ವಿ.ಎಂ.ಪಿ.ಎಂ. ಟ್ರಸ್ಟ್ ಮೂಡಿಗೆರೆ (ವಸ್ತಾರೆ ದಿ. ಮಂಜಮ್ಮ ಮತ್ತು ದಿ. ಪುಟ್ಟಸ್ವಾಮಿ ಸ್ಮರಣಾರ್ಥ ಸೇವಾ ಟ್ರಸ್ಟ್) ವತಿಯಿಂದ ಇತ್ತೀಚೆಗೆ ವಿಶ್ವಜಲದಿನ ಆಚರಣೆ ಮತ್ತು ಕಾನೂನು ಅರಿವು ಶಿಬಿರ ಏರ್ಪಡಿಸಲಾಗಿತ್ತು.
ಮೂಡಿಗೆರೆ ಸಮೀಪದ ಬಿಳಗುಳ ನೇತಾಜಿ ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಮೂಡಿಗೆರೆ ನ್ಯಾಯಾಲಯದ ಹಿರಿಯ ನ್ಯಾಯಾದೀಶರಾದ ಶ್ರೀ ಜಯಪ್ರಕಾಶ್ ವಿ ಅವರು ನೀರಿನ ಸಂರಕ್ಷಣೆಯ ಅಗತ್ಯತೆ ಮತ್ತು ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಮೂಡಿಗೆರೆ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾದೀಶರಾದ ಶ್ರೀ ವಿಶ್ವನಾಥ್ ರವರು, ಹೆಸಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಂದ ಕೃಷ್ಣಮೂರ್ತಿ, ಮೂಡಿಗೆರೆ ವಕೀಲರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು, ವಿವಿಧ ಸಂಘಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು.
ಟ್ರಸ್ಟ್ ಅಧ್ಯಕ್ಷರಾದ ವಿ.ಪಿ. ನಾರಾಯಣ್ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಾರ್ಯದರ್ಶಿ, ವಕೀಲೆ ಭಾಗ್ಯ ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು.
ವಿಶ್ವ ಜಲಸಂರಕ್ಷಣೆ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಜಲಸಂರಕ್ಷಣೆ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು ಮತ್ತು ಕರಪತ್ರಗಳನ್ನು ಹಂಚಲಾಯಿತು.



