ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಬಿ.ಬಿ.ನಿಂಗಯ್ಯ ತಮ್ಮ ನಾಮಪತ್ರ ವಾಪಾಸ್ಸು ಪಡೆದಿದ್ದಾರೆ.
ಇಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು ಬಿ.ಬಿ.ನಿಂಗಯ್ಯ ಕಣದಿಂದ ಹಿಂದಕ್ಕೆ ಸರಿದಿದ್ದಾರೆ. ಇದರೊಂದಿಗೆ ಮೂಡಿಗೆರೆ ಕ್ಷೇತ್ರದಲ್ಲಿ 9 ಮಂದಿ ಸ್ಪರ್ಧಾ ಕಣದಲ್ಲಿ ಉಳಿದುಕೊಂಡಿದ್ದಾರೆ.

ಜೆ.ಡಿ.ಎಸ್.ನಿಂದ ಟಿಕೆಟ್ ವಂಚಿತರಾಗಿದ್ದ ಬಿ.ಬಿ. ನಿಂಗಯ್ಯ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂತೆಗೆದುಕೊಂಡ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಬಿ.ಬಿ.ನಿಂಗಯ್ಯ ಅವರು ನನ್ನ ಹಿತೈಷಿಗಳು, ಬೆಂಬಲಿಗರು, ಕುಟುಂಬದವರ ಅಭಿಪ್ರಾಯದ ಮೇರೆಗೆ ನಾಮಪತ್ರ ವಾಪಾಸ್ಸು ಪಡೆದಿದ್ದೇನೆ. ನಾನು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ.
ನನ್ನನ್ನು ಬೆಂಬಲಿಸಿರುವ ಮುಖಂಡರು, ಹಿರಿಯರ ಜೊತೆ ಚರ್ಚಿಸಿ ಒಂದೆರಡು ದಿನದಲ್ಲಿ ನನ್ನ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳುತ್ತೇನೆ ಎಂದಿದ್ದಾರೆ.
ಇದೀಗ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಒಂಬತ್ತು ಮಂದಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ.
ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ಕಣದಲ್ಲಿರುವ ಅಭ್ಯರ್ಥಿಗಳ ವಿವರ
1.ಪಕ್ಷ- ಜೆಡಿಎಸ್
ಎಂ.ಪಿ ಕುಮಾರ್ ಸ್ವಾಮಿ ಬಿನ್ ಲೇಟ್ ಪುಟ್ಟಯ್ಯ 65 ವರ್ಷ ಪ.ಜಾ. ಜನಾಂಗ, ವಾಸ ಕೆಲ್ಲೂರು ಗ್ರಾಮ ಕಸಬಾ ಹೋಬಳಿ ಮೂಡಿಗೆರೆ ತಾಲ್ಲೂಕು.
2. ಪಕ್ಷ -ಬಿಜೆಪಿ

ದೀಪಕ್ ದೊಡ್ಡಯ್ಯ ಬಿನ್ ದೊಡ್ಡಯ್ಯ 57 ವರ್ಷ ಪ.ಜಾ. ವಾಸ B31, 1ನೆ ಹಂತ, CUDA ಲೆ ಔಟ್ ಕಲ್ಯಾಣ ನಗರ ಚಿಕ್ಕಮಗಳೂರು.
3. ಪಕ್ಷ — ಕಾಂಗ್ರೆಸ್

ನಯನ ಜ್ಯೋತಿ ಜವಾರ್ ಕೋಂ ಬಿಕಾಸ್ ಜಾವರ್ 43 ವರ್ಷ ಪ.ಜಾ. ವಾಸ ವಾರ್ಡ್ ಸಂಖ್ಯೆ 1 ಗುಲ್ಲನ್ ಪೇಟೆ ರಸ್ತೆ, ಮೂಡಿಗೆರೆ ಪಟ್ಟಣ ಮೂಡಿಗೆರೆ ತಾಲ್ಲೂಕು.
4. ಪಕ್ಷ – ಆಮ್ ಆದ್ಮಿ ಪಾರ್ಟಿ
ಪ್ರಭು ಸಿ.ಬಿನ್ ಜಿ ಚಂದ್ರು, ಪ.ಜಾ, 29 ವರ್ಷ, ಡೋರ್ ನಂಬರ್ 251, 2ನೇ ತಿರುವು, 4ನೆ ಹಂತ, ಕಲ್ಯಾಣ ನಗರ ಚಿಕ್ಕಮಗಳೂರು
5. ಪಕ್ಷ – ಬಹುಜನ ಸಮಾಜವಾದಿ ಪಕ್ಷ

ಲೋಕವಳ್ಳಿ ರಮೇಶ್ ಬಿನ್ ಲೇಟ್ ಬೊಮ್ಮಯ್ಯ, 49 ವರ್ಷ ಪ.ಜಾ. ವಾಸ ಲೋಕವಳ್ಳಿ ಗ್ರಾಮ ಕಸಬಾ ಹೋಬಳಿ ಮೂಡಿಗೆರೆ ತಾಲ್ಲೂಕು
6. ಪಕ್ಷ-ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ

ಅಂಗಡಿ ಚಂದ್ರು ಬಿನ್ ಸಿದ್ದಯ್ಯ 43 ವರ್ಷ, ಪ.ಜಾ. ವಾಸ ಅಂಗಡಿ ಗ್ರಾಮ ಗೋಣಿ ಬೀಡು ಹೋಬಳಿ ಮೂಡಿಗೆರೆ ತಾಲ್ಲೂಕು
7. ಪಕ್ಷ- ಕಮಿನಿಸ್ಟ್ ಪಾರ್ಟಿ ಆಫ್ ಇಂಡಿಯಾ

ಕೆಳ ಗೂರು ರಮೇಶ್ ಬಿನ್ ಲೇಟ್ ಅಂತೂ, 39 ವರ್ಷ, ಪ.ಜಾ, ವಾಸ ಜಾವಳಿ ಕೆಳಗೂರು, ಬಾಳುರೂ ಹೋಬಳಿ, ಮೂಡಿಗೆರೆ ತಾಲ್ಲೂಕು.
8.ಪಕ್ಷ – ಪಕ್ಷೇತರ
ಚೇತನ್ ಪ್ರಸಾದ್ ಎಲ್. ಬಿನ್ ಕೆ.ಲಕ್ಷ್ಮಣ, 26 ವರ್ಷ, ಪ.ಜಾ.ವಾಸ ಚೌಡೇಶ್ವರಿ ಬೀದಿ, ರಾಮನಹಳ್ಳಿ ಚಿಕ್ಕಮಗಳೂರು.
9. ಪಕ್ಷ -ಪಕ್ಷೇತರ

ರುದ್ರೇಶ್ ಕಹಳೆ ಬಿನ್ ಹಲಗಯ್ಯಾ 36 ವರ್ಷ, ಪ.ಜಾ.ವಾಸ ಹಾರೋಶಿವನಹಳ್ಳಿ ಗ್ರಾಮ ಯುಹಂಬಳ್ಳಿ ಹೋಬಳಿ, ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ.
ಈ ಸರ್ತಿ ನೀವೆಲ್ಲಾ ಸೇರಿ ಕಾಂಗ್ರೇಸ್ ಗೆ ಓಟ್ ಹಾಕ್ಬೇಕು : ಜೆ.ಡಿ.ಎಸ್. ನ ಎಸ್.ಎಲ್. ಬೋಜೇಗೌಡರ ವಿಡಿಯೋ ವೈರಲ್



