messi1

 

 

ಕತಾರ್ ನಲ್ಲಿ ನಿನ್ನೆ ಮುಕ್ತಾಯವಾದ ಫಿಫಾ ವಿಶ್ವಕಪ್ ಫಟ್ಬಾಲ್ ಪಂದ್ಯಾವಳಿಯಲ್ಲಿ ಲಿಯಾನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೈನಾ ತಂಡ ವಿಶ್ವ ವಿಜೇತ ಕಿರೀಟ ಮುಡಿಗೇರಿಸಿಕೊಂಡಿದೆ.

ನಿನ್ನೆ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪೀಯನ್ ಫ್ರಾನ್ಸ್ ತಂಡವನ್ನು ಫೆನಾಲ್ಟಿ ಶೂಟೌಟ್ ನಲ್ಲಿ ಸೋಲಿಸಿದ ಅರ್ಜೆಂಟೈನಾ 36 ವರ್ಷಗಳ ನಂತರ ಪ್ರತಿಷ್ಠಿತ ಫಿಫಾ ಟ್ರೋಪಿಗೆ ಮುತ್ತಿಟ್ಟಿತು.

ಈ ಪಂದ್ಯವು ಹಲವು ತಿರುವುಗಳಿಗೆ ಸಾಕ್ಷಿಯಾಗಿ ಕೊನೆಗೆ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸುವ ಹಂತಕ್ಕೆ ತಲುಪಿತು. ಪೆನಾಲ್ಟಿಯಲ್ಲಿ ಅರ್ಜೆಂಟೈನಾ 4-2 ಅಂತರದಿಂದ ಜಯಸಾಧಿಸಿತು.

ಪಂದ್ಯದ ಆರಂಭದಿಂದಲೂ ಮೆಲುಗೈ ಸಾಧಿಸಿದ್ದ ಅರ್ಜೆಂಟೈನಾ ಪಂದ್ಯದ 36ನೇ ನಿಮಿಷದಲ್ಲಿ ನಾಯಕ ಮೆಸ್ಸಿ ಪೆನಾಲ್ಟಿ ಮ್ಯಾಜಿಕ್ ಮೂಲಕ ಗೋಲುಗಳ ಖಾತೆ ತೆರೆದಿತ್ತು. 80ನೇ ನಿಮಿಷದ ವರೆಗೆ ಫ್ರಾನ್ಸ್ ಗೆ ಯಾವುದೇ ಗೋಲು ಬಿಟ್ಟುಕೊಡದೇ ಅರ್ಜೆಂಟೈನಾ 2-0 ಅಂತರದಿಂದ ಮುನ್ನಡೆಯಲ್ಲಿತ್ತು.

ಪಂದ್ಯದ ಕೊನೆಯ ಹಂತದಲ್ಲಿ ಫ್ರಾನ್ಸ್ ತಿರುಗೇಟು ನೀಡಿ ಅಂತಿಮವಾಗಿ ಪಂದ್ಯ 3-3 ಗೋಲುಗಳಿಂದ ಸಮನಾಗಿತ್ತು. ಫಲಿತಾಂಶ ನಿರ್ಧಾರಕ್ಕೆ ಪೆನಾಲ್ಟಿ ಮೊರೆ ಹೋಗಬೇಕಾಯಿತು.

ಪೆನಾಲ್ಟಿಯಲ್ಲಿ ಎಡವಿದ ಫ್ರಾನ್ಸ್ 4-2 ಅಂತರದಿಂದ ಅರ್ಜೆಂಟೈನಾಕ್ಕೆ ಶರಣಾಯಿತು.

1978 ಮತ್ತು 1986ರಲ್ಲಿ ವಿಶ್ವಕಪ್ ಗೆದ್ದಿದ್ದ ಅರ್ಜೆಂಟೈನಾ 36 ವರ್ಷಗಳ ನಂತರ ಮತ್ತೊಮ್ಮೆ ವಿಶ್ವವಿಜೇತ ತಂಡವಾಗಿ ಹೊರಹೊಮ್ಮಿದೆ. ಅರ್ಜೆಂಟೈನಾ ಈ ಹಿಂದೆ ಎರಡು ಬಾರಿ ರನ್ನರ್ ಅಪ್ ಆಗಿತ್ತು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ