ಕಳಸ ಪ್ರಥಮ ದರ್ಜೆ ಕಾಲೇಜು ನ್ಯಾಕ್ ಸಮಿತಿಯಿಂದ A ಗ್ರೇಡ್ ಪಡೆದು ಉತ್ತಮ ಸಾಧನೆ ತೋರಿದೆ.
ಫೆಬ್ರವರಿ 27 ಮತ್ತು 28 ರಂದು ನ್ಯಾಕ್ ಸಮಿತಿ ಕಾಲೇಜಿಗೆ ಭೇಟಿ ನೀಡಿದ್ದರು.
ಇದೀಗ ನ್ಯಾಕ್ ಸಮಿತಿ ಅದರ ಫಲಿತಾಂಶ ಪ್ರಕಟಿಸಿದ್ದು, ಕಾಲೇಜು “A”ಗ್ರೇಡ್ ಪಡೆದಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರಾಚಾರ್ಯರಾದ ವಿನಯ್ ಕುಮಾರ್ ಶೆಟ್ಟಿ ಅವರು ಸಾಧನೆಗೆ ಕಾರಣರಾದ ಸಹೋದ್ಯೋಗಿ ಮಿತ್ರರು, ಕಾಲೇಜು ಅಭಿವೃದ್ಧಿ ಮಂಡಳಿ, ಕ್ಷೇತ್ರದ ಶಾಸಕರು, ಉನ್ನತ ಶಿಕ್ಷಣ ಇಲಾಖೆ, ಸ್ಥಳೀಯರು, ಪೋಷಕರು, ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನ್ಯಾಕ್ ಸಮಿತಿಯಿಂದ A ಗ್ರೇಡ್ ಪಡೆದ ಕಳಸ ಕಾಲೇಜು ಉತ್ತಮ ಶೈಕ್ಷಣಿಕ ಸಾಧನೆ, ಪಠ್ಯೇತರ ಚಟುವಟಿಕೆಗಳಿಂದ ನ್ಯಾಕ್ ಸಮಿತಿಯ ಗಮನ ಸೆಳೆದಿದೆ. ಕಾಲೇಜಿನ ಸಾಧನೆಗೆ ಪೋಷಕರು ಮತ್ತು ಕಳಸ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.



