online

 

 

ಆನ್‌ಲೈನ್‌ ಮೋಸದ ಜಾಲಕ್ಕೆ ನಮ್ಮ ಕಾಫಿನಾಡಿನಲ್ಲಿ ಯುವಕನೋರ್ವ ಬಲಿಪಶುವಾಗಿರುವ ಘಟನೆ ನಡೆದಿದೆ. ಆನ್ ಲೈನ್ ನಲ್ಲಿ ಬಂದ ಕರೆ ಮತ್ತು ಸಂದೇಶವನ್ನು ನಂಬಿ ಯುವಕ ಬರೋಬ್ಬರಿ 29 ಲಕ್ಷ ಕಳೆದುಕೊಂಡಿದ್ದಾನೆ. 25 ಲಕ್ಷದ ಎಕ್ಸ್ ಯು ವಿ ಕಾರ್ ಕೇವಲ 11 ಲಕ್ಷಕ್ಕೆ ನಿಮಗೆ ಲಾಟರಿ ಮೂಲಕ ಬಂದಿದೆ ಎಂದು ಬಂದ ಕರೆ ಮತ್ತು ಸಂದೇಶದ ಮೋಸದ ಜಾಲ ಯುವಕನನ್ನು ಬೀದಿಪಾಲು ಮಾಡಿದೆ.

ಚಿಕ್ಕಮಗಳೂರು ನಗರದ ಹೊರವಲಯದ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುವ ಯುವಕ ಮೋಸಹೋಗಿರುವಾತ. ಕಾರಿನ ಆಸೆಗೆ 11 ಲಕ್ಷ ಕಳೆದುಕೊಂಡಾತ ನಂತರ ಆ ಹಣವನ್ನು ಮತ್ತೆ ಗಳಿಸಲು ಕ್ಯಾಸಿನೋ ಆಡಲು ಹೋಗಿ ಅದರಲ್ಲಿ 18 ಲಕ್ಷ ಕಳೆದುಕೊಂಡಿದ್ದಾನೆ.

ಎಸ್ ಎಸ್ ಎಲ್ ಸಿ ವಿದ್ಯಾಭ್ಯಾಸ ಮಾಡಿರುವ  ಯುವಕನಿಗೆ ಒಂದು ತಿಂಗಳ ಹಿಂದೆ ಮೊಬೈಲ್ ಪೋನ್ ಗೆ ಕರೆ ಬಂದಿದೆ. ಆ ಕಡೆಯಿಂದ ಫೋನ್ ಮಾಡಿದ ಹುಡುಗಿ ಲಕ್ಕಿ ಡಿಪ್‍ನಲ್ಲಿ ನಿಮ್ಮ ನಂಬರ್ ಡ್ರಾ ಆಗಿದೆ.

25 ಲಕ್ಷದ ಎಸ್.ಯು.ವಿ. 500 ಕಾರು ನಿಮಗೆ ಕೇವಲ 11 ಲಕ್ಷಕ್ಕೆ ಸಿಗಲಿದೆ ಅಂತ ಫೋನ್ ಮಾಡದ್ದೇ ತಡ ಪೆಟ್ರೋಲ್ ಬಂಕ್ ದುಡ್ಡಲ್ಲಿ  11 ಲಕ್ಷ ಹಣವನ್ನು ಬ್ಯಾಂಕಿಗೆ ಹೋಗಿ ಆ ಹುಡುಗಿ ಹೇಳಿದ ಅಕೌಂಟ್ ನಂಬರ್ ಗೆ ಹಣ ಹಾಕಿದ್ದೇನೆ.

ನಂತರ ಆ ಹುಡುಗಿ ಫೋನ್ ಮಾಡಿದ್ದ ನಂಬರ್‍ಗೆ ಎಷ್ಟೇ ಕಾಲ್ ಮಾಡಿದ್ರೆ ಪಿಕ್ ಮಾಡೋರೆ ಗತಿ ಇಲ್ಲ. ಯಾರ್ದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡೋಕೆ ಅಂತ ದುಡ್ಡ್ ಕೊಟ್ಟು ಆಸೆಗಣ್ಣಿನಿಂದ ಕಾರಿನ ದಾರಿ ಕಾಯ್ತಿದ್ದ ಯುವಕ ಮೋಸಹೋಗಿರುವುದು ಗೊತ್ತಾಗಿ ಕಂಗಾಲಾಗಿದ್ದ.

ಪೆಟ್ರೋಲ್ ಬಂಕ್ ಮಾಲೀಕರು ಸಂಬಂಧಿಕರಿಗೆ ಹುಷಾರಿಲ್ಲ ಎಂದು ಕೆಲ ದಿನಗಳು ಹೊರ ಹೋಗಿದ್ದಾಗ ಇವನು ಪೆಟ್ರೋಲ್ ಬಂಕ್ ಹಣವನ್ನು ದುರುಪಯೋಗಮಾಡಿಕೊಂಡಿದ್ದ. ಆ ನಂತರ ಈ ಹಣವನ್ನು ಹೇಗಾದರೂ ಮಾಡಿ ಮರಳಿ ಗಳಿಸಬೇಕು ಎಂದು ಆನ್ ಲೈನ್ ನಲ್ಲಿ ಕ್ಯಾಸಿನೋ ಆಡಲು ಶುರು ಮಾಡಿದ್ದಾನೆ. ಅದಕ್ಕೂ ಕೂಡ ಪೆಟ್ರೊಲ್ ಬಂಕ್ ಹಣವನ್ನು ಬಳಸಿದ್ದಾನೆ. ಆಡುತ್ತಾ ಆಡುತ್ತಾ ಬರೋಬ್ಬರಿ 19 ಲಕ್ಷ ಹಣವನ್ನು ಕಳೆದುಕೊಂಡಿದ್ದಾನೆ.

ಸೆನ್ ಸ್ಟೇಷನ್ ಗೆ ದೂರು ನೀಡಿರುವ ಯುವಕಅಯ್ಯೋ ದೇವ್ರೇ, ಹೀಗಾಯ್ತಲ್ಲ ಅಂತ  ತಲೆ ಕೆಡಿಸಿಕೊಂಡು ಡಿಪ್ರೆಷನ್‍ಗೆ ಹೋಗಿದ್ದಾನೆ. ನಂತರ ನಗರದ ಸೈಬರ್ ಕ್ರೈಮ್ ಪೊಲೀಸ್ ಸ್ಟೇಷನ್ ಗೆ ದೂರು ನೀಡಿದ್ದಾನೆ. 21 ಲಕ್ಷ ಅಂತ ಸೆನ್ ಸ್ಟೇಷನ್‍ಗೆ ದೂರು ನೀಡಿದ್ದಾನೆ. ಅಲ್ಲಿ ಪೊಲೀಸರು ತನಿಖೆ ವೇಳೆ ಬಿಡಿಸಿ-ಬಿಡಿಸಿ ಕೇಳಿದಾಗ ಎಲ್ಲೆಲ್ಲಿ ಎಷ್ಟೆಷ್ಟು ಕಳೆದುಕೊಂಡಿದ್ದೇನೆ ಅನ್ನೋದು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾನೆ.

ಅಲ್ಲಿ ಸಂಬಂಧಿಕರಿಗೆ ಹುಷಾರಿಲ್ಲ ಅಂತ ಹೋಗಿದ್ದ ಬಂಕ್ ಮಾಲೀಕ ವಾಪಸ್ ಬಂದಾಗ ಪೆಟ್ರೋಲ್ ಬಂಕ್ ಸ್ಥಿತಿ ನೋಡಿ   ಕಂಗಾಲಾಗಿದ್ದಾರೆ. ಬಂಕ್ ನಲ್ಲಿ 29 ಲಕ್ಷ ಹಣ ಇಲ್ಲದೇ ಇರುವುದು ಮಾಲೀಕನಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಈ ಪ್ರಕರಣದ ಬಗ್ಗೆ ಖುದ್ದು ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರೇ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇತ್ತೀಚೆಗಷ್ಟೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಇಂತಹ ಆನ್ ಲೈನ್ ಮೋಸದ ಬಗ್ಗೆ ಜಾಗೃತರಾಗಿರಬೇಕು ಎಂದು ಜನರಲ್ಲಿ  ಮನವಿ ಮಾಡಿದ್ದರು. ಆದರೆ ಜನ ಮೋಸ ಹೋಗುವುದು ಕಡಿಮೆಯಾಗಿಲ್ಲ.   ಈ ರೀತಿ ಆಫರ್ ಮೇಲೆ ಆಫರ್ ನೀಡೋ ಕರೆಗಳ ಬಗ್ಗೆ ಜನ ಎಚ್ಚರದಿಂದಿರಬೇಕು. ಕುಲ-ಗೊತ್ರ ಇಲ್ಲದ ಆನ್‍ಲೈನ್ ಫೋನ್ ಬಗ್ಗೆ ಹುಷಾರು. ಇಲ್ಲವಾದರೆ ಮೋಸ ಹೋಗುವುದು ಖಂಡಿತ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ