anaatha

 

 

ಮೂಡಿಗೆರೆ ಪಟ್ಟಣದ ಬಿಳಗುಳದಲ್ಲಿ ಅನಾಥವಾಗಿ ತಿರುಗಾಡುತ್ತಿದ್ದ ಮತ್ತು ಮಾನಸಿಕವಾಗಿ ಅಸ್ವಸ್ಥರಂತೆ ಕಾಣುವ ವ್ಯಕ್ತಿಯೊಬ್ಬರನ್ನು ಸ್ಥಳೀಯ ಸಮಾಜಸೇವಕರು ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಮುನಿಂದ್ರಪಾಲ್ ಎಂದು ಹೇಳುವ ವ್ಯಕ್ತಿ ಹಿಂದಿ ಮಾತನಾಡುತ್ತಿದ್ದು, ಅನಾಥವಾಗಿ ತಿರುಗುತ್ತಿದ್ದರು. ಇದನ್ನು ಗಮನಿಸಿದ ಕಾಫೀನಾಡು ಸಮಾಜ ಸೇವಕರಾದ ಅಸೈನಾರ್ ಬಿಳಗುಳ, ಮುಸ್ತಾಕ್ ಬಿಳಗುಳ, ಫಾರುಖ್ ಬಿಳಗುಳ, ಶ್ರೀಧರ್ ಆಚಾರ್ ಬಿಳಗುಳ ಅವರನ್ನು ಕರೆದು ಊಟನೀಡಿ ಉಪಚರಿಸಿದ್ದಾರೆ. ನಂತರ ಮೂಡಿಗೆರೆ ಸುಂಡಕೆರೆ ಹಳ್ಳಕ್ಕೆ ಕರೆದುಕೊಂಡು ಹೋಗಿ, ಕ್ಷೌರ ಮಾಡಿ, ಸ್ನಾನ ಮಾಡಿಸಿ, ಬಟ್ಟೆ ತೊಡಿಸಿ ಹಾಗೂ ಮೈಮೇಲೆ ತರಚಿದ ಗಾಯಗಳಿದ್ದರಿಂದ, ಮೂಡಿಗೆರೆಯ ಎಂ. ಜಿ. ಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಸೇವಕರಾದ ಅಸೈನಾರ್ ಬಿಳಗುಳ ಅವರು ಈ ವ್ಯಕ್ತಿ ಬೇರೆ ರಾಜ್ಯದವರಂತೆ ತೋರುತ್ತಿದ್ದಾರೆ. ಅವರ ವಿಳಾಸ ಹುಡುಕಿ ಕುಟುಂಬದವರ ಸಂಪರ್ಕಕ್ಕೆ ಪ್ರಯತ್ನಿಸಲಾಗುವುದು. ಇಲ್ಲದೇ ಹೋದರೆ ಅನಾಥಾಶ್ರಮಕ್ಕೆ ಸೇರಿಸುವ ಪ್ರಯತ್ನ ನಡೆಸಲಾಗುವುದು ಎಂದಿದ್ದಾರೆ.

ಕಾಫಿನಾಡು ಸಮಾಜ ಸೇವಕರ ತಂಡ ಹೀಗೆ ಅನಾಥ ಮತ್ತು ಅಸ್ವಸ್ಥ ವ್ಯಕ್ತಿಗಳನ್ನು ಆರೈಕೆ ಮಾಡಿ ಮಾನವೀಯ ಮೌಲ್ಯವನ್ನು ಮೆರಯುತ್ತಿದ್ದು ಇದುವರೆಗೆ ನೂರಾರು ಜನರನ್ನು ಈ ರೀತಿ ಆರೈಕೆ ಮಾಡಿ ಅನಾಥಾಶ್ರಮಗಳಿಗೆ ಸೇರಿಸಿದ್ದಾರೆ. ಇವರ ಸೇವಾ ಕಾರ್ಯಕ್ಕೆ ಜನರು ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ