಂತಾದವರು ಉಪಸ್ಥಿತರಿದ್ದರು.


