ರಾಜ್ಯ ಸರ್ಕಾರ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರ ಗೌರವಧನ ಮೊತ್ತವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.
ಪ್ರತಿ ತಿಂಗಳಿಗೆ ಅಧ್ಯಕ್ಷರಿಗೆ ರೂ.6000, ಉಪಾಧ್ಯಕ್ಷರಿಗೆ ರೂ.4000 ಮತ್ತು ಸದಸ್ಯರಿಗೆ ರೂ. 2000 ಗೌರವಧನ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಈ ಹಿಂದೆ ತಿಂಗಳಿಗೆ ಅಧ್ಯಕ್ಷರಿಗೆ 3 ಸಾವಿರ, ಉಪಾಧ್ಯಕ್ಷರಿಗೆ 2 ಸಾವಿರ ಮತ್ತು ಸದಸ್ಯರಿಗೆ 1 ಸಾವಿರ ಗೌರವಧನ ನೀಡಲಾಗುತ್ತಿತ್ತು.



