kumbaka 2

 

 

ಶಾಂತವೇರಿ ಗೋಪಾಲಗೌಡರ ಬದುಕು ಮತ್ತು ವಿಚಾರಗಳು ಇಂದಿನ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶದಲ್ಲಿ ಹೆಚ್ಚು ಪ್ರಸ್ತುತವಾಗಬೇಕು ಎಂದು ಸಂಸ್ಕøತಿ ಚಿಂತಕ ಡಿ.ಎಂ. ಮಂಜುನಾಥಸ್ವಾಮಿ ಅಭಿಪ್ರಾಯಿಸಿದರು.

ಅವರು ಶನಿವಾರ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವದ ಅಂಗವಾಗಿ ಕುಂಭಕ ಸಾಂಸ್ಕøತಿಕ ಪ್ರತಿಷ್ಠಾನದಿಂದ ಮೂಡಿಗೆರೆ ತಾಲ್ಲೂಕಿನ ಹಳೇಕೋಟೆ ರಮೇಶ್ ಅವರ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಾಂತವೇರಿ ಗೋಪಾಗೌಡರ ಬದುಕು ಮತ್ತು ಸಾಧನೆ ವಿಚಾರವಾಗಿ ಮಾತನಾಡುತ್ತಿದ್ದರು.

ಶಿವಮೊಗ್ಗ ಜಿಲ್ಲೆಯ ಶಾಂತವೇರಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಗೋಪಾಲಗೌಡರು ಮುಂದೆ ರಾಜ್ಯದ ಸಮಾಜವಾದಿ ಚಳುವಳಿಗೆ ಹೊಸದಿಕ್ಕು ತೋರಿದರು. ಜಮೀನ್ದಾರರಿಂದ ಸ್ಥಳೀಯ ರೈತರಿಗೆ ಆಗುತ್ತಿದ್ದ ಅನ್ಯಾಯವನ್ನು ಕಂಡು ಯುವಕರಾಗಿದ್ದಾಗಲೇ ಗೋಪಾಲಗೌಡರಲ್ಲಿ ಬಂಡಾಯದ ಭಾವನೆ ಮೂಡಿತ್ತು. ಸಮಾಜದ ಶೋಷಿತರ ಪರವಾಗಿ ಅವರ ಮನಸ್ಸು ಸದಾ ತುಡಿಯುತ್ತಿತ್ತು. ತಾನು ಪ್ರೌಢಶಾಲೆಯಲ್ಲಿ ಇದ್ದಾಗ ಶಾಲೆಯ ಎದುರಿನ ರಸ್ತೆಯಲ್ಲಿ ಸಾಗುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರ ಮೆರವಣಿಗೆ ಕಂಡು ತಾನು ಶಾಲೆ ತೊರೆದು ಸ್ವಾತಂತ್ರ್ಯ ಚಳುವಳಿಗೆ ದುಮುಕಿದರು.

ಮೂರು ಅವಧಿಗೆ ಕರ್ನಾಟಕ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ಗೋಪಾಲಗೌಡರು ಶಾಸನ ಸಭೆಗಳಲ್ಲಿ ಮಂಡಿಸುತ್ತಿದ್ದ ವಿಚಾರಗಳು, ಅವರ ಚಿಂತನೆಗಳು ರಾಜ್ಯದಲ್ಲಿ ಮತ್ತು ದೇಶದಲ್ಲಿ ದೊಡ್ಡ ಸಂಚಲನದ ಸುದ್ದಿಯಾಗುತ್ತಿದ್ದವು. ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ಬರಲು ಗೋಪಾಲಗೌಡರ ವಿಚಾರಧಾರೆಗಳು ಪ್ರಮುಖ ಪ್ರೇರಣೆಯಾಗಿದ್ದವು.
ಅಪ್ಪಟ ಪ್ರಾಮಾಣಿಕರಾಗಿದ್ದ ಮತ್ತು ಸರಳತೆಯ ಪ್ರತೀಕವಾಗಿದ್ದ ಗೋಪಾಲಗೌಡರು ರಾಜ್ಯ ಮತ್ತು ದೇಶಕಂಡ ಒಬ್ಬ ಮುತ್ಸದ್ದಿ ನಾಯಕರಾಗಿ ಹೊರಹೊಮ್ಮಿದ್ದರು. ತಮ್ಮ 49ನೇ ವಯಸ್ಸಿಗೆ ಅವರು ಇಹಲೋಕ ತ್ಯಜಿಸಿದರು. ಅವರ ಜನ್ಮಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಅವರ ಬದುಕಿನ ಬಗ್ಗೆ ಹೆಚ್ಚು ಹೆಚ್ಚು ಚರ್ಚೆ, ಸಂವಾದಗಳು ಆಗಬೇಕು. ಈಗಿನ ಯುವ ಪೀಳಿಗೆಗೆ ಇಂತಹ ಒಬ್ಬ ರಾಜಕೀಯ ನಾಯಕ ನಮ್ಮ ನೆಲದಲ್ಲಿ ಬದುಕಿದ್ದ ಎಂಬುದರ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುಂಭಕ ಸಾಂಸ್ಕøತಿಕ ಪ್ರತಿಷ್ಠಾನದ ಸಂಸ್ಥಾಪಕ, ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಕುಂದೂರು ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ ಶಾಂತವೇರಿ ಗೋಪಾಲಗೌಡರ ಜೀವನ ನಮ್ಮೆಲ್ಲರಿಗೂ ಮಾದರಿಯಾದರೆ ಸಮಾಜದ ಅನೇಕ ಸಮಸ್ಯೆಗಳಿಗೆ ಅದು ಪರಿಹಾರವಾಗುತ್ತದೆ. ಈ ನಿಟ್ಟಿನಲ್ಲಿ ಕುಂಭಕ ಸಾಂಸ್ಕøತಿಕ ಪ್ರತಿಷ್ಠಾನದಿಂದ ವಿವಿದೆಡೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ರೈತಮುಖಂಡ ಗುರುಶಾಂತಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಹಳೇಕೋಟೆ ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೂಡಿಗೆರೆ ಕ.ಸಾ.ಪ. ಅಧ್ಯಕ್ಷ ಹೆಚ್.ಟಿ. ಶಾಂತಕುಮಾರ್, ಚಿಕ್ಕಮಗಳೂರು ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ಲಯನ್ಸ್ ಅಧ್ಯಕ್ಷ ಜಿ.ಎಂ. ಲಕ್ಷ್ಮಣಗೌಡ ಮುಂತಾದವರು ಉಪಸ್ಥಿತರಿದ್ದರು.

ಶ್ರೀಮತಿ ದಾಕ್ಷಾಯಿಣಿ ಪ್ರಾರ್ಥನೆ ಮಾಡಿದರು. ಎಂ.ಎಸ್. ನಾಗರಾಜು ಸ್ವಾಗತಿಸಿ, ಆರ್. ಪ್ರಕಾಶ್ ವಂದಿಸಿದರು, ನವೀನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.


Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ