raitha sanga

 

 

ಕಾಡಾನೆ ಮತ್ತು ಇತರೆ ಕಾಡು ಪ್ರಾಣಿಗಳ ಹಾವಳಿ ಮತ್ತು ಅನಾವೃಷ್ಟಿಯಿಂದ ರೈತರ ತೋಟಗಳು ಸರ್ವ ನಾಶವಾಗುತ್ತಿದೆ. ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತನೆ ನಡೆಸುವ ಮೂಲಕ ರೈತರ ನೆರವಿಗೆ ಬರಬೇಕೆಂದು ಕರ್ನಟಕ ರಾಜ್ಯ ರೈತ ಹಾಗೂ ಗ್ರೀನ್ ಆರ್ಮಿ ಇಂಡಿಯಾದ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಸಿ.ದಯಾಕರ್ ಬಾಳೆಹಳ್ಳಿ ಒತ್ತಾಯಿಸಿದರು.

ಶುಕ್ರವಾರ ಮೂಡಿಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಡು ಪ್ರಾಣಿಗಳಿಂದ ರೈತರು ಮತ್ತು ಸಾರ್ವಜನಿಕರು ಜೀವ ಭಯದಿಂದ ಬದುಕುವಂತಾಗಿದೆ. ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯಲ್ಲಿ ಅಮಾಯಕರು ಹಾಗೂ ಅರಣ್ಯ ಸಿಬ್ಬಂದಿ ಬಲಿಯಾಗುತ್ತಿದ್ದಾರೆ. ಇದಕ್ಕೆ ರಾಜ್ಯ ಸರಕಾರ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ಖಂಡನೀಯ. ಕಾಡಿನಲ್ಲಿ ಅರಣ್ಯ ಇಲಾಖೆ ಅವೈಜ್ಞಾನಿಕವಾಗಿ ಸಾಗುವಾನಿ, ಅಕೇಶಿಯಾ, ನೀಲಗಿರಿ ಮರಳನ್ನು ಬೆಳೆಸಿದ್ದಾರೆ. ಇದರಿಂದ ಕಾಡು ನಾಶವಾಗುವ ಜತೆಗೆ ಕಾಡು ಪ್ರಾಣಿಗಳಿಗೆ ಆಹಾರ ದೊರಕುವುದಿಲ್ಲ. ಹಾಗಾಗಿ ರೈತರ ತೋಟಗಳಿಗೆ ಕಾಡುಪ್ರಾಣಿಗಳು ದಾಂದಲೆ ಮಾಡುತ್ತಿವೆ. ರಾಜ್ಯ ಸರಕಾರ ಈ ಬಗ್ಗೆ ತಜ್ಞರ ಸಭೆ ನಡೆಸಿ 1 ತಿಂಗಳಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲು ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಕಾಡಾನೆ ಹಾವಳಿ ಸಮಸ್ಯೆಗೆ ಮುಖ್ಯಮಂತ್ರಿ ಸಿದ್ದೆರಾಮಯ್ಯ ಅವರು ಅರಣ್ಯ ಒತ್ತುವರಿ ಖುಲ್ಲಾ ಮಾಡಿಸಿ, ರೈಲ್ವೇ ಬ್ಯಾರಿಕೇಡ್‌ಗೆ 100 ಕೋಟಿ ನೀಡುತ್ತೇನೆಂದು ಹೇಳಿದ್ದಾರೆ. ಆದರೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಈ ಹಣ 50 ಕಿ,ಮೀಗೂ ಸಾಲುವುದಿಲ್ಲವೆಂದು ಹೇಳಿದ್ದಾರೆ. ಜನರ ಸಂಕಷ್ಟ ನಿವಾರಣೆ ಮಾಡಲು ಹಣವಿಲ್ಲದೇ ಗ್ಯಾರಂಟಿ ಯೋಜನೆ ಯಾಕೆ ಬೇಕಿತ್ತು ಎಂದು ಪ್ರಶ್ನಿಸಿದರ ಅವರು, ರೈತರ ಸಾಲ ಮನ್ನಾ ಮಾಡಬೇಕು. ಭತ್ತ ಬೆಳೆಯಲು ಎಕರೆಗೆ 20 ಸಾವಿರ ರೂ, ಸಾವಯವ ಕೃಷಿ ಹಾಗು ಹೈನುಗಾರಿಕೆಗೆ 15 ಸಾವಿರ ರೂ ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕರಾದ ಡಿ.ಎಸ್.ರಮೇಶ್ ದಾರದಹಳ್ಳಿ ಮಾತನಾಡಿ ; ಎಪಿಎಂಸಿ ಮಂತ್ರಿಗಳಾದ ಶಿವಾನಂದ ಪಾಟೀಲ್‌ರವರು ರೈತರಿಗೆ ಪರಿಹಾರ ಹೆಚ್ಚಿಸಿದ ಮೇಲೆ ಆತ್ಮಹತ್ಯೆ ಜಾಸಿ ್ತಆಗುತ್ತಿದೆ ಎಂದು ಬಾಲಿಶ ಹೇಳಿಕೆ ನೀಡಿರುತ್ತಾರೆ. ಹಾಗಾದರೆ ರಾಜ್ಯದ ರೈತರಲೆಲ್ಲಾ ಒಂದೊಂದು ರುಪಾಯಿ ಹಾಕಿ ಅವರಿಗೆ ಒಂದು ಕೋಟಿ ಕೊಡುತ್ತೇವೆ ಅವರು ಆತ್ಮಹತ್ಯೆ ಮಾಡಿಕೊಳ್ಳಲು ತಯಾರಿದ್ದಾರ ಎಂದು ಪ್ರಶ್ನಿಸಿದರು. ಹಾಗೆಯೇ ಸರ್ಕಾರ ಶೂನ್ಯ ಬಡ್ಡಿಯಲ್ಲಿ ರೂ. 5 ಲಕ್ಷ ಸಾಲ ನೀಡುವುದಾಗಿ ಭರವಸೆ ನೀಡಿರುವುದನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಸ್.ಪಿ.ಪ್ರಕಾಶ್ ಸತ್ತಿಗನಹಳ್ಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ