nagara3

 

 

ಮನೆಯ ಹೊರಗೆ ಬಿಚ್ಚಿಟ್ಟಿದ ಶೂ ಒಳಗೆ ನಾಗರ ಹಾವೊಂದು ಅಡಗಿ ಕುಳಿತು ಶೂ ಧರಿಸಲು ಹೋದಾಗ ಹೊರಬಂದು ಹೆಡೆ ಬಿಚ್ಚಿದ ಘಟನೆ ನಡೆದಿದೆ.

ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ನೆಲ್ಯಹುದಿಕೆರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ನೆಲ್ಯಹುದಿಕೆರಿ ಗ್ರಾಮದ ಶಾಲಿ ಎಂಬುವವರು ಎಂದಿನಂತೆ ತಮ್ಮ ಮನೆಯ ಹೊರಗೆ ಶೂ ಬಿಚ್ಚಿಟ್ಟಿದ್ದರು. ನಿನ್ನೆ ಬೆಳಿಗ್ಗೆ ಹೊರಹೋಗಲೆಂದು ಶೂ ಗೆ ಕೈ ಹಾಕಿದಾಗ ಶೂ ಒಳಗೆ ಅಡಗಿ ಕುಳಿತ್ತಿದ್ದ ಮಧ್ಯಮ ಗಾತ್ರದ ನಾಗರಹಾವೊಂದು ಹೆಡೆ ಎತ್ತಿದೆ. ಇದರಿಂದ ಶಾಲಿ ಅವರು ಭಯಬೀತರಾಗಿ ಬೆಚ್ಚಿಬಿದ್ದಿದ್ದಾರೆ.

ಹಾವು ಸುಮಾರು ಹೊತ್ತು ಅದೇ ಸ್ಥಿತಿಯಲ್ಲಿ ನಿಂತಿದೆ. ನಂತರ ಸಮೀಪದಲ್ಲೇ ಇದ್ದ ಸ್ನೇಕ್ ಸುರೇಶ್ ಪೂಜಾರಿ ಎಂಬುವವರಿಗೆ ಕರೆ ಮಾಡಿ ಹಾವನ್ನು ಹಿಡಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ಮನೆನಾಡು ಭಾಗದಲ್ಲಿ ಮನೆಪಕ್ಕದಲ್ಲಿ ತೋಟ ಕಾಡು ಪ್ರದೇಶ ಸರ್ವೇ ಸಾಮಾನ್ಯವಾಗಿದೆ. ಮನೆ ಬಳಿಗೆ ಬರುವ ಹಾವು ಮತ್ತು ವಿಷಜಂತುಗಳು ಶೂ ಒಳಗೆ, ಮನೆಯ ಒಳಗೆ ನುಸುಳು ಅಡಗಿ ಕುಳಿತುಕೊಳ್ಳುತ್ತವೆ. ಆದ್ದರಿಂದ ಶೂ ಧರಿಸುವಾಗ ಯಾವಾಗಲೂ ಒಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ ಹಾಕಿಕೊಳ್ಳುವುದು ಸುರಕ್ಷಿತ. ಮಕ್ಕಳಿಗೂ ಈ ಬಗ್ಗೆ ತಿಳಿಹೇಳುವುದು ಅವಶ್ಯಕ. ಇಲ್ಲವಾದರೆ ಪ್ರಾಣಾಪಾಯ ಎದುರಾಗುವ ಸಾಧ್ಯತೆ ಇರುತ್ತದೆ.

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ