ಬ್ರಹ್ಮಶ್ರೀ ನಾರಾಯಣಗುರು ಮಲೆಯಾಳಂ ಸೇವಾ ಸಂಘ, ಬಿಳಗುಳ ಇದರ ವತಿಯಿಂದ ಶ್ರೀ ನಾರಾಯಣಗುರುಗಳ ೧೬೯ನೇ ಜಯಂತ್ಯೋತ್ಸವ ಮತ್ತು ಓಣಂ ಹಬ್ಬವನ್ನು ಇತ್ತೀಚೆಗೆ ಬಿಳಗುಳದ ಸಮುದಾಯಭವನದಲ್ಲಿ ಆಚರಿಸಲಾಯಿತು.
ಈ ವೇಳೆ ಬಿಳಗುಳ ಬ್ರಹ್ಮಶ್ರೀ ನಾರಾಯಣಗುರು ಮಲೆಯಾಳಂ ಸೇವಾ ಸಂಘದ ಅಧ್ಯಕ್ಷೆ ದಾದಾಮಣಿ ಮಾತನಾಡಿ ಪ್ರತಿವರ್ಷವೂ ಇದೇ ತಿಂಗಳಿನಲ್ಲಿ ಶ್ರೀ ನಾರಾಯಣಗುರುಗಳ ಜಯಂತಿ ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ಗುರುಗಳ ಜಯಂತಿ ಆಚರಣೆಯೊಂದಿಗೆ ಕೇರಳಿಗರ ಮುಖ್ಯ ಹಬ್ಬವಾದ ಓಣಂ ಹಬ್ಬದಾಚರಣೆಯನ್ನು ಆಚರಿಸುತ್ತಿದ್ದು ಸಮಾಜ ಭಾಂಧವರೆಲ್ಲರೂ ಒಗ್ಗೂಡಿ ಗುರುಗಳ ಜಯಂತಿ ಮತ್ತು ಓಣಂಹಬ್ಬ ಆಚರಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳೀದರು.
ಈ ವೇಳೆ ಮುಖ್ಯ ಅತಿಥಿಯಾಗಿ ಆಗಮಿಸಿದ ಯುರೇಕಾ ಅಕಾಡೆಮಿ ಸಂಸ್ಥಾಪದ ದೀಪಕ್ ದೊಡ್ಡಯ್ಯ ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರುಗಳು ಇಡೀ ಮಾನವ ಕುಲಕ್ಕೆ ಗುರುಗಳಾಗಿದ್ದು ಇವರು ಜಾತಿ, ಮತ, ಮೇಲು ಕೀಳು ಎಂಬ ಭಾವನೆಯನ್ನು ತೊರೆದು ಮಾನವರೆಲ್ಲರೂ ಒಂದೇ ಜಾತಿ, ಒಂದೇ ಮತ ಎಂಬ ತತ್ವವನ್ನು ವಿಶ್ವಕ್ಕೆ ಹೇಳಿಕೊಟ್ಟ ಮಹಾನ್ ಮಾನವತಾವಾದಿಯಾಗಿದ್ದರು. ಜೀವನದಲ್ಲಿ ಇವರ ಆದರ್ಶ ಪರಿಪಾಲಿಸಲು ನಾವೆಲ್ಲರೂ ಫಣತೊಡಬೇಕಾಗಿದೆ ಎಂದರು. ಅಲ್ಲದೆ ನೂರಾರು ವರ್ಷಗಳÀ ಹಿಂದೆ ಕೇರಳದಿಂದ ಇಲ್ಲಿಗೆ ಬಂದು ನೆಲೆಸಿ ಇದನ್ನೇ ತಮ್ಮ ಊರೆಂಬ ಭಾವನೆಯಲ್ಲಿ ಮಲೆಯಾಳಿಗರು ಇಲ್ಲಿ ಜೀವನ ನಡೆಸುತ್ತಿದ್ದು ಇಲ್ಲಿನ ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡಿರುವುದು ಸ್ತುತ್ಯಾರ್ಹ. ಅದರೊಂದಿಗೆ ಮಲೆಯಾಳಿಗಳು ತಮ್ಮ ಸಮುದಾಯದಿಂದ ಆಚರಿಸಲ್ಪಡುವÀ ಹಬ್ಬಗಳಾದ ಓಣಂ, ವಿಷು ಮುಂತಾದ ಹಬ್ಬಗಳಲ್ಲಿ ಸ್ಥಳೀಯರನ್ನು ಆಹ್ವಾನಿಸಿ ಸಂಭ್ರಮಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದು ತಿಳಿಸಿದರು.
ಈ ವೇಳೆ ಸದಸ್ಯರಿಗೆ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಯಿತು.
ನಾರಾಯಣಗುರು ಮಲೆಯಾಳಂ ಸೇವಾಸಂಘದ ಉಪಾದ್ಯಕ್ಷ ಬಾಲಕೃಷ್ಣ, ಪ್ರಧಾನ ಕಾರ್ಯದರ್ಶಿ ರಾಜೇಶ್, ಸಹಕಾರ್ಯದರ್ಶಿ ಬಾಸ್ಕರ್, ರವಿ.ಆರ್.ಪ್ರಕಾಶ್, ದಿವ್ಯ,ಸುರೇಶ್,ಬಿ.ಕೆ.ಪ್ರಕಾಶ್, ಗುಣಶೇಖರ್, ಕೃಷ್ಣ, ಶಶಿಕುಮಾರ್,ವೀಣಾ ಮಾಜಿ ತಾ.ಪಂ.ಅಧ್ಯಕ್ಷ ಕೆ.ಸಿ.ರತನ್,ಹೆಸ್ಗಲ್ ಗ್ರಾ.ಪಂ.ಸದಸ್ಯ ಪ್ರಶಾಂತ್,ಅಖಿಲ ಕೃಷ್ಣ,ಮತ್ತು ಸಂಘದ ಸದಸ್ಯರು ಹಾಜರಿದ್ದರು.



