November 6, 2026
;
bus hike

 

 

ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಗಣನೀಯ ಹೆಚ್ಚಳ ಮಾಡಿದ ಬೆನ್ನಲ್ಲೆ ಕರ್ನಾಟಕದ ನಾಲ್ಕು ಸರ್ಕಾರಿ ಸಾರಿಗೆ ನಿಗಮಗಳಲ್ಲಿ ಬಸ್ ದರಗಳನ್ನು ಹೆಚ್ಚಿಸಲಾಗಿದೆ.

ಕೆಎಸ್‌ಆರ್‌ಟಿಸಿ (KSRTC) ಬಸ್‌ಗಳಲ್ಲಿ ಗರಿಷ್ಠ 9 ರೂಪಾಯಿಗಳಷ್ಟು ಮತ್ತು ಬಿಎಂಟಿಸಿ (BMTC) ನಗರ ಬಸ್‌ಗಳಲ್ಲಿ ಗರಿಷ್ಠ 10 ರೂಪಾಯಿಗಳಷ್ಟು ದರ ಏರಿಕೆಯಾಗಿದೆ. ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಪ್ರಕಟಿಸಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (BMTC) ಸೇವೆಗಳಿಗೆ ಬಸ್ ದರವನ್ನು ಸರಾಸರಿ ಶೇ. 33 ರಿಂದ ಶೇ. 35 ರಷ್ಟು ಹೆಚ್ಚಿಸಲಾಗುವುದು. ಹಾಗೆಯೇ, ಕರ್ನಾಟಕ ರಾಜ್ಯದ ಇತರ ರಸ್ತೆ ಸಾರಿಗೆ ನಿಗಮಗಳಾದ KSRTC, KKRTC ಮತ್ತು NWKRTC ಗಳ ಟಿಕೆಟ್ ದರಗಳನ್ನು ಸರಾಸರಿ ಶೇ. 23 ರಷ್ಟು ಹೆಚ್ಚಿಸಲಾಗುವುದು.

ಬೆಂಗಳೂರಿನ ಬಿಎಂಟಿಸಿ ಬಸ್‌ಗಳ ಕನಿಷ್ಠ ಪ್ರಯಾಣ ದರ 6ರಿಂದ 10 ರೂಪಾಯಿಗೆ ಹೆಚ್ಚಳವಾಗಲಿದೆ. ಗರಿಷ್ಠ ದರ 35ರೂಪಾಯಿಗಳಿಂದ 45 ರೂಪಾಯಿಗೆ ಏರಿಕೆಯಾಗಲಿದೆ

ಎಸಿ ವಜ್ರ ಬಸ್‌ಗಳ ಗರಿಷ್ಠ ಪ್ರಯಾಣ ದರ 75 ರೂಪಾಯಿಗಳಿಂದ 90 ರೂಪಾಯಿಗೆ ಹೆಚ್ಚಳವಾಗಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಯುವಜ್ರ ಬಸ್‌ಗಳ ಗರಿಷ್ಠ ದರ 405ರೂಪಾಯಿಗಳಿಂದ 425 ರೂಪಾಯಿಗೆ ಏರಿಕೆಯಾಗಲಿದೆ.

” ಡೀಸೆಲ್ ದರ ಹೆಚ್ಚಳವಾಗಿದೆ, ನಮ್ಮ ರಾಜ್ಯ ಸಾರಿಗೆಯ ನಾಲ್ಕೂ ನಿಗಮಗಳು ನಷ್ಟದಲ್ಲಿವೆ. ನೆರೆಯ ತಮಿಳು ನಾಡು ಮತ್ತು ಮಹಾರಾಷ್ಟ್ರ ಸರ್ಕಾರಗಳೂ ನಮಗಿಂತ ಹೆಚ್ಚು ಬಸ್ ಪ್ರಯಾಣ ದರ ಹೆಚ್ಚಿಸಿವೆ. ಅಲ್ಲಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಬಸ್ ಪ್ರಯಾಣ ದರ ಕಡಿಮೆಯಾಗಿದೆ ಎಂದು ಡೀಸೆಲ್ ಬೆಲೆ ಏರಿಕೆಯನ್ನು ದರ ಪರಿಷ್ಕರಣೆಗೆ ಕಾರಣವಾಗಿ ಉಲ್ಲೇಖಿಸಿ ಸಚಿವ ಭೈರತಿ ಸುರೇಶ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.

ಕೆಎಸ್‌ಆರ್‌ಟಿಸಿ ಸಾಮಾನ್ಯ ಬಸ್‌ಗಳ ಪ್ರಯಾಣ ದರ ಹೆಚ್ಚಳವನ್ನು ಗರಿಷ್ಠ 9ಕ್ಕೆ ಸೀಮಿತಗೊಳಿಸಲಾಗಿದೆ. ರಾಜಹಂಸ ಮತ್ತು ಎಸಿ ಬಸ್‌ಗಳಂತಹ ಐಷಾರಾಮಿ ಸೇವೆಗಳ ದರ ನಿಗದಿಪಡಿಸುವಾಗ ಮಾರುಕಟ್ಟೆಯಲ್ಲಿನ ಸ್ಪರ್ಧಾತ್ಮಕ ದರಗಳನ್ನು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

ಸಾಮಾನ್ಯ ಸಾರಿಗೆ ಸೇವೆಗಳಲ್ಲಿ ಗರಿಷ್ಠ 9 ರೂಪಾಯಿಗಳಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಅವಕಾಶವಿದ್ದು, ಹಂತ ಹಂತವಾಗಿ ದರ ಏರಿಕೆ ಜಾರಿಗೆ ಬರಲಿದೆ. ಕೆಎಸ್‌ಆರ್‌ಟಿಸಿ ಎಕ್ಸ್‌ಪ್ರೆಸ್ ಬಸ್‌ಗಳ ದರ 81ರಿಂದ 100ಕ್ಕೆ ಏರಿಕೆ ಅಂದರೆ ಶೇ. 19ರಷ್ಟು ದರ ಹೆಚ್ಚಳವಾಗಲಿದೆ. ಬಿಎಂಟಿಸಿ ಬಸ್ ಪ್ರಯಾಣ ದರದಲ್ಲಿ 4 ರೂಪಾಯಿಗಳಷ್ಟು ಹೆಚ್ಚಳವಾಗಲಿದೆ ಎಂದು ತಿಳಿಸಿದ್ದಾರೆ.

 

 

Leave a Reply

Your email address will not be published. Required fields are marked *