kole 2

 

 

ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ ಪತಿ ಪೊಲೀಸ್ ಠಾಣೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.

ಚಿಕ್ಕಮಗಳೂರು ನಗರದ ಕ್ರಿಶ್ಚಿಯನ್ ಕಾಲೋನಿಯಲ್ಲಿ ಈ ಘಟನೆ ನಿನ್ನೆ(ಮಂಗಳವಾರ) ನಡೆದಿದೆ. ಮೃತ ಮಹಿಳೆ ಶಮಾಭಾನು(34 ವರ್ಷ).   ಶಬ್ಬೀರ್ ಅಹಮದ್ ಪತ್ನಿಯನ್ನು ಕೊಲೆ ಮಾಡಿ ಠಾಣೆಗೆ ಶರಣಾಗಿರುವಾತ.

ಇತ್ತೀಚೆಗೆ ತಾನೆ ಒಂದು ವಾರಗಳ ಕಾಲ ಪತ್ನಿ ಜೊತೆ ಗೋವಾ ರೌಂಡ್ಸ್ ಮಾಡಿಕೊಂಡು ಬಂದ ಪತಿ ಮನೆಗೆ ಬಂದ ಮರುದಿನವೇ ಪತ್ನಿಯನ್ನ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇವರಿಬ್ಬರಿಗೂ ಇದು ಎರಡನೇ ಮದುವೆ. ಶಬ್ಬೀರ್ ಮೊದಲ ಪತ್ನಿ ಕೊರೋನಾ ಸಂದರ್ಭದಲ್ಲಿ ಸಾವನ್ನಪ್ಪಿದ್ದರು. ಹಾಗೆಯೇ ಶಮಾಭಾನು ಪತಿಯೂ ತೀರಿಕೊಂಡಿದ್ದು, ಎರಡು ಮಕ್ಕಳಿದ್ದಾರೆ. ಪಿರಿಯಾಪಟ್ಟಣ ಮೂಲದ ಶಮಾ ಅವರಿಗೆ ಚಿಕ್ಕಮಗಳೂರಿನ ಶಬ್ಬೀರ್ ನೊಂದಿಗೆ ಎರಡನೇ ಸಂಬಂಧಕ್ಕೆ ಮದುವೆಯಾಗಿತ್ತು.

ಮದುವೆಯಾಗಿ ಕೆಲ ದಿನಗಳಲ್ಲಿಯೆ ಹೆಂಡತಿಗೆ ಹಿಂಸೆ ನೀಡಲು ಪ್ರಾರಂಭಿಸಿದ್ದ ಎನ್ನಲಾಗಿದೆ. ಹೆಂಡತಿಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ತವರು ಮನೆಯವರು ಶಮಾಭಾನು ಅವರನ್ನು ತವರುಮನೆಗೆ ಕರೆದೊಯ್ದು ಅಲ್ಲಿಯೇ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಾ ಸಾಕುತ್ತಿದ್ದರು ಎನ್ನಲಾಗಿದೆ.

ಆದರೆ ಇತ್ತೀಚೆಗೆ ಶಬ್ಬೀರ್ ಹೆಂಡತಿಯ ಮನೆಗೆ ಹೋಗಿ ತಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಹೇಳಿ ಪುಸಲಾಯಿಸಿ ತವರು ಮನೆಯವರನ್ನು ಒಪ್ಪಿಸಿ ಹೆಂಡತಿಯನ್ನು ಚಿಕ್ಕಮಗಳೂರಿಗೆ ಕರೆತಂದಿದ್ದ ಎನ್ನಲಾಗಿದೆ. ಹೆಂಡತಿಯನ್ನು ಕರೆದುಕೊಂಡು ಗೋವಾ ಪ್ರವಾಸಕ್ಕೆ ಹೋಗಿ ಒಂದು ವಾರ ಒಟ್ಟಾಗಿ ಸುತ್ತಾಡಿ ಬಂದಿದ್ದರು ಎಂದು ತಿಳಿದುಬಂದಿದೆ.

ಶಬ್ಬೀರನ ವರ್ತನೆಯಲ್ಲಿ ಬದಲಾವಣೆ ಕಂಡು ತನ್ನ ಮಗಳ ಸಂಸಾರ ಸರಿದಾರಿಗೆ ಬಂತು ಎಂದು ತವರು ಮನೆಯವರು ನಿಟ್ಟುಸಿರು ಬಿಟ್ಟಿದ್ದರು. ಅದರೆ ಗೋವಾ ಪ್ರವಾಸ ಮುಗಿಸಿ ಬಂದು ಮರುದಿನವೇ ಶಬ್ಬೀರ್ ತನ್ನ ಹೆಂಡತಿಯನ್ನು ಮನೆಯಲ್ಲಿಯೇ ಹೊಡೆದು ಸಾಯಿಸಿದ್ದಾನೆ. ಹೆಂಡತಿಯನ್ನು ಕೊಲೆ ಮಾಡಿ ತಾನೆ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇದರಿಂದ ಶಮಾಬಾನು ತವರುಮನೆಯವರು ಆಘಾತಕ್ಕೊಳಗಾಗಿದ್ದಾರೆ. ಶಮಾಭಾನುವಿಗೆ ಇಬ್ಬರು ಮಕ್ಕಳಿದ್ದು ಪಿ.ಯು.ಸಿ. ಮತ್ತು ಹೈಸ್ಕೂಲ್ ವ್ಯಾಸಾಂಗ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೀಗ ಆ ಮಕ್ಕಳು ತಬ್ಬಲಿಯಾಗಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ