ಬೋಧಿಸತ್ವ ಡಾ. ಬಾಬಾಸಾಹೇಬ್ ಭೀಮರಾವ್ ರಾಮ್ ಜಿ ಅಂಬೇಡ್ಕರ್ ರವರು 1954ನೇ ಇಸವಿಯಲ್ಲಿ ಸ್ಥಾಪಿಸಿದ ಭಾರತೀಯ ಬೌದ್ಧ ಮಹಾಸಭಾ (Buddhist Society of India)ದ ಚಿಕ್ಕಮಗಳೂರು ಜಿಲ್ಲಾ ಸಮಿತಿಯನ್ನು ರಚಿಸುವ ಸಂಬಂಧವಾಗಿ ಪೂರ್ವಭಾವಿ ಸಭೆಯನ್ನು ಇದೆ 19. 9 .2023 ಮಂಗಳವಾರ ಮಧ್ಯಾಹ್ನ 3.30ಕ್ಕೆ ಸರಿಯಾಗಿ ರಾಜ್ ವಿಲ್ಲಾಸ್ ಹೋಂಸ್ಟೇ ಗಾಲ್ಫ್ ಕ್ಲಬ್ ರಸ್ತೆ, ಅಲ್ಲಂಪುರ, ಚಿಕ್ಕಮಗಳೂರು ಇಲ್ಲಿ ಕರೆಯಲಾಗಿದೆ.
ಈ ಸಭೆಗೆ ಅಂಬೇಡ್ಕರ್ ಅಭಿಮಾನಿಗಳು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ. ಎಸ್. ಅನಂತ ತಿಳಿಸಿದ್ದಾರೆ.
ಆಸಕ್ತರು ಮೊಬೈಲ್ ಸಂಖ್ಯೆ 7019576964 ಅಥವಾ9448657685 ರನ್ನು ಸಂಪರ್ಕಿಸುವಂತೆ ಹಾಗೂ ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆ ನೀಡುವಂತೆ ವಿನಂತಿಸಿದ್ದಾರೆ.



