anil puttegowda

 

 

ಪ್ರತಿಷ್ಟಿತ ಅಂತರಾಷ್ಟ್ರೀಯ ಸಂಸ್ಥೆ ನ್ಯಾಟ್ ವೆಸ್ಟ್ ಇಂಡಿಯಾ ಗ್ರೂಪ್ ನ (ಸ್ಟ್ರಾಟಜಿ) ಮತ್ತು ರೂಪಾಂತರ (ಟ್ರಾನ್ಸ್‌ಫಾರ್ಮೇಷನ್ )ವಿಭಾಗದ ಮುಖ್ಯಸ್ಥರಾಗಿ ಅನಿಲ್ ಪುಟ್ಟೇಗೌಡ ಅವರನ್ನು ನೇಮಕ ಮಾಡಲಾಗಿದೆ.

ಅವರು ಸಂಸ್ಥೆಯ ಬೆಂಗಳೂರು ಕಚೇರಿಯಿಂದ ಕಾರ್ಯ ನಿರ್ವಹಿಸಲಿದ್ದಾರೆ. ನ್ಯಾಟ್‌ವೆಸ್ಟ್ ಅನ್ನುವುದು ಬ್ರಿಟನ್ ಮೂಲದ ಅಂತಾರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆಯಾಗಿದೆ.

ಕಾಫಿನಾಡಿನವರಾದ  ಅನಿಲ್ ಪುಟ್ಟೇಗೌಡ ಅವರಿಗೆ ಈ ವಲಯದಲ್ಲಿ ಸುಮಾರು 30 ವರ್ಷಗಳ ಅನುಭವವಿದ್ದು, ಅವರು ಈ ಹಿಂದೆ ಜೆ.ಪಿ ಮೋರ್ಗಾನ್, ಎಎನ್ ಜೆಡ್,  ಬ್ಯಾಂಕ್ ಆಫ್ ಅಮೆರಿಕದಂಥ  ಪ್ರಖ್ಯಾತ ಬ್ಯಾಂಕಿಂಗ್

ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಸೆಟ್,  ವೆಲ್ತ್ ಮ್ಯಾನೇಜ್‌ಮೆಂಟ್, ಜಾಗತಿಕ  ಮಾರುಕಟ್ಟೆ, ಟ್ರೇಡಿಂಗ್ ಸೇರಿದಂತೆ  ಹಲವು ವಿಭಾಗಗಳನ್ನು ಯಶಸ್ವಿಯಾಗಿ  ನಿರ್ವಹಿಸಿದ್ದಾರೆ.

ಅನಿಲ್ ಪುಟ್ಟೇಗೌಡ ನಮ್ಮ ಕಾಫಿನಾಡಿನವರು. ಸಕಲೇಶಪುರ ತಾಲ್ಲೂಕು ಹಾನುಬಾಳು ಹೋಬಳಿ ದೇವಾಲಕೆರೆ ಗ್ರಾಮದ ಕಾಫಿ ಬೆಳೆಗಾರರಾದ ಪುಟ್ಟೇಗೌಡ ಮತ್ತು ಜಲಜಾ ಅವರ ಪುತ್ರ.

ಕಾಫಿನಾಡಿನ ಕೃಷಿಕ ಕುಟುಂಬದಿಂದ ಬಂದ ಅನಿಲ್ ಪುಟ್ಟೆಗೌಡ ಇಂದು ತನ್ನ ಪ್ರತಿಭೆ ಮತ್ತು ಶ್ರದ್ಧೆಯಿಂದ ಅಂತರಾಷ್ಟ್ರೀಯ ಪ್ರತಿಷ್ಠಿತ ಬ್ಯಾಂಕಿಂಗ್ ಸಂಸ್ಥೆಯೊಂದರ ಬಹುಮುಖ್ಯ ಹುದ್ದೆಗೆ ಏರಿದ್ದಾರೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ