ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್, ಲೀಜನ್ ಹಾಗೂ ಜೆಸಿಐ ಮೂಡಿಗೆರೆ ಇವರ ವತಿಯಿಂದ “ವಿದ್ಯಾರ್ಥಿ ಮಿತ್ರ” ವೃತ್ತಿ ಶಿಕ್ಷಣ ಮಾರ್ಗದರ್ಶನ ಕಾರ್ಯಾಗಾರ ನೆರವೇರಿತು. ಮೂಡಿಗೆರೆ ಜೇಸಿಐ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಯಮಿ ಮೋಹನ್ ಲಾಲ್ ಜೈನ್ ಅವರು ಉದ್ಘಾಟಿಸಿದರು. ಸೀನಿಯರ್ ಛೇಂಬರ್ ಅಧ್ಯಕ್ಷ ಎನ್.ಎಲ್. ಪುಣ್ಯಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ನಿರ್ದೇಶಕ ಬಿ.ಎನ್. ಮನಮೋಹನ್ ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಾಸನ ಸಿ.ಇ.ಟಿ. ಸೆಂಟರ್ ನ ಪ್ರಾಂಶುಪಾಲರು ಮತ್ತು ನೋಡಲ್ ಅಧಿಕಾರಿ ಸುರೇಶ್ ಅವರು ಸಿ.ಇ.ಟಿ. ಐಚ್ಚಿಕ ಕೋರ್ಸ್ ಮತ್ತು ಸೀಟು ಆಯ್ಕೆ ಬಗ್ಗೆ ಮಾಹಿತಿ ನೀಡಿದರು. ಚಿಕ್ಕಮಗಳೂರು ಸರ್ಕಾರಿ ವೈದ್ಯಕೀಯ ಕಾಲೇಜಿನ ಪ್ರಾದ್ಯಾಪಕರಾದ ಡಾ. ಲೋಹಿತ್ ಕುಮಾರ್ ಅವರು ಎಂ.ಬಿ.ಬಿ.ಎಸ್. ಮತ್ತು ಪ್ಯಾರಾ ಮೆಡಿಕಲ್ ಕೋರ್ಸ್ ಆಯ್ಕೆ ಬಗ್ಗೆ ಮಾಹಿತಿ ನೀಡಿದರು. ಮೂಡಿಗೆರೆ ತೋಟಗಾರಿಕಾ ಮಹಾವಿದ್ಯಾಲಯದ ಪ್ರಾದ್ಯಾಪಕ ಡಾ. ಭರತ್ ಕುಮಾರ್ ಅವರು ಅಗ್ರಿಕಲ್ಚರ್, ಹಾರ್ಟಿಕಲ್ಚರ್ ಮುಂತಾದ ಕೋರ್ಸ್ ಆಯ್ಕೆ ಬಗ್ಗೆ ಮಾಹಿತಿ ನೀಡಿದರು. ಹಾಸನದ ನವ್ ಕೀಸ್ ಕಾಲೇಜ್ ಆಫ್ ಇಂಜಿನಿಯರ್ ಇಲ್ಲಿನ ಡಾ. ಮೈನಾ ಅವರು ತಾಂತ್ರಿಕ ಶಿಕ್ಷಣ ಕೋರ್ಸ್ ಆಯ್ಕೆ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿಯಾಗಿ ಮೂಡಿಗೆರೆ ಜೇಸಿಐ ನ ಅಧ್ಯಕ್ಷೆ ಸವಿತಾ ರವಿ ಭಾಗವಹಿಸಿದ್ದರು.
ಸೀನಿಯರ್ ಛೇಂಬರ್ ಕಾರ್ಯದರ್ಶಿ ಪ್ರದೀಪ್ ದುಂಡುಗ, ಖಜಾಂಚಿ ಕೆ.ಎಲ್.ಎಸ್. ತೇಜಸ್ವಿ, ಯುರೇಕಾ ಅಕಾಡೆಮಿಯ ದೀಪಕ್ ದೊಡ್ಡಯ್ಯ, ಸೀನಿಯರ್ ಛೇಂಬರ್ ಸದಸ್ಯರು ಮತ್ತು ಜೇಸಿಐ ಮೂಡಿಗೆರೆ ಪೂರ್ವಾಧ್ಯಕ್ಷರುಗಳು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗಪಡಿಸಿಕೊಂಡರು.



